ಇನ್ನು ಚಂದನವನದಲ್ಲಿ ವಾರಕ್ಕೆ ಹತ್ತಾರು ಸಿನಿಮಾಗಳು ಸೆಟ್ಟೇರುತ್ತಿರುತ್ತವೆ, ವಾರಕ್ಕೆ ಹತ್ತಾರು ಸಿನಿಮಾಗಳು ಬಿಡುಗಡೆಯಾಗುತ್ತಿರುತ್ತವೆ.! ಯಾವ ಸಿನಿಮಾ ಗೆಲ್ಲುತ್ತದೆ? ಯಾವುದನ್ನು ಪ್ರೇಕ್ಷಕ ಗೆಲ್ಲಿಸುತ್ತಾರೆ ಎಂಬುದು ಹೇಳಲು ಕಷ್ಟಸಾಧ್ಯ!
ಇನ್ನು ನಿನ್ನೆಯಷ್ಟೇ ಕನ್ನಡದ ಬಹು ನಿರೀಕ್ಷಿತ ಚಿತ್ರಗಳಾದ ಕುರುಕ್ಷೇತ್ರ ಮತ್ತು ಕೆಂಪೇಗೌಡ-೨ ಬಿಡುಗಡೆಯಾಗಿದೆ. ಎರಡು ಸಿನಿಮಾವೂ ಸಹಿತ ಭರ್ಜರಿಯಾಗಿ ಓಪನಿಂಗ್ ತೆಗೆದುಕೊಂಡಿವೆ.
ಹೌದು ನೆನ್ನ ಕುರುಕ್ಷೇತ್ರ ವಿಶ್ವಾದ್ಯಂತ ತೆರೆಕಂಡಿದೆ.ಕನ್ನಡ ಸಿನಿ ಪ್ರೇಕ್ಷಕರಿಗೆ ಐತಿಹಾಸಿಕ ಸಿನಿಮಾಗಳಲ್ಲಿ ಹಲವು ಜಾಸ್ತಿ ಎಂಬುದು ಮತ್ತೊಮ್ಮೆ ಕುರುಕ್ಷೇತ್ರ ಮುಖಾಂತರ ಸಾಬೀತಾಗಿದೆ !
ಹಾಗೆಯೇ ಕಳೆದ ಮೂರು ವರ್ಷಗಳ ಹಿಂದೆ ಸೆಟ್ಟೇರಿದ ಚಿತ್ರ ಕೆಂಪೇಗೌಡ -2.
ಸಾಕಷ್ಟು ಏಳು ಬೀಳು ವಿವಾದಗಳ ಬಳಿಕ ಚಿತ್ರ ಬಿಡುಗಡೆಯಾಗಿದ್ದು ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ದೊರಕುತ್ತಿದೆ !
ಈ ಕನ್ನಡದ ಬಹು ನಿರೀಕ್ಷಿತ ಸಿನಿಮಾಗಳಿಗೆ ಪ್ರೋತ್ಸಾಹಿಸುವಂತೆ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರು ಬರೆದುಕೊಂಡಿದ್ದಾರೆ .. ಇದನ್ನು ಕಂಡ ಪ್ರೇಕ್ಷಕರು ಪ್ರತಿಕ್ರಿಯಿಸಲು ಆರಂಭಿಸಿದ್ದಾರೆ..
ಹೌದು ಅಪ್ಪ ಅವರ ಟ್ವೀಟ್ಗೆ ಅಭಿಮಾನಿಗಳು ಪ್ರತಿಕ್ರಿಯಿಸಿದ್ದಾರೆ, ಸಿನಿಮಾಗಳಿಗೆ ಟ್ವೀಟ್ ಮಾಡುವ ಬದಲು ಉತ್ತರ ಕರ್ನಾಟಕದ ಸ್ಥಿತಿ ನೋಡಿ ಅವರಿಗೆ ನೆರವಾಗುವಂತೆ ಟ್ವೀಟ್ ಮಾಡಿ ಎಂದು ಅಭಿಮಾನಿಗಳು ಬೇಸರದಿಂದಲೇ ಟ್ವೀಟ್ ಮಾಡಿದ್ದಾರೆ ..
ಇದಾದ ಕೆಲವೇ ನಿಮಿಷಗಳಲ್ಲಿ ಪುನೀತ್ ವಿಡಿಯೋ ಸಂದೇಶ ಪ್ರಕಟಿಸಿದ್ದು, ನೆರೆ ಪೀಡಿತ ಪ್ರದೇಶದ ಜನರಿಗೆ ನೆರವಾಗೋಣ ಎಂದು ಕರೆ ನೀಡಿದ್ದಾರೆ.ಅಲ್ಲದೆ, ನನ್ನಿಂದ ಆದ ಸಹಾಯವನ್ನು ನಾನೂ ಮಾಡ್ತಿದ್ದೀನೆ, ನೀವೂ ನೆರವಾಗಿ ಎಂದು ಕರೆಕೊಟ್ಟಿದ್ದಾರೆ.