ಕ್ರಿಕೆಟ್ ಪ್ರಿಯರಿಗೆ ಐಪಿಎಲ್ ಎಂಬುದು ಹಬ್ಬವಿದ್ದಂತೆ. 4 ವರ್ಷಕೊಮ್ಮೆ ಬರುವ ವಿಶ್ವಕಪ್ ಗಿಂತ ಪ್ರತಿವರ್ಷ ನಡೆಯುವ ಐಪಿಎಲ್ ಟೂರ್ನಿಗೆ ಕ್ರೇಜ್ ಸಿಕ್ಕಾಪಟ್ಟೆ ಇರುತ್ತದೆ. ವಿವಿಧ ದೇಶದ ಆಟಗಾರರನ್ನು ಬೆಟ್ಟಿಂಗ್ ಮುಖಾಂತರ ಖರೀದಿಸಿ ಒಂದು ತಂಡವನ್ನಾಗಿ ಕಟ್ಟಿಕೊಂಡು ಕ್ರಿಕೆಟ್ ಜಗತ್ತಿಗೆ ರಸದೌತಣ ನೀಡುವಲ್ಲಿ ಐಪಿಎಲ್ ಯಶಸ್ವಿಯಾಗಿದೆ. ಈ ಟೂರ್ನಿಯ ಮೋಸ್ಟ್ ಫೇವರೇಟ್ ಟೀಮ್ ಎಂದರೆ ರಾಯಲ್ ಚಾಲೆಂಜರ್ಸ್ ಬೆಂಗಳೂರು.
ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ಅವರ ನೇತೃವ್ವದಲ್ಲಿ ಮುನ್ನುಗುತ್ತಿರುವ ಬೆಂಗಳೂರು ತಂಡಕ್ಕೆ ವಿಶ್ವಾದ್ಯಾಂತ ಅಭಿಮಾನಿಗಳಿದ್ದಾರೆ. ಇಲ್ಲಿಯ ತನಕ ಒಂದು ಬಾರಿ ಕಪ್ ಗೆಲ್ಲದೇ ಹೋದರು, ಈ ತಂಡಕ್ಕೆ ಸಿಗುವ ಬೆಂಬಲ ಮಾತ್ರ ಕಮ್ಮಿಯಾವುದಿಲ್ಲ.
ಭಾರತೀಯರು ಕ್ರಿಕೆಟ್ ಅನ್ನು ಎಷ್ಟು ಪ್ರೀತಿಸುತ್ತಾರೆ ಎಂಬುವದಕ್ಕೆ ಈ ಐಪಿಎಲ್ ಟೂರ್ನಿಯೇ ಸಾಕ್ಷಿ. ಬೇರೆ ಆಟಗಾರರಿಗೆ ಈ ಟೂರ್ನಿಯಲ್ಲಿ ಬೆಂಬಲ ನೀಡುವ ಮೂಖಾಂತರ ನಮ್ಮವರೆ ಎಂಬುವಂತೆ ಭಾವಿಸುತ್ತಾರೆ. ವೆಸ್ಟ್ ಇಂಡೀಸ್ ಆಟಗಾರ ಕ್ರಿಸ್ ಗೇಲ್, ಬೆಂಗಳೂರು ನನ್ನ ಎರಡನೇ ಮನೆ ಎಂದು ಹೇಳಿಕೆ ನೀಡಿ ಕೊಂಡಾಡಿದ್ದರು, ಅಲ್ಲದೆ ದಕ್ಷಿಣ ಆಫ್ರಿಕಾದ ಮಾಜಿ ಆಟಗಾರ ಜಾಂಟಿ ರೋಡ್ಸ್ ತಮ್ಮ ಮಗಳಿಗೆ ಇಂಡಿಯಾ ಎಂದು ಹೆಸರಿಟ್ಟಿರುವುದನ್ನು ನೋಡಿದರೆ ಗೊತ್ತಾಗುತ್ತದೆ, ನಮ್ಮ ದೇಶದ ಮೇಲೆ ಎಷ್ಟು ಗೌರವವಿದೆ ಎಂದು.
ಇನ್ನು ಆರ್ ಸಿ ಬಿ ತಂಡದಲ್ಲಿ ಕೊಹ್ಲಿ ಮತ್ತು ಎಬಿಡಿ, ಮಿಂಚು ಮತ್ತು ಗುಡುಗು ಇದ್ದ ಹಾಗೆ. ಅವರಿಬ್ಬರು ಸ್ಕ್ರೀಸ್ ನಲ್ಲಿ ಇದ್ದರೆ ಬೌಲರ್ ಗಳಿಗೆ ನೀರಿಳಿಸುವುದಂತು ಸತ್ಯ. ಬೇಸರದ ಸಂಗಂತಿ ಎಂದರೆ ತಮ್ಮ ಆರ್ ಸಿ ಬಿ ತಂಡದಲ್ಲಿ ಕರ್ನಾಟಕದ ಆಟಗಾರಾರು ಯಾರು ಇಲ್ಲ. ಈ ವಿಷಯ ಪ್ರತಿಯೊಬ್ಬ ಕನ್ನಡಿಗನಿಗು ಬೇಸರತಂದಿದೆ. ಆದರೆ ನಮ್ಮ ಕನ್ನಡಿಗರು ಬೇರೆ ತಂಡದಲ್ಲಿ ಮಿಂಚುತ್ತಿರುವುದು ನೋಡಿದಾಗಲೆಲ್ಲಾ ಯಾಕೆ, ಆರ್ ಸಿ ಬಿ ತಂಡದಲ್ಲಿ ಅವಕಾಶ ನೀಡುತ್ತಿಲ್ಲ ಎಂಬುದು ಕಾಡುತ್ತಲೆ ಇರುತ್ತದೆ.
ನೆನ್ನೆ ತಾನೆ ಐಪಿಎಲ್ ಹರಾಜು ಪ್ರಕ್ರಿಯೆ ನಡೆದಿದ್ದು ಅಂದುಕೊಂಡಂತೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಪ್ರಮುಖ ಆಟಗಾರರನ್ನು ಹರಾಜಿನಲ್ಲಿ ಖರೀದಿ ಮಾಡಿದೆ. ಒಟ್ಟು ಎಂಟು ಹೊಸ ಪ್ಲೇಯರ್ಗಳನ್ನು ತನ್ನ ತೆಕ್ಕೆಗೆ ಸೇರಿಸಿಕೊಂಡಿರುವ ಆರ್ಸಿಬಿ ತಂಡ ಮತ್ತಷ್ಟು ಬಲಿಷ್ಠವಾಗಿದೆ.
ಇನ್ನು ಈ ಬಾರಿ ಹರಾಜು ಪ್ರಕ್ರಿಯೆಯಲ್ಲಿ ಅತಿ ಹೆಚ್ಚು ಮೊತ್ತಕ್ಕೆ ಸೇಲ್ ಆಗಿದ್ದು ಆಸ್ಟ್ರೇಲಿಯಾ ಆಟಗಾರ ಪ್ಯಾಟ್ ಕಮಿನ್ಸ್. ಇವರು ಬರೋಬ್ಬರಿ 15 ಕೋಟಿಯ 50 ಲಕ್ಷಕ್ಕೆ ಕೋಲ್ಕತ್ತಾ ನೈಟ್ ರೈಡರ್ಸ್ ತಂಡ ಸೇರಿಸಿಕೊಂಡಿದ್ದಾರೆ. ನಂತರ ಗ್ಲೆನ್ ಮ್ಯಾಕ್ಸ್ವೆಲ್ 10 ಕೋಟಿ 75 ಲಕ್ಷಕ್ಕೆ ಕಿಂಗ್ಸ್ ಇಲೆವೆನ್ ತನ್ನ ತೆಕ್ಕೆಗೆ ಸೇರಿಸಿಕೊಂಡಿದೆ.ಅಂದುಕೊಂಡಂತೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಪ್ರಮುಖ ಆಟಗಾರರನ್ನು ಹರಾಜಿನಲ್ಲಿ ಖರೀದಿ ಮಾಡಿದೆ. ಒಟ್ಟು ಎಂಟು ಹೊಸ ಪ್ಲೇಯರ್ಗಳನ್ನು ತನ್ನ ತೆಕ್ಕೆಗೆ ಸೇರಿಸಿಕೊಂಡಿರುವ ಆರ್ಸಿಬಿ ತಂಡ ಮತ್ತಷ್ಟು ಬಲಿಷ್ಠವಾಗಿದೆ.
ಆರಂಭದಲ್ಲಿ ಆರ್ ಸಿ ಬಿ ಆ್ಯರೋನ್ ಫಿಂಚ್ ಅವರನ್ನು 4 ಕೋಟಿ 40 ಲಕ್ಷಕ್ಕೆ ಖರೀದಿ ಮಾಡಿತು ನಂತರ ದ. ಆಫ್ರಿಕಾದ ಆಲ್ರೌಂಡರ್ ಆಟಗಾರ ಕ್ರಿಸ್ ಮೊರೀಸ್ ಅವರನ್ನು 10 ಕೋಟಿ ಕೊಟ್ಟು ಖರೀದಿ ಮಾಡಿದ್ದು ಗರಿಷ್ಠ ಮೊತ್ತಕ್ಕೆ ಸೇಲ್ ಆದ 3ನೇ ಆಟಗಾರನಾಗಿದ್ದಾರೆ.ನಂತರ ಅಂತಿಮ ಹಂತದಲ್ಲಿ ಸೇಲ್ ಆಗದೆ ಉಳಿದಿದ್ದ ಡೇಲ್ ಸ್ಟೈನ್ರನ್ನು ಮೂಲಬೆಲೆ 2 ಕೋಟಿ ಕೊಟ್ಟು ತನ್ನ ತಂಡಕ್ಕೆ ಸೇರಿಸಿಕೊಂಡರು..
Pavan Deshpande is ready for IPL 2020 as the newest RCB squad member.#PlayBold #BidForBold #IPL2020 #IPLAuction pic.twitter.com/I2GQmOmFBP
— Royal Challengers (@RCBTweets) December 19, 2019
ವಿಶೇಷ ಅಂದರೆ ಕರ್ನಾಟಕದ ಒಬ್ಬ ಆಲ್ರೌಂಡರ್ ಆಟಗಾರ ಪವನ್ ದೇಶಪಾಂಡೆ ಅವರನ್ನು 20 ಲಕ್ಷಕ್ಕೆ ತನ್ನ ತೆಕ್ಕೆಗೆ ಸೇರಿಸಿಕೊಂಡಿದೆ.. ಇದರಿಂದ ಅಭಿಮಾನಿಗಳು ಸದ್ಯ ಒಬ್ಬ ಕನ್ನಡಿಗನಾದರು ಬೆಂಗಳೂರು ತಂಡದಲ್ಲಿ ಇದ್ದಾನಲ್ಲ ಎಂದು ಖುಷಿ ಪಟ್ಟಿದ್ದಾರೆ