ಒಸಾಮಾ ಬಿನ್ ಲಾಡೆನ್ ಕಿರಿಯ ಪುತ್ರನ ಹತ್ಯೆ

0
96

ಒಸಮಾ ಬಿನ್ ಲಾಡೆನ್ ಪುತ್ರ ಹಂಜಾ ಬಿನ್ ಲಾಡೆನ್ ಮೃತಪಟ್ಟಿದ್ದಾನೆಂದು ಅಮೆರಿಕ ತಿಳಿಸಿದೆ ತನ್ನ ತಂದೆಯ ಸಾವಿನ ನಂತರ ಅಲ್ ಖೈದಾ ಉಗ್ರ ಸಂಘಟನೆಯ ಮುಂದಾಳತ್ವ ವಹಿಸಲು ತಯಾರಿ ನಡೆಸಿದ್ದ ಎಂದು ತಿಳಿದುಬಂದಿದೆ.

2001ರಲ್ಲಿ ಅಮೆರಿಕ ವರ್ಲ್ಡ್ ಟ್ರೇಡ್ ಸೆಂಟರ್ ಮೇಲೆ ಒಸಮಾ ಬಿನ್ ಲಾಡೆನ್ ನೇತೃತ್ವದಲ್ಲಿ ಅಲ್ ಖೈದಾ ಉಗ್ರ ಸಂಘಟನೆ ನಡೆಸಿದ ದಾಳಿಯಲ್ಲಿ ಹಲವು ಅಮೆರಿಕನ್ನರು ಪ್ರಾಣ ಬಿಟ್ಟಿದ್ದರು. ಈ ಮಾರಣಾಂತಿಕ ಘಟನೆಯಲ್ಲಿ ಹಂಜಾಬಿನ್ ಲಾಡೆನ್ ಪ್ರಮುಖ ಪಾತ್ರವಹಿಸಿದ್ದ . ಪಾಕಿಸ್ತಾನದಲ್ಲಿ ಅಡಗಿದ್ದ ಒಸಾಮಾ ಬಿನ್ ಲಾಡೆನ್ ಆಗುವ ಆತನ ಹಿರಿಯ ಮಗನನ್ನು 2011ರಲ್ಲಿ ಅಮೆರಿಕದ ಸೇನೆ ಹತ್ಯೆ ಮಾಡಿತ್ತು . ಈ ವೇಳೆ ಹಮ್ಜಾ ಪರಾರಿಯಾಗಿದ್ದ ತನ್ನ ತಂದೆಯ ಸಾವಿಗೆ ಸೇಡನ್ನು ತೀರಿಸಿಕೊಳ್ಳಲು ಸಜ್ಜಾಗುತ್ತಿದ್ದ ಎನ್ನಲಾಗಿದೆ. ಸೌದಿ ಮತ್ತು ಅರೇಬಿಯನ್ ಪರ್ಯಾಯ ದ್ವೀಪದಲ್ಲಿ ದುಷ್ಕೃತ್ಯಯ ನಡೆಸುವುದಾಗಿ ಬೆದರಿಕೆ ಒಡ್ಡಿದ್ದ.

ಅಮೆರಿಕದ ಅಧಿಕಾರಿಗಳು ಈತನ ಸಾವನ್ನು ಖಚಿತಪಡಿಸಿದೆ, ಇದರಲ್ಲಿ ಅಮೆರಿಕಾದ ಪಾತ್ರ ಏನಿತ್ತು ಎಂದು ತಿಳಿಸಿಲ್ಲ. ಆದರೆ ಅಮೆರಿಕ ಸರ್ಕಾರ ಇದುವರೆಗೂ ಅಧಿಕೃತವಾಗಿ ದೃಢಪಡಿಸಿಲ್ಲ. ಈ ಬಗೆಗೆ ಡೊನಾಲ್ಡ್ ಟ್ರಂಪ್ ಅವರು ಈ ವಿಚಾರದ ಬಗ್ಗೆ ಮಾತನಾಡಲು ಇಚ್ಚಿಸುವುದಿಲ್ಲ ಎಂದು ಮಾಧ್ಯಮದವರಿಗೆ ತಿಳಿಸಿದ್ದಾರೆ .ಅಲ್ ಖೈದಾ ಉಗ್ರ ಸಂಘಟನೆ ಅಮೆರಿಕಾಗೆ ತಲೆನೋವು ಆಗಿರುವುದಂತೂ ನಿಜ ಅಮೆರಿಕಾ ತನ್ನವರ ಜೀವಕ್ಕೆ ಹಾನಿ ಮಾಡಿದವರನ್ನು ಹತ್ತು ವರ್ಷಗಳು ಕಾದು ಕೊಂದಿತ್ತು , ಪ್ರಪಂಚದಾದ್ಯಂತ ಸಂಚಲನ ಸೃಷ್ಟಿಸಿತ್ತು ಎಲ್ಲರಿಗೂ ತಿಳಿದಿದೆ.

LEAVE A REPLY

Please enter your comment!
Please enter your name here