ಮಲೆನಾಡಿನ ಪೇಯಕ್ಕೆ ರಾಷ್ಟ್ರ ಪ್ರಶಸ್ತಿ ಗರಿ..!

0
229

ದೇಶಿಯತೆಯ ಉದ್ಯಮ ಸ್ಥಾಪಿಸಿ ಯಶಸ್ಸುಗಳಿಸಬಹುದು, ಲಾಭವನ್ನು ಗಳಿಸಬಹುದು ಎಂದು ತೋರಿಸಿಕೊಟ್ಟ ಈ ಉತ್ಪನ್ನಕ್ಕೆ ಈಗ ಪ್ರತಿಷ್ಠಿತ ಮನ್ನಣೆ ಅರಸಿಬಂದಿದೆ.

ಭಾರತದ ನೆಲದಲ್ಲಿ ಅದರ್ಲಲೂ ಕರ್ನಾಟಕದ ಮಣ್ಣಿನ ಸೊಗಡಿನ ಮಲೆನಾಡಿನ ಕಂಪಿನ ಅಡಕೆ ಮತ್ತು ಅದರ ಉತ್ಪನ್ನಗಳು ವಿಶ್ವವ್ಯಾಪಿ ಮತ್ತು ಆರೋಗ್ಯವರ್ಧಕ. ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಮಂಡಗದ್ದೆ ಎಂಬ ಗ್ರಾಮದಲ್ಲಿ ತಯಾರಾದ ಅಡಕೆ ಉತ್ಪನ್ನವೊಂದು ಜಗತ್ತನ್ನು ಮೆಚ್ಚಿಬಂದಿದೆ. ಈಗ ಭಾರತದ ಹೆಮ್ಮೆಯ ಪ್ರಶಸ್ತಿ ಇದರ ಮುಡಿಗೇರಿದೆ.

ಶಿವಮೊಗ್ಗದ ಈ ಅಡಕೆ ಚಹಾ ಪಾನಿಯ ಕರ್ನಾಟಕದಿಂದ ಆಯ್ಕೆಯಾಗಿದ್ದು, ಪ್ರಶಸ್ತಿಯನ್ನು ಪಡೆದುಕೊಂಡಿದೆ. ಅಡಕೆ ಚಹಾ ಆರೋಗ್ಯಕರ ಪಾನಿಯ ಲಿಸ್ಟ್‍ನಲ್ಲಿ ಸೇರ್ಪಡೆಯಾಗಿದ್ದು ಮತ್ತಷ್ಟು ವಿಸ್ತಾರಗೊಳ್ಳಲಿದೆ.

ಅಡಕೆ ಚಹಾ ಹಲವಾರು ಆರೋಗ್ಯದಾಯಕ ಅಂಶಗಳನ್ನು ಒಳಗೊಂಡಿದೆ. ಮುಖ್ಯವಾಗಿ ಅಡಕೆಯನ್ನು ಭಾರತೀಯರು ಹೆಚ್ಚಾಗಿ ಬಳಸುತ್ತಾರೆ. ಊಟದ ನಂತರ ಎಲೆ ಅಡಕೆ ತಾಂಬೂಲ ಸ್ವೀಕರಿಸುವ ಪದ್ಧತಿ ಇಲ್ಲಿನ ಸಂಸ್ಕøತಿಯ ಭಾಗ. ಅದು ಜೀರ್ಣ ಕ್ರಿಯೆಗೆ ಸಹಕಾರಿ ಮತ್ತು ದೇಹಕ್ಕೆ ಅಗತ್ಯವಾಗಿದೆ ಎಂಬುದು ಇಲ್ಲಿನ ಜನರ ನಂಬಿಕೆ. ಅಡಕೆ ಚಹಾ ಮಧುಮೇಹದಂತಹ ಖಾಯಿಲೆಗಳಿಗೆ ಉಪಶಮನ ನೀಡಬಲ್ಲದು ಎಂಬುದು ನವೋದ್ಯಮ ಸ್ಥಾಪಕರ ಮಾತು.

ಮಂಡಗದ್ದೆಯಲ್ಲಿ ಸ್ಟಾರ್ಟ್‍ಅಪ್ ಮೂಲಕ ಆರಂಭವಾದ ಅಡಕೆ ಚಹಾ ಗ್ರಾಹಕರಿಂದ ಬಲು ಬೇಡಿಕೆ ಪಡೆದು ವಿಶ್ವಮಟ್ಟಕ್ಕೆ ತನ್ನ ಜಾಲ ವಿಸ್ತರಿಸಿಕೊಂಡಿದೆ. ತಜ್ಞ ವೈದ್ಯರ ಪರೀಕ್ಷೆ ಮೂಲಕ ಸಕ್ಕರೆ ಖಾಯಿಲೆಯನ್ನು ನಿವಾರಿಸುವ ಶಕ್ತಿವರ್ಧಕ ಎಂದೂ ರುಜುವಾತಾಗಿದೆ. ಇದು ಸ್ಥಳೀಯರಿಗೆ ಉದ್ಯೋಗ ಕೊಟ್ಟಿದ್ದಲ್ಲದೆ ಅಡಕೆ ಬೆಳೆಗಾರ ಕೃಷಿಕರಿಗೆ ಆಸರೆಯಾಗಿದೆ, ಲಾಭದಾಯಕವಾಗಿದೆ.
ನವೋದ್ಯಮ ಆಸಕ್ತರಿಗೆ ಈ ಉದ್ಯಮ ನಿಜಕ್ಕೂ ಮಾರ್ಗದರ್ಶಕ ಏಕೆಂದರೆ ಇಲ್ಲಿನ ಆಲೋಚನೆ ಮತ್ತು ಕಾರ್ಯರೂಪದ ವಿಧಾನಗಳು ಸ್ಥಳೀಯವಾಗಿವೆ ಹಾಗೂ ದೇಶಿಯತೆಯ ಸೊಗಡಿನಲ್ಲೇ ರೂಪುಗೊಂಡಿರುವುದು. ಪರಿಸರಕ್ಕೆ ಹಾನಿಯಲ್ಲದ, ಆರೋಗ್ಯಕ್ಕೆ ಅಡ್ಡಪರಿಣಾಮ ಬೀರುವ ಯಾವುದೇ ಅಂಶಗಳು ಈ ನವೋದ್ಯಮದಲ್ಲಿಲ್ಲ.

ಯುವಜನತೆಯ ಆಸಕ್ತಿ ಪರಿಸರ ಪೂರಕವಾಗಿ ಜನರ ಬೆಳವಣಿಗೆ ಬಗೆಗೆಗ ಇದ್ದರೆ ಉದ್ಯಮಗಳು ಯಶಸ್ವಿಯಾಗುತ್ತವೆ ಮತ್ತು ಇದಕ್ಕೆ ಮನ್ನಣೆ ದೊರೆಯುತ್ತದೆ ಎಂಬುದಕ್ಕೆ ಅಡಕೆ ಚಹಾದ ಕಥೆ ಸಾಕ್ಷಿಯಾಗಿದೆ. ಸದ್ಯ ಮುಂದುವರಿದು ಆಲೋಚನೆಗಿಳಿದಿರುವ ನವೋದ್ಯಮಿಗಳು ಅಕ್ಕಿ ಮತ್ತು ಕಬ್ಬಿನಿಂದಲೂ ಆರೋಗ್ಯವರ್ಧಕ ಉತ್ಪನ್ನ ತಯಾರಿಕೆಗೆ ಚಿಂತನೆ ಮತ್ತು ಸಂಶೋಧನೆ ನಡೆಸಿದ್ದಾರೆ.

LEAVE A REPLY

Please enter your comment!
Please enter your name here