ಆಗಸ್ಟ್ 1 ‘ವಿಶ್ವ ಕುಂದಾಪ್ರ ಕನ್ನಡ ದಿನ’..!

0
208

‘ಭಾಷಿ ಅಲ್ಲ, ಬದ್ಕ್..!’ ಎಂಬ ಅಡಿಬರಹದೊಂದಿಗೆ ತನ್ನದೇ ಆದ ಪ್ರಾದೇಶಿಕ ಅಸ್ತಿತ್ವದ ನೆಲೆಯೊಂದನ್ನು ವಿಭಿನ್ನವಾಗಿ ನಾಡಿಗೆ ಸಾರುವ ನಿಟ್ಟಿನಲ್ಲಿ ರೂಪಗೊಂಡಿದೆ ‘ವಿಶ್ವ ಕುಂದಾಪ್ರ ಕನ್ನಡ ದಿನ. ಹೌದು, ಪ್ರತಿವರ್ಷ ಆಗಸ್ಟ್ 1ರಂದು ಕರಾವಳಿಯ ಕನ್ನಡಿಗರು ಈ ದಿನವನ್ನು ಆಚರಿಸುವ ಮೂಲಕ ಕನ್ನಡ ಭಾಷೆಯ ಹೊಸ ಅಸ್ಮಿತೆಯೊಂದಿಗೆ, ಕರಾವಳಿಯ ಕನ್ನಡವನ್ನು ಜೀವಂತವಾಗಿಡುವ ಪ್ರಯತ್ನಕ್ಕೆ ಮುನ್ನುಡಿ ಬರೆದಿದ್ದಾರೆ. ಕರಾವಳಿಗರ ಈ ಪ್ರಯತ್ನ ಇದೀಗ ರಾಜ್ಯಾದ್ಯಂತ ಭಾರೀ ಸದ್ದು ಮಾಡುತ್ತಿದೆ. ಕನ್ನಡ ಭಾಷೆಯ ಪ್ರಾದೇಶಿಕತೆಯನ್ನು ಜೀವಂತವಾಗಿಡುವ ಈ ಪ್ರಯತ್ನ ಎಲ್ಲೆಡೆ ಮೆಚ್ಚುಗೆಗೆ ಪಾತ್ರವಾಗಿದೆ.

LEAVE A REPLY

Please enter your comment!
Please enter your name here