ತಮಿಳು ರಾಕರ್ಸ್.ಕಾಮ್ ಇದೊಂದು ಕಡಲ್ಗಳ್ಳತನ ವೆಬ್ಸೈಟ್ ಆಗಿದ್ದು ಇತ್ತೀಚಿನ ತಮಿಳು,ತಲುಗು,ಕನ್ನಡ,ಮಲಯಾಳಂ ಬಾಲಿವುಡ್ ಚಲನಚಿತ್ರಗಳನ್ನು ಆನ್ಲೈನ್ ನಲ್ಲಿ ಹೆಚ್.ಡಿ ಡೌನ್ಲೋಡ್ ಒದಗಿಸುತ್ತದೆ. ವಿಪರ್ಯಾಸವೆಂದರೆ ದಕ್ಷಿಣ ಭಾರತದ ಚಲನಚಿತ್ರ ಅಭಿಮಾನಿಗಳಲ್ಲಿ ಈ ಅಪ್ಲಿಕೇಶನ್ ಬಹಳ ಜನಪ್ರಿಯವಾಗಿದೆ.
ಕಳೆದ ವರ್ಷ ರಜನಿಕಾಂತ್ ಅವರ ರೋಬೋ 2.0 ಸಿನಿಮಾವನ್ನು ನಂವೆಂಬರ್ ತಿಂಗಳಲ್ಲಿ ಲೀಕ್ ಮಾಡುತ್ತೇವೆ ಎಂಬ ಹೇಳಿಕೆ ನೀಡುವ ಮೂಲಕ ಹೊಸ ಸಿನಿಮಾಗಳಿಗೆ ವಿಲನ್ ಆಗಿರುವ ತಮಿಳು ರಾಕರ್ಸ್ ವೆಬ್ಸೈಟ್ ಬೆದರಿಕೆಯೊಡ್ಡಿತ್ತು. ಚಿತ್ರತಂಡ ಮುಂಜಾಗೃತ ಕ್ರಮವಾಗಿ ಮದರಾಸು ಹೈಕೋರ್ಟ್ ಮೊರೆ ಹೋಗಿ ಯಾವುದೇ ವೆಬ್ಸೈಟ್ನಲ್ಲಿ ಪ್ರಸಾರವಾಗದಂತೆ ನಿರ್ಭಂಧ ಹೇರಿತ್ತು ಆದರೆ ಇದ್ಯಾವುದಕ್ಕೂ ತಲೆ ಕೆಡಿಸಿಕೊಳ್ಳದ ತಮಿಳ್ ರಾಕರ್ಸ್ ರೋಬೋ ಸಿನಿಮಾ ಬಿಡುಗಡೆಯಾದ ದಿನವೇ ಚಿತ್ರವನ್ನು ಲೀಕ್ ಮಾಡಿತ್ತು.
ಸಾವಿರಾರು ತಂತ್ರಜ್ಞರು ಮತ್ತು ಕಲಾವಿದರ ಪರಿಶ್ರಮ,ಕೋಟಿ-ಕೋಟಿ ಬಂಡವಾಳ ಸುರಿಯುವ ನಿರ್ಮಾಪಕರ ಕನಸು ನೀರಿನಲ್ಲಿ ಹೋಮ ಮಾಡಿದಂತೆ ಮಾಡಿರುವ ಈ ಕುಖ್ಯಾತ ವೆಬ್ಸೈಟ್ ಗೆ ಸಾವಿರಾರು ಜನ ಫಾಲೋವರ್ಸ್ ಇರುವುದು ದುಃಖದ ವಿಚಾರ.
ನಂತರ ಬಾಹುಬಲಿ ಪ್ರಭಾಸ್ ಅಭಿನಯದ ಸುಮಾರು 350 ಕೋಟಿಗೂ ಅಧಿಕ ಬಂಡವಾಳದಲ್ಲಿ ತಯಾರಾಗಿದ್ದ ಸಾಹೋ ಚಿತ್ರವನ್ನು ಬಿಡುಗಡೆಯಾದ ಮೊದಲ ದಿನವೇ ಲೀಕ್ ಮಾಡಲಾಗಿತ್ತು. ಮೊದಲ ಶೋ ಪ್ರದರ್ಶನ ಮುಗಿಯುವಷ್ಟರಲ್ಲೇ ಸಾಹೋ ಲೀಕ್ ಆಗಿದೆ, ದೊಡ್ಡ ತೆರೆಯಲ್ಲಿ ಸಾಹೋ ಬರುತ್ತಿದೆ,ಪೈರಸಿಗೆ ಪ್ರೋತ್ಸಾಗ ಕೊಡಬೇಡಿ ದಯವಿಟ್ಟು ಚಿತ್ರಮಂದಿರಕ್ಕೆ ಬನ್ನಿ ಎಂದು ಚಿತ್ರತಂಡ ಮನವಿಯನ್ನೂ ಮಾಡಿತ್ತು.
ಇದಾದ ಬಳಿಕ ವಿಶ್ವಾದ್ಯಂತ ಬಿಡುಗಡೆಯಾಗಿ ಬಾಕ್ಸ್ ಆಫೀಸ್ ನಲ್ಲಿ ಕೋಟಿ ಕೋಟಿ ಹಣ ಬಾಚಿದ ಹೃತಿಕ್ ರೋಶನ್ ಮತ್ತು ಟೈಗರ್ ಶ್ರಾಫ್ ಅಭಿನಯದ `ವಾರ್’ ಸಿನಿಮಾವನ್ನೂ ಸಹ ಲೀಕ್ ಮಾಡಿ ತಮ್ಮ ವೆಬ್ಸೈಟ್ ನಲ್ಲಿ ಅಪ್ಲೋಡ್ ಮಾಡಿ ತಮ್ಮ ಅಟ್ಟಹಾಸವನ್ನು ಮೆರೆದಿತ್ತು
ಇತ್ತೀಚಿನ ದಿನಗಳಲ್ಲಿ ಚಿತ್ರೋದ್ಯಮಕ್ಕೆ ವಿಪರೀತವಾಗಿ ಈ ತಮಿಳ್ ರಾಕರ್ಸ್ ಕಾಡುತ್ತಿದೆ. ಕನ್ನಡದ ಮೋಸ್ಟ್ ಎಕ್ಸ್ಪೆಕ್ಟೆಡ್ ಸಿನಿಮಾ ದಿ ವಿಲನ್ ಚಿತ್ರ ಸಹಿತ ಬಿಡುಗಡೆಯಾಗಿದ್ದ ಐವತ್ತು ದಿನಗಳಲ್ಲಿ ಇದರ ಹೆಚ್ ಡಿ ಪ್ರಿಂಟ್ ಸೋರಿಕೆಯಾಗಿತ್ತು ಅಲ್ಲದೇ ಕನ್ನಡದ ಹೆಮ್ಮೆಯ ಚಿತ್ರ ಕೆ.ಜಿ.ಎಫ್ ಕೂಡ ಇವರ ಕಾಟಕ್ಕೆ ಗುರಿಯಾಗಿತ್ತು. ಇನ್ನು ಈ ಸಿನಿಮಾ ಪಂಚ ಬಾಷೆಯಲ್ಲಿ ಬಿಡುಗಡೆಯಾಗಿದ್ದು, ತಮಿಳು,ತೆಲುಗು,ಹಿಂದಿ ಅವತರಣಿಯನ್ನು ತಮಿಳು ರಾಕರ್ಸ್ ಅಪ್ಲೋಡ್ ಮಾಡಿತ್ತು. ಜೊತೆಗೆ ಕುರುಕ್ಷೇತ್ರ ಮತ್ತು ಪೈಲ್ವಾನ್ ಸಿನಿಮಾಗಳೂ ಲೀಕ್ ಆಗಿದ್ದವು.
ಇದೀಗ ರಕ್ಷಿತ್ ಶೆಟ್ಟಿ ಅವರ ಕನಸಿನ ಕೂಸು ಬಹು ಕೋಟಿ ವೆಚ್ಚದ ಅವನೇ ಶ್ರೀಮನ್ನಾರಾಯಣನು ಕೂಡ ಇವರ ಅಟ್ಟಹಾಸಕ್ಕೆ ಸೋತಿದ್ದಾನೆ ! ಚಿತ್ರ ಬಿಡುಗಡೆಯಾದ ಕೆಲವೇ ಗಂಟೆಗಳಲ್ಲಿಚಿತ್ರ ಆನ್ ಲೈನ್ ನಲ್ಲಿ ಲೀಕ್ ಆಗಿದೆ.
ಪೈರಸ್ ಗೆ ಕುಖ್ಯಾತಿ ಪಡೆದಿರುವ ತಮಿಳು ರಾಕರ್ಸ್ ತಂಡ ಈ ಕುಕೃತ್ಯ ಮಾಡಿದ್ದು, ತಮ್ಮ ವೆಬ್ ಸೈಟಿನಲ್ಲಿ ‘ಅವನೇ ಶ್ರೀಮನ್ನಾರಾಯಣ’ ಚಿತ್ರವನ್ನು ಲೀಕ್ ಮಾಡಿದ್ದಾರೆ. ‘ಅವನೇ ಶ್ರೀಮನ್ನಾರಾಯಣ’ ಚಿತ್ರ ಇಂದು ಬೆಳಗ್ಗೆಯಷ್ಟೇ ತೆರೆ ಕಂಡು, ಉತ್ತಮಪ್ರದರ್ಶನ ಕಾಣುತ್ತಿದೆ. ಹೀಗಿರುವಾಗಲೇ ತಮಿಳು ರಾಕರ್ಸ್ ಕುಕೃತ್ಯದಿಂದಾಗಿ ಇದೀಗ ಚಿತ್ರದಕಲೆಕ್ಷನ್ ಮೇಲೆ ಪೆಟ್ಟು ಬೀಳುವ ಭೀತಿ ಎದುರಾಗಿದೆ.