ಕಾಫಿ ಪುಡಿ ಮೂಲಕ ಕಾಫಿ ಕಿಂಗ್‌ ಸಿದ್ಧಾರ್ಥ ಅವರ ಚಿತ್ರ ಹಾಕಿದ ಕಲಾವಿದ

0
219

ಸಿದ್ದಾರ್ಥ್ ಅವರು ಸತ್ತಾಗ ಅವರ ಅಂತ್ಯ ಸಂಸ್ಕಾರಕ್ಕೆ ಬಂದ ಸಾವಿರಾರು ಜನರನ್ನ ನೋಡಿ ಎಲ್ಲರಿಗೂ ಶಾಕ್ ಆಗಿತ್ತು ಯಾಕೆ ಸಿದ್ದಾರ್ಥ್ ಅವರು ಅಷ್ಟು ಜನರ ಮನದಲ್ಲಿ ಸ್ಥಾನವನ್ನ ಗಳಿಸಿದ್ದರು. ಸ್ನೇಹಿತರೆ ಸಿದ್ದಾರ್ಥ್ ಅವರು ಮಾಡಿರುವ ಸಹಾಯಗಳು ಅಷ್ಟಿಷ್ಟಲ್ಲ, ತಾವು ಮಾಡಿದ ಸಹಾಯವನ್ನ ಸಿದ್ದಾರ್ಥ್ ಅವರು ಎಲ್ಲಿಯೂ ಕೂಡ ಹೇಳಿಕೊಳ್ಳುತ್ತಿರಲಿಲ್ಲ,

ಅಲ್ಲದೆ ಅವರನ್ನು ತಮ್ಮದೇ ಆದ ರೀತಿಯಲ್ಲಿ ಜನರು ಸ್ಮರಿಸುತ್ತಿದ್ದಾರೆ. ತುಮಕೂರಿನ ಚಿತ್ರ ಕಲಾವಿದನೊಬ್ಬ ಕಾಫಿ ಪುಡಿ ಮೂಲಕ ವಿಭಿನ್ನವಾಗಿ ಅವರ ಚಿತ್ರವನ್ನ ಬರೆಯುವ ಮೂಲಕ ಅಂತಿಮ ನಮನ ಸಲ್ಲಿಸಿದ್ದಾರೆ.

ತುಮಕೂರು ಜಿಲ್ಲೆಯ ಗುಬ್ಬಿ ತಾಲೂಕಿನ ಪರಮೇಶ್ ಇಂಟೀರಿಯರ್ ಡೆಕೋರೇಟರ್ ಸಿದ್ಧಾರ್ಥ್ ಹೆಗಡೆಯವರ ಭಾವಚಿತ್ರವನ್ನು ಕಾಫಿ ಪುಡಿ ಬಳಸಿ ತಯಾರಿಸಿರುವುದು ಗಮನ ಸೆಳೆದಿದ್ದಾರೆ.. ತುಮಕೂರು ನಗರದಲ್ಲಿರುವ ಕೆಫೆ ಕಾಫಿ ಡೇ ಗೆ ಬಂದ ಪರಮೇಶ್ ಅಲ್ಲಿನ ಸಿಬ್ಬಂದಿಯ ಅನುಮತಿಯ ಮೇರೆಗೆ ಅಲ್ಲಿಯೇ ಕಾಫಿ ಪುಡಿಯನ್ನು ಖರೀದಿ ಮಾಡಿ ಸಿದ್ಧಾರ್ಥ್ ಅವರ ಭಾವಚಿತ್ರವನ್ನು ರಚಿಸಿದ್ದಾರೆ.

ಅವರಿಗಾಗಿ ಒಂದು ಸಣ್ಣ ಅರ್ಪಣೆ ಮಾಡಬೇಕು ಎಂದು ವಿಶೇಷವಾಗಿ ಕಾಫಿಪುಡಿಯಲ್ಲಿ ಅವರ ಚಿತ್ರವನ್ನು ಬಿಡಿಸಿದ್ದೇನೆ ಎಂದು ಪರಮೇಶ್ ಹೇಳಿದ್ದಾರೆ. ಪರಮೇಶ್ ರಚಿಸಿರುವ ಭಾವಚಿತ್ರ ಸಿದ್ಧಾರ್ಥ್ ಅಭಿಮಾನಿಗಳ ಗಮನ ಸೆಳೆಯುತ್ತಿದೆ.ಸಿದ್ದಾರ್ಥ್ ಅವರ ಭಾವಚಿತ್ರವನ್ನು ಬಿಡಿಸಿರುವ ಕಲಾವಿದನ ವಿಡಿಯೋ ಇಲ್ಲಿ ನೋಡಿ.

LEAVE A REPLY

Please enter your comment!
Please enter your name here