ಕನ್ನಡ ಸಿನಿಮಾಗಳಿಗೆ ಅವಮಾನವಾಗುತ್ತಿದೆಯಾ ಅಥವಾ ಕನ್ನಡ ಭಾಷೆ/ಕನ್ನಡಿಗರಿಗೆ ಅವಮಾನಾವಾಗುತ್ತಿದೆಯಾ??

0
165

ಯುಗಯುಗಗಳಿಂದಲೂ ಕನ್ನಡ ಸಿನಿಮಾ ಮತ್ತು ಕನ್ನಡಿಗರಿಗೆ ಅವಮಾನವಾಗುತ್ತಲೆ ಇದೆ.. ಅದು ಕಾವೇರಿಯ ವಿವಾದವೇ ಆಗಲಿ, ಸಿನಿಮಾ ವಿಚಾರವೇ ಆಗಲಿ. ಹೊರ ರಾಜ್ಯದಲ್ಲಿ ಕನ್ನಡ ಸಿನಿಮಾಗಳಿಗೆ ಅಧ್ಯತೆ ನೀಡುತ್ತಿಲ್ಲ, ಆದರೆ ನಾವು ಕನ್ನಡಿಗರು ವಿಶಾಲ ಹೃದಯದವರು, ಯಾವ ರಾಜ್ಯದ ಜನರು ಬರಲಿ, ಅವರಿಗೆ ಬದುಕಲು ಅವಕಾಶ ಮಾಡಿಕೊಡುತ್ತೇವೆ, ಅವರ ಸಿನಿಮಾಗಳಂತೂ ವಿಜೃಂಭಣೆ ಮತ್ತು ಸಂಭ್ರಮದಿಂದ ಬಿಡುಗಡೆ ಮಾಡಿ, ನಮ್ಮ ಸಿನಿಮಾಗಳಿಗೆ ಚಿತ್ರಮಂದಿರ ಸಿಗದೇ ಹೋದರು, ಅವನೆಲ್ಲಾ ನೋಡಿಕೊಂಡು ತೆಪ್ಪಾಗಿರುತ್ತೇವೆ ಅಲ್ಲವೇ??

 

 

ಇತ್ತೀಚಿಗೆ ಕನ್ನಡ ಸಿನಿಮಾಗಳೂ ಸಾಕಷ್ಟು ಸದ್ದು ಮಾಡುತ್ತೀವೆ, ಈ ಹಿಂದೆ ಕನ್ನಡದ ಹೆಮ್ಮೆಯ ಚಿತ್ರ ಕೆ.ಜಿ.ಎಫ್ ಅಂತರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿ ಕನ್ನಡಕ್ಕೆ ದೊಡ್ಡದೊಂದು ಖ್ಯಾತಿಯನ್ನು ತಂದು ಕೊಟ್ಟಿತ್ತು, ಇದೀಗಾ ಪುಷ್ಕರ್ ಮಲ್ಲಿಖಾರ್ಜುನ ಅವರು ನಿರ್ಮಿಸಿರುವ, ರಕ್ಷಿತ್ ಶೆಟ್ಟಿ ಅವರು ಬರೆದು ನಟಿಸಿರುವ ಅವನೇ ಶ್ರೀಮನ್ನಾರಾಯಣ ಪಂಚ ಭಾಷೆಯಲ್ಲಿ ತಯಾರಾಗಿದ್ದು, ಈಗಾಗಲೇ ಕನ್ನಡ ದಲ್ಲಿ ಬಿಡುಗಡೆಯಾಗಿ ದಾಖಲೆ ಬರೆಯುತ್ತಿದೆ !

 

 

ಹೌದು ಕಳೆದ ಶುಕ್ರವಾರ ಬಿಡುಗಡೆಯಾದ ಈ ಸಿನಿಮಾ ರಾಜ್ಯಾದ್ಯಂತ ಯಶಸ್ವಿಯಾಗಿ ಪ್ರದರ್ಶನ ಗೊಳುತ್ತಿದ್ದು, ಗುರುವಾರ ಸಾಯಂಕಾಲವೇ ಲಾಲ್ ಬಾಗ್ ಬಳಿ ಇರುವ ಊರ್ವಶಿ ಚಿತ್ರಮಂದಿರದಲ್ಲಿ ರೆಡ್ ಕಾರ್ಪೆಟ್ ಪ್ರೀಮಿಯರ್ ಶೋ ಏರ್ಪಡಿಸಿದ್ದು, ಕನ್ನಡ ಸಿನಿಮಾರಂಗದ ಎಲ್ಲಾ ತಾರೆಯರು ಹಾಜರಾಗಿ ನಾರಾಯಣನಿಗೆ ಶುಭಾಶಯ ತಿಳಿಸಿದ್ದರು, ಇನ್ನು ಈ ರೀತಿಯಾದ ರೆಡ್ ಕಾರ್ಪೇಟ್ ಶೋ ಕನ್ನಡ ಚಿತ್ರರಂಗದಲ್ಲಿ ವಿಜೃಂಭಣೆಯಿಂದ ಮೊದಲ ಬಾರಿಗೆ ಆಯೋಜಿಲಾಗಿರುವ ಹೆಗ್ಗಳಿಕೆ ಅವನೇ ಶ್ರೀಮನ್ನಾರಾಯಣ ಚಿತ್ರರಂಗಕ್ಕೆ ಸಲ್ಲುತ್ತದೆ..

 

 

ಬಹು ಕೋಟಿ ವೆಚ್ಚದಲ್ಲಿ ತಯಾರಾಗಿ ಮೂರು ದಿನದಲ್ಲಿ ಮೂವತ್ತು ಕೋಟಿ ಬಾಚಿರುವ ಈ ಸಿನಿಮಾ ಕರ್ನಾಟಕ ಹೊರೆತು ಪಡಿಸಿ ಬೇರೆ ರಾಜ್ಯದಲ್ಲೂ ಬಿಡುಗಡೆಯಾಗಿದೆ.. ಆದರೆ ಚಿತ್ರತಂಡಕ್ಕೆ ದೊಡ್ಡದೊಂದು ಆಘಾತವಾಗಿದೆ.. ಹೌದು ಮಹರಾಷ್ಟ್ರದಲ್ಲಿ ಅವನೇ ಶ್ರೀಮನ್ನಾರಾಯಣ ಚಿತ್ರವನ್ನು ಪ್ರದರ್ಶಿಸುತ್ತಿದ್ದ ಚಿತ್ರಮಂದಿರಕ್ಕೆ ಹೋಗಿ ಸಿನಿಮಾವನ್ನು ನಿಲ್ಲಿಸಿದ್ದಾರೆ.

 

 

ಈ ಹಿಂದೆ ಬೆಳಗಾವಿಯ ಗಡಿ ಭಾಗದಲ್ಲಿ ಶಿವಸೇನೆ ಕಾರ್ಯಕರ್ತರು ಕನ್ನಡ ಧ್ವಜಕ್ಕೆ ಅಪಮಾನ ಮಾಡಿದ್ದರು, ಇದೀಗ ಕನ್ನಡ ಸಿನಿಮಾಗಳ ಪ್ರದರ್ಶನಕ್ಕೂ ಅಡ್ಡಿಪಡಿಸುತ್ತಿದ್ದಾರೆ. ಕೊಲ್ಲಾಪುರದಲ್ಲಿ ಏಕಾಏಕಿ ಚಿತ್ರಮಂದಿರಕ್ಕೆ ನುಗ್ಗಿ ಸಿನಿಮಾ ಪ್ರದರ್ಶನವಾಗದಂತೆ ತಡೆದಿಟ್ಟು, ಚಿತ್ರಮಂದಿರದಲ್ಲಿರುವ ಪೋಸ್ಟರ್ ಮತ್ತು ಬ್ಯಾನರ್ ಗಳನ್ನು ಕಿತ್ತಿಹಾಕಿ ಪುಂಡಾಟಿಕೆ ಮೆರೆದಿದ್ದಾರೆ

 

 

ಈ ವಿಚಾರ ತಿಳಿಯುತ್ತಿದ್ದಂತೆ, ಬೆಳಗಾವಿಯಲ್ಲಿ ಕನ್ನಡ ಪರ ಹೋರಾಟಗಾರರು, ಶೀವಸೇನೆ ಕಾರ್ಯಕರ್ತರ ವಿರುದ್ದ ರೊಚ್ಚಿಗೆದ್ದಿದ್ದಾರೆ. ಶಿವಸೇನೆಯವರು ಕನ್ನಡ ಬೋರ್ಡ್ ಗಳಿಗೆ ಮಸಿ ಬಳೆದು, ಕನ್ನಡಕ್ಕೆ ದ್ರೋಹ ಮಾಡಿದ್ದಾರೆ ಎಂದು ಪ್ರತಿಭಟನೆ ಮಾಡಲಾಗುತ್ತಿದೆ… ಮೊನ್ನೆ ತಾನೆ ತಮಿಳುನಾಡಿನಲ್ಲಿ ಕನ್ನಡ ಧ್ವಜವನ್ನು ಹಾಕಿಕೊಂಡು ವ್ಯಾನ್ ಚಾಲಾಯಿಸುತ್ತಿದ್ದ ಚಾಲಕನಿಗೆ ಕನ್ನಡ ನಾಯಿ ಎಂದು ಅವಾಚ್ಯ ಶಬ್ಧಗಳಿಂದ ಬೈದು ಹಿಗ್ಗಾಮುಗ್ಗಾ ತಣಿಸಿದ್ದರು, ಇದೀಗ ಕನ್ನಡ ಸಿನಿಮಾಗಳನ್ನು ಎತ್ತು ಬಿಸಾಡುತ್ತಿದ್ದಾರೆ.. ಹೀಗೆ ಬಿಟ್ಟರೆ ಮುಂದೇ ಯಾವ ರೀತಿ ಅನಾಹುತಗಳಾಗಬಹುದು ಯೋಚಿಸಿ ? ದಯವಿಟ್ಟು ಇನ್ನಾದರು ಪ್ರತಿಯೊಬ್ಬ ಕನ್ನಡಿಗನು ರೊಚ್ಚಿಗೇಳಲೇಬೇಕು, ನಮ್ಮ ಭಾಷೆ ಮತ್ತು ನಮ್ಮ ನಾಡಿಗೆ ಅವಮಾನ ಮಾಡಿದವರನ್ನು ಸುಮ್ಮನೆ ಬಿಡಬಾರದು.

 

ಪ್ರತಿಯೊಬ್ಬ ಕನ್ನಡಿಗನಿಗೆ ತಲುಪುವ ತನಕ ಶೇರ್ ಮಾಡಿ..

LEAVE A REPLY

Please enter your comment!
Please enter your name here