ಬರ್ತಾ ಬರ್ತಾ ರಾಯರ ಕುದುರೆ ಕತ್ತೆಯಾಗುತ್ತಿದೆ : ಚಂದನ್ ಶೆಟ್ಟಿಗೆ ಅವಾಚ್ಯ ಪದಗಳಿಂದ ನಿಂದನೆ.!

0
958

ಚಂದನ್ ಶೆಟ್ಟಿ, ಚಂದನವನದ ಸಂಗೀತ ಸಂಯೋಜಕ, ಗೀತಾರಚನೆಕಾರ ಮತ್ತು ಪಾಪ್ ಗಾಯಕ. ತನ್ನ ರಾಪ್ ಹಾಡುಗಳಿಂದ ಲಕ್ಷಾಂತರ ಅಭಿಮಾನಿಗಳನ್ನು ಗೆದ್ದಿರುವ ಹಾಸನದ ಹುಡುಗ, ಜೀವನದಲ್ಲಿ ಅನೇಕ ನೋವುಗಳನ್ನು ನೋಡಿ ಉನ್ನತ ಸ್ಥಾನಕ್ಕೇರಿರುವ ಚತುರ. ಯಾವ ಪಬ್ ಗೆ ಹೋದರು ಅಲ್ಲಿ ಕೇಳಿಸುವುದು ಇವರ ಗಾನಭಜಾನವೇ.. ಇವರ ಅಲ್ಬಂಮ್ ಸಾಂಗ್ಸ್‌ ಗಾಗಿ ಪ್ರೇಕ್ಷಕರು ಕಾಯುತ್ತಿರುತ್ತಾರೆ.

 

ಸಂಗೀತ ನಿರ್ದೇಶಕ ಅರ್ಜುನ್ ಜನ್ಯಾ ಅವರ ನೇತೃತ್ವದಲ್ಲಿ ಅಲೆಮಾರಿ ಚಿತ್ರಕ್ಕೆ ಗೀತರಚನೆಕಾರ ಮತ್ತು ಸಹಾಯಕ ಸಂಗೀತ ನಿರ್ದೇಶಕರಾಗಿ ಚಂದನ್ ಶೆಟ್ಟಿ 2012 ರಲ್ಲಿ ಸಂಗೀತ ಉದ್ಯಮಕ್ಕೆ ಪ್ರವೇಶಿಸಿದರು. ನಂತರ ಅವರು ವರದಾನಾಯಕ , ಪವರ್ , ಚಕ್ರವ್ಯೂಹ , ಮತ್ತು ಭಜರಂಗಿ ಮುಂತಾದ ಹಲವಾರು ಚಲನಚಿತ್ರಗಳಿಗೆ ಕೆಲಸ ಮಾಡಿದ್ದಾರೆ. ಮತ್ತು “ಹಾಳಗೋದೇ”, “3 ಪೆಗ್”, “ಚಾಕೊಲೇಟ್ ಗರ್ಲ್”, “ಟಕಿಲಾ” ಮತ್ತು “ಫೈರ್” ನಂತಹ ಏಕ ಗೀತೆಗಳೊಂದಿಗೆ ಏಕವ್ಯಕ್ತಿ ಕಲಾವಿದನಾಗಿ ಖ್ಯಾತಿಯನ್ನು ಪಡೆದ್ದಾರೆ. ಅಲ್ಲದೇ ದಕ್ಷಿಣ ಭಾರತದ ಅತಿ ದೊಡ್ಡ ರಿಯಾಲಿಟಿ ಶೋ ಬಿಗ್ ಬಾಸ್ ಸೀಸನ್ 5 ರ ವಿಜೇತರಾಗಿ ಅಪಾರ ಜನಮನ್ನಣೆ ಪಡೆದಿಕೊಂಡಿದ್ದಾರೆ ಮತ್ತು ಕಲರ್ಸ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಕನ್ನಡ ಕೋಗಿಲೆ ಕಾರ್ಯಕ್ರಮದಲ್ಲಿ ಜಡ್ಜ್ ಕೂಡ ಆಗಿದ್ದರು.

 

ಒಂದು ವಾರದ ಹಿಂದೆ ಲಹರಿ ಮ್ಯೂಸಿಕ್ ನಲ್ಲಿ ಚಂದನ್ ಶೆಟ್ಟಿ ಅವರು ಬ್ಯಾಡ್ ಬಾಯ್ ಎಂಬ ಆಲ್ಬಂ ಸಾಂಗ್ ಬಿಡುಗಡೆ ಮಾಡಿದ್ದರು. ಈ ಸಾಂಗ್ ಬಿಡುಗಡೆ ಆಗುವ ಮುನ್ನ ಸಖತ್ ಸದ್ದು ಮಾಡಿತ್ತು. ಅಲ್ಲದೆ ಈ ಸಾಂಗ್ ಬಿಡುಗಡೆಗೂ ಮುನ್ನ ಶೋಕಿಲಾಲ ಸಾಂಗ್ ಕೂಡ ಬಿಡುಗಡೆಯಾಗಿದ್ದು, ಸೂಪರ್ ಡೂಪರ್ ಹಿಟ್ ಆಗಿತ್ತು. ಅಂತೆಯೇ ಬ್ಯಾಡ್ ಬಾಯ್ ಹಾಡು ಕೂಡ ಸಕತ್ ಕ್ಯಾಚಿ ಆಗಿರುತ್ತೆ ಎಂದು ಪ್ರೇಕ್ಷಕರು ನಿರೀಕ್ಷೆಯನ್ನು ಇಟ್ಟಿದ್ದರು. ಆದರೆ ಅವರ ನಿರೀಕ್ಷೆಗಳಿಗೆ ಚಂದನ್ ಶೆಟ್ಟಿ ನಿರಾಸೆ ಮಾಡಿದ್ದಾರೆ.

 

ಈಗಾಗಲೇ ಲಹರಿ ಮ್ಯೂಸಿಕ್ ಯೂಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆಯಾಗಿರುವ ಬ್ಯಾಡ್ ಬಾಯ್ ಹಾಡು ಏಳು ಲಕ್ಷಕ್ಕೂ ಅಧಿಕ ವ್ಯೂಸ್ ಪಡೆದುಕೊಂಡಿದೆ. ಆದರೆ ಕಾಮೆಂಟ್ ಬಾಕ್ಸ್ ನಲ್ಲಿ ಚಂದನ್ ಶೆಟ್ಟಿ ಅವರಿಗೆ ಹಿಗ್ಗಾಮುಗ್ಗಾ ಬೈಯುತ್ತಿದ್ದಾರೆ. ಹೌದು, ಸಾಂಗ್ ನೋಡಿದ ಪ್ರೇಕ್ಷಕರು ಬರ್ತಾ ಬರ್ತಾ ರಾಯರ ಕುದುರೆ ಕತ್ತೆಯಾಗಿದೆ ಎಂದು ಚಂದನ್ ಅವರ ಕಾಲೆಳೆಯುತ್ತಿದ್ದಾರೆ. ಅಲ್ಲದೆ ಈ ಹಾಡನ್ನು ಪರಿಪೂರ್ಣವಾಗಿ ನೋಡಲು ಸಿಕ್ಕಾಪಟ್ಟೆ ಕಷ್ಟಪಟ್ಟಿದ್ದಾರೆ ಎಂದು ಮತ್ತೋರ್ವ ವ್ಯಕ್ತಿ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾನೆ.

 

ಇನ್ನು ಕಾಮೆಂಟ್ ಬಾಕ್ಸ್ ನಲ್ಲಿ ಪ್ರೇಕ್ಷಕರು ಅವಾಚ್ಯ ಪದಗಳನ್ನು ಬಳಸಿ ಸಾಹಿತ್ಯ ಬರೆದಿರುವುದು ನಿವೇದಿತಾ ಗೌಡರವರ ಎಂದು ಕೇಳುತ್ತಿದ್ದಾರೆ. ಒಟ್ಟಾರೆ ಚಂದನ್ ಶೆಟ್ಟಿಯವರ ಬ್ಯಾಡ್ ಬಾಯ್ ಹಾಡಿಗೆ ಬ್ಯಾಡ್ ಕಮೆಂಟ್ಸ್ ಗಳು ಬೀಳುತ್ತಿದ್ದು, ಚಂದನ್ ಶೆಟ್ಟಿ ಅವರು ನೆಟ್ಟಿಗರ ಕೆಂಗಣ್ಣಿಗೆ ತುತ್ತಾಗಿದ್ದಾರೆ ಎನ್ನಬಹುದು.

LEAVE A REPLY

Please enter your comment!
Please enter your name here