ರಷ್ಯಾ ಎಂಟ್ರಿ..! ಧರ್ಮ ಯು’ದ್ದಕ್ಕೆ ಕಾರಣವಾಗುತ್ತಾ ಅರ್ಮೇನಿಯಾ-ಅಜೆರ್ಬೈಜಾನ್ ಯು’ದ್ದ..?!

0
167

ಯೂರೋಷಿಯಾದ ದೇಶಗಳಾದ ಅರ್ಮೇನಿಯಾ-ಅಜೆರ್ಬೈಜಾನ ನಡುವಿನ ಯುದ್ದ ಇದೀಗ ಧರ್ಮಕ್ಕೆ ಮುನ್ನಡಿ ಬರೆಯುವ ಲಕ್ಷಣಗಳು ಗೋಚರಿಸುತ್ತಿವೆ. ಒಂದು ಕಾಲದಲ್ಲಿ ಸೋವಿಯತ್ ರಷ್ಯಾದ ಭಾಗವಾಗಿದ್ದ ಈ ಎರಡು ಪ್ರದೇಶಗಳು, ಶೀತಲ ಸಮರದ ನಂತರ ಸೋವಿಯತ್ ಒಕ್ಕೂಟ ಒಡೆದು ಈ ಎರಡು ಪ್ರದೇಶಗಳು ಸ್ವತಂತ್ರ ರಾಷ್ಟçಗಳಾದವು. ಕ್ರೆöÊಸ್ತರು ಬಹುಸಂಖ್ಯಾತರಾಗಿರುವ ಅರ್ಮೇನಿಯಾ ಮತ್ತು ಮುಸ್ಲಿಂಮರು ಬಹುಸಂಖ್ಯಾತರಾಗಿರುವ ಅಜೆರ್ಬೈಜಾನ ನಡುವೆ ಗಡಿ ಸಂಘರ್ಷಯೂ ಹುಟ್ಟಿಕೊಂಡಿತು. ಕಳೆದ ಅನೇಕ ದಶಕಗಳಿಂದ ಈ ಎರಡು ದೇಶಗಳು ಕೆಲ ಪ್ರದೇಶಗಳ ಮೇಲೆ ಪ್ರಾಬಲ್ಯ ಸಾಧಿಸಲು ಪ್ರಯತ್ನಿಸುತ್ತಿವೆ. ಇದರ ಪರಿಣಾಮವಾಗಿ ಇದೀಗ ಪೂರ್ಣ ಪ್ರಮಾಣದ ಯುದ್ದಕ್ಕೆ ಎರಡು ದೇಶಗಳು ಇಳಿದಿವೆ.

ಇನ್ನು ಕಳೆದ ೧೫ ದಿನಗಳಿಂದ ನಡೆಯುತ್ತಿರುವ ಈ ಎರಡು ದೇಶಗಳ ನಡುವಿನ ಯುದ್ದ ಯೂರೋಷಿಯಾದ ಶಾಂತಿಗೆ ಧಕ್ಕೆಯುಂಟುಮಾಡಿದೆ. ಯುದ್ದ ನಿಲ್ಲಿಸಿ ಮಾತುಕಥೆಯ ಮೂಲಕ ಪರಿಹಾರ ಕಂಡುಕೊಳ್ಳಿ ಎಂಬ ವಿಶ್ವಸಂಸ್ಥೆಯ ಮನವಿಗೂ ಎರಡು ದೇಶಗಳು ಸೊಪ್ಪು ಹಾಕುತ್ತಿಲ್ಲ. ಇನ್ನು ಅರ್ಮೇನಿಯಾ-ಅಜೆರ್ಬೈಜಾನ್ ನಡುವಿನ ಯುದ್ದ ಅಪಾರ ರಕ್ತಪಾತಕ್ಕೆ ಕಾರಣವಾಗಿದೆ. ಅರ್ಮೇನಿಯಾ-ಅಜೆರ್ಬೈಜಾನ ನಡುವಿನ ಯುದ್ದವನ್ನು ಇಷ್ಟು ದಿನ ಸೂಕ್ಷö್ಮವಾಗಿ ಗಮನಿಸುತ್ತಿದ್ದ ರಷ್ಯಾ ಇದೀಗ ಎರಡು ದೇಶಗಳಿಗೆ ಖಡಕ್ ವಾರ್ನಿಂಗ್ ಮಾಡಿದೆ. ನಿನ್ನೆ ರಷ್ಯಾ ನೇತೃತ್ವದಲ್ಲಿ ಅರ್ಮೇನಿಯಾ-ಅಜೆರ್ಬೈಜಾನ್ ದೇಶಗಳ ಮುಖ್ಯಸ್ಥರು ಮಾಸ್ಕೋದಲ್ಲಿ ಸಭೆ ಸೇರಿದ್ದರು. ಪುಟಿನ್ ಆದೇಶದ ಹಿನ್ನೆಲೆಯಲ್ಲಿ ಈ ಸಭೆ ನಡೆದಿದೆ. ಎರಡು ದೇಶಗಳು ಒಮ್ಮತದಿಂದ ಯುದ್ದ ನಿಲ್ಲಿಸಬೇಕು ಇಲ್ಲವಾದರೆ ಯುದ್ದಕ್ಕೆ ರಷ್ಯಾ ನೇರವಾಗಿ ಎಂಟ್ರಿಯಾಗಬೇಕಾಗುತ್ತದೆ ಎಂಬ ಸಂದೇಶವನ್ನು ಪುಟಿನ್ ನೀಡಿದ್ದಾರೆ ಎನ್ನಲಾಗಿದೆ.

ಮುಸ್ಲಿಂ ರಾಷ್ಟçವಾಗಿರುವ ಅಜೆರ್ಬೈಜಾನ ಬೆನ್ನಿಗೆ ತೆರೆಮರೆಯಲ್ಲಿ ಟರ್ಕಿ ಮತ್ತು ಪಾಕಿಸ್ತಾನಗಳು ನಿಂತಿವೆ. ಅಪ್ಘಾನಿಸ್ತಾನ ಮತ್ತು ಕಾಶ್ಮೀರದಲ್ಲಿರುವ ಜಿಹಾದಿಗಳನ್ನು ಅಜೆರ್ಬೈಜಾನ ಪರವಾಗಿ ಹೋರಾಡಲು ನಿಯೋಜನೆ ಮಾಡುವ ಹೊಣೆಯನ್ನು ಪಾಕ್ ಮತ್ತು ಟರ್ಕಿ ಹೊತ್ತಿವೆ. ಇದನ್ನರಿತಿರುವ ರಷ್ಯಾ ಯುದ್ದ ಹೀಗೆ ಮುಂದುವರೆದರೆ ಅರ್ಮೇನಿಯಾ ಪರವಾಗಿ ಯುದ್ದಕ್ಕೆ ಇಳಿಯುವ ಸಾಧ್ಯತೆ ಇದೆ. ರಷ್ಯಾ ಯುದ್ದಕ್ಕಿಳಿದರೆ ಅರ್ಮೇನಿಯಾ-ಅಜೆರ್ಬೈಜಾನ ನಡುವಿನ ಯುದ್ದ ಧರ್ಮ ಯುದ್ದವಾಗಿ ಮಾರ್ಪಡುವ ಸಾಧ್ಯತೆ ಇದೆ. ಇನ್ನೊಂದೆಡೆ ಎರಡು ದೇಶಗಳ ವಿರುದ್ದ ರಷ್ಯಾ ಯುದ್ದ ಘೋಷಿಸಿದರೆ ಅರ್ಮೇನಿಯಾ-ಅಜೆರ್ಬೈಜಾನ್ ಸೇನೆಗಳು ಓಡಿ ಹೋಗದೆ ಬೇರೆ ದಾರಿಯೇ ಇಲ್ಲ.

ಇನ್ನು ಅರ್ಮೇನಿಯಾ-ಅಜೆರ್ಬೈಜಾನ ನಡುವಿನ ಯುದ್ದಕ್ಕೆ ಮುಖ್ಯ ಕಾರಣ ನಗೊರ್ನೊ-ಕರಬಾಖ್ ಪ್ರದೇಶಗಳು. ನಗೊರ್ನೊ-ಕರಬಾಖ್ ಪ್ರದೇಶಗಳು ಸಾಕಷ್ಟು ಆದಾಯ ತಂದುಕೊಡಬಲ್ಲ ಪ್ರದೇಶಗಳು. ಹೀಗಾಗಿ ಈ ಪ್ರದೇಶಗಳ ಮೇಲೆ ನಿಯಂತ್ರಣ ಸಾಧಿಸಲು ಅರ್ಮೇನಿಯಾ-ಅಜೆರ್ಬೈಜಾನ ದೇಶಗಳು ಕಚ್ಚಾಡುತ್ತಿವೆ. ಈ ಹಿಂದೆ ೧೯೯೪ರಲ್ಲೂ ನಗೊರ್ನೊ-ಕರಬಾಖ್ ಪ್ರದೇಶಗಳಿಗಾಗಿ ಅರ್ಮೇನಿಯ ಹಾಗೂ ಅಜೆರ್ಬೈಜಾನ್ ಬಡಿದಾಡಿಕೊಂಡಿವೆ. ಆದರೆ ನಂತರ ನಡೆದ ಸಂಧಾನದಲ್ಲಿ ತಕ್ಷಣಕ್ಕೆ ಯುದ್ಧ ನಿಂತಿದ್ದರೂ ದಶಕಗಳ ಕಾಲ ಸಂಘರ್ಷ ಮುಂದುವರೆದುಕೊAಡೆ ಬಂದಿದೆ.

LEAVE A REPLY

Please enter your comment!
Please enter your name here