ಮುಂಬೈನಲ್ಲಿ ಬೆಳ್ಳಂಬೆಳಿಗ್ಗೆ ಹೈ’ಡ್ರಾಮಾ : ರಿಪಬ್ಲಿಕ್ ಟಿವಿ ಸಂಪಾದಕ ಅರ್ನಬ್ ಅ’ರೆಸ್ಟ್!!

0
77

ಕಳೆದ ಕೆಲವು ದಿನಗಳಿಂದ ಟಿಆರ್ಪಿ ರೇಟಿಂಗ್ ಗೋಲ್‍ಮಾಲ್ ಸ್ಕಾಮ್ ಪ್ರಕರಣ ಬಾರಿ ಸದ್ದು ಮಾಡಿದ್ದ ಬೆನ್ನಲ್ಲೇ ಇಂದು ಬೆಳಗ್ಗೆ ರಿಪಬ್ಲಿಕ್ ಟಿವಿ ಸಂಸ್ಥಾಪಕ ಹಾಗೂ ಪತ್ರಕರ್ತ ಅರ್ನಬ್ ಗೋಸ್ವಾಮಿಯನ್ನು ಅವರನ್ನು ಮನೆಯಲ್ಲಿ ಬಂ’ಧಿಸಲಾಗಿದೆ. ಇಂದು ಬೆಳಿಗ್ಗೆ ಮುಂಬೈನಲ್ಲಿರುವ ಅರ್ನಬ್ ಗೋಸ್ವಾಮಿ ಮನೆಗೆ ತೆರಳಿದ್ದ 15ಕ್ಕೂ ಹೆಚ್ಚು ಮಂದಿ ಪೊಲೀಸರು ಅರ್ನಬ್ ಅವರನ್ನು ತಮ್ಮ ಜೊತೆ ಬರುವಂತೆ ಸೂಚಿಸಿದ್ದಾರೆ. ಆದರೇ ಅವರು ಬರಲು ನಿರಾಕರಿಸಿದಾಗ ಅಕ್ಷರಶಃ ಅವರನ್ನು ಎಳೆದೊಯ್ದಿದ್ದಾರೆ. ಅವರನ್ನು ಪೊಲೀಸ್ ವ್ಯಾನ್‍ಗೆ ಬಲವಂತವಾಗಿ ತಳ್ಳುತ್ತಿರುವ ಕೆಲವು ದೃಶ್ಯಗಳು ವಿಡಿಯೋದಲ್ಲಿ ದಾಖಲಾಗಿವೆ. ಬಂಧನದ ವೇಳೆ ಪೊಲೀಸರು ತಮ್ಮ ಮೇಲೆ ಹಲ್ಲೆ ಮಾಡಿರುವುದಲ್ಲೇ ತಮ್ಮ ಮಗನ ಮೇಲೆ ದೈಹಿಕವಾಗಿ ಹಲ್ಲೆ ಮಾಡಿದ್ದಾರೆ ಎಂದು ಅರ್ನಬ್ ಪೊಲೀಸರ ಮೇಲೆ ಆರೋಪಿಸಿದ್ದಾರೆ.

ಕೆಲವು ದಿನಗಳ ಹಿಂದೆ ಟಿವಿ ವಾಹಿನಿಗಳ ಟಿಆರ್ಪಿ ರೇಟಿಂಗ್‍ನಲ್ಲಿ ಮೋಸ ನಡೆಯುತ್ತಿರುವ ಸುದ್ದಿ ಬಾರಿ ಸದ್ದು ಮಾಡಿತ್ತು. ಈ ಪ್ರಕರಣದ ಆರೋಪ ರಿಪಬ್ಲಿಕ್ ಟಿವಿ ವಿರುದ್ಧವೂ ಕೇಳಿ ಬಂದಿತ್ತು. ಈ ಸಂದರ್ಭದಲ್ಲಿ ದಾಖಲೆಗಳನ್ನು ಪೊಲೀಸರಿಗೆ ನೀಡಿದ್ದ ಅರ್ನಬ್ ಗೋಸ್ವಾಮಿ ತಮ್ಮ ವಾಹಿನಿ ಮೇಲೆ ಮಾಡಲಾಗಿರುವ ಆರೋಪಗಳು ಶುದ್ಧ ಸುಳ್ಳು ಎಂದು ಆರೋಪಗಲನ್ನು ನಿರಾಕರಿಸಿದ್ದರು. ಅಲ್ಲದೇ ಟಿಆರ್‍ಪಿ ಗೋಲ್‍ಮಾಲ್ ಕುರಿತು ಮುಂಬೈ ಪೊಲೀಸ್ ಆಯುಕ್ತ ಪರಮ್ ಬೀರ್‍ಸಿಂಗ್ ಆರೋಪಿಸಿದ್ದ ಬೆನ್ನಲ್ಲೇ ರಿಪಬ್ಲಿಕ್ ಟಿವಿ ಮಾಧ್ಯಮ ಪ್ರಕಟಣೆ ಹೊರಡಿಸಿ ಪೊಲೀಸರು ನಮ್ಮ ಮೇಲೆ ನಕಲಿ ಕೇಸ್ ದಾಖಲಿಸಿದ್ದಾರೆ ಎಂದು ಆರೋಪಿಸಿತ್ತು.

ಸುಮಾರು ಎಂಟು ವಾಹನಗಳಲ್ಲಿ ಬಂದಿದ್ದ 40-50ಕ್ಕೂ ಹೆಚ್ಚಿನ ಸಿಬ್ಬಂದಿ ಅರ್ನಬ್ ಮನೆಯ ಸುತ್ತ ನೆರೆದಿದ್ದರು. ಹೆಚ್ಚಿನ ಪೊಲೀಸರು ಶಸ್ತ್ರ ಸಜ್ಜಿತರಾಗಿದ್ದರು. ಒಬ್ಬ ಪತ್ರಕರ್ತನನ್ನು ಭ’ಯೋ’ತ್ಪಾದಕನಂತೆ ನೋಡುತ್ತಿರುವುದು ಈ ರೀತಿ ಕಾ’ನೂನು ಬಾ’ಹಿರವಾಗಿ ಅ’ರೆಸ್ಟ್ ಮಾಡಿರುವುದು ಸರ್ಕಾರ ಹಾಗೂ ಪೊಲೀಸರ ದೌರ್ಜನ್ಯದ ಮನಸ್ಥಿತಿಯನ್ನು ತೋರಿಸುತ್ತದೆ. ಅರ್ನಬ್ ಅವರನ್ನು ಅರೆಸ್ಟ್ ಮಾಡುವ ವೇಳೆ ಅದನ್ನು ಪ್ರಶ್ನಿಸಿ ವರದಿ ಮಾಡಲು ತೆರಳಿದ ರಿಪಬ್ಲಿಕ್ ಟಿವಿಯ ಕಾರ್ಯ ನಿರ್ವಾಹಕ ಸಂಪಾದಕ ನಿರಂಜನ್ ನಾರಾಯಣಸ್ವಾಮಿ ಮತ್ತು ಹಿರಿಯ ಸಹ ಸಂಪಾದಕ ಅಂಜಯ್ ಪಾಠಕ್ ಅವರನ್ನು ಪೊ’ಲೀಸರು ತ’ಡೆಯೊಡ್ಡಿದ್ದಾರೆ. ಮಾಧ್ಯಮಗಳಿಗೆ ವರದಿ ಮಾಡಲು ಬಿಡದೇ ಪತ್ರಿಕಾ ಸ್ವಾತಂತ್ರ್ಯವನ್ನು ಕಿತ್ತುಕೊಂಡಿದ್ದಾರೆ ಎಂದು ರಿಪಬ್ಲಿಕ್ ಟಿವಿ ಆರೋಪಿಸಿದೆ.

ಅರ್ನಬ್ ಮತ್ತು ಪರಮ್ ಬೀರ್ ಸಿಂಗ್ ನಡುವಿನ ಕಿತ್ತಾಟ
ಸುಶಾಂತ್ ಸಿಂಗ್ ಪ್ರಕರಣದಲ್ಲಿ ಮುಂಬೈ ಪೊಲೀಸರು ಸಂಪೂರ್ಣ ವಿಪಲರಾಗಿದ್ದು ಪರಮ್‍ಬೀರ್ ಸಿಂಗ್ ರಾಜಿನಾಮೆ ನೀಡಬೇಕೆಂದು ಅರ್ನಬ್ ಆಗ್ರಹಿಸಿದ್ದರು. ಇದಾದ ಕೆಲವು ದಿನಗಳ ನಂತರ ಮುಂಬೈ ನಗರದಲ್ಲಿ ಅತ್ಯಂತ ದೊಡ್ಡ ಹವಾಲಾ ಅಪರೇಟರ್ ಎಂದು ಅರ್ನಬ್ ಗೋಸ್ವಾಮಿ ಅವರ ವಿರುದ್ದ ಮುಂಬೈ ಪೊಲೀಸ್ ಕಮಿಷನರ್ ಆರೋಪ ಮಾಡಿದ್ದರು. ಅಲ್ಲದೇ 2018ರಲ್ಲಿ ಆ’ತ್ಮಹ’ತ್ಯೆಗೆ ಕುಮ್ಮಕ್ಕು ನೀಡಿದ್ದ ಪ್ರಕರಣವೊಂದನ್ನು ಪುನಃ ತೆರೆದಿರುವ ಪೊಲೀಸರು ಅರ್ನಬ್ ಗೋಸ್ವಾಮಿ ವಿರುದ್ಧದ ವಿಚಾರಣೆಯನ್ನು ತೀವ್ರಗೊಳಿಸಿದ್ದಾರೆ.

LEAVE A REPLY

Please enter your comment!
Please enter your name here