ಸಂಜನಾ, ರಾಗಿಣಿ ವಿರುದ್ಧ ಆ’ರೋಪಗಳ ಸುರಿಮಳೆ ಗೈದಿದ್ದ ಸಾಮಾಜಿಕ ಕಾರ್ಯಕರ್ತ, ಬ್ಯುಸಿನೆಸ್ ಮ್ಯಾನ್ ಪ್ರಶಾಂತ್ ಸಂಬರಗಿ ಇದೀಗ ಅನುಶ್ರೀ ಬಗ್ಗೆಯೂ ಪೋಸ್ಟ್ ಮಾಡಿದ್ದು ಸಂಚಲನ ಸೃಷ್ಟಿಸಿದೆ. ಸ್ಯಾಂಡಲ್ವುಡ್ ಡ್ರಗ್ಸ್ ಪ್ರಕರಣ ಹಿನ್ನೆಲೆಯಲ್ಲಿ ನಿರೂಪಕಿ ಅನುಶ್ರೀ ಯಾಕೆ ಈವರೆಗೂ ಬಂಧನ ಆಗಿಲ್ಲ. ಅದಕ್ಕೆ ಕಾರಣ ಏನಿರಬಹುದು ಎಂದು ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ. ಅನುಶ್ರೀ ಡ್ರಗ್ಸ್’ ಕೇಸ್’ ಎಂಬ ಶೀರ್ಷಿಕೆಯೊಂದಿಗೆ ಅವರು ಒಂದು ಶಾಕಿಂಗ್ ಆರೋಪ ಮಾಡಿದ್ದಾರೆ. ಪೊಲೀಸರು ರಾಜಕಾರಣಿಯೊಬ್ಬನನ್ನ ಬಂ’ಧಿಸೋಕೆ ಹೋದಾಗ ಎ’ದೆ ನೋವು ಅಂತ ಕಾರಣ ಕೊಡ್ತಾರೆ, ಆಕೆಯನ್ನ ಬಂ’ಧಿಸೋಕೆ ಹೋದಾಗ ಕೊವಿಡ್ ಪಾಸಿಟಿವ್ ಅಂತ ಕಾರಣ ಕೊಡ್ತಾಳೆ ಎಂದು ಪೋಸ್ಟ್ ಮಾಡಿದ್ದಾರೆ. ಈ ಬಗ್ಗೆ ಪೋಸ್ಟ್ ಮಾಡಿದ್ದಲ್ಲದೇ ಹ್ಯಾಶ್ ಟ್ಯಾಗ್ ಟಿವಿ ಆ್ಯಂಕರ್, ಡ್ರಾಮಾ ಕ್ವೀನ್ ಅಂತಲೂ ಮೆನ್ಷನ್ ಮಾಡಿರೋದು ಸಧ್ಯ ಭಾರೀ ಚರ್ಚೆಗೀಡಾಗಿದೆ. ತಮ್ಮ ಆರೋ’ಪವನ್ನ ಇಷ್ಟಕ್ಕೇ ನಿಲ್ಲಿಸದ ಸಂಬರ್ಗಿ, ಅನುಶ್ರೀ ಈವರೆಗೂ ಅ’ರೆಸ್ಟ್ ಆಗದಂತೆ ಆಕೆಯ ಶುಗರ್ ಡ್ಯಾಡಿ ತಡೆದಿದ್ದಾರೆ. ಆದರೆ ಇನ್ಮುಂದೆ ಸಾಧ್ಯವಿಲ್ಲ. ಅನುಶ್ರೀಗೆ ಸಂಬಂಧಿಸಿದ ಇನ್ನೂ ಅನೇಕ ರಹಸ್ಯಗಳು ಹೊರಬರಲಿವೆ’ ಎಂದು ಸಂಬರಗಿ ಬರೆದುಕೊಂಡಿದ್ದಾರೆ.
ಹಾಗಾದರೆ ಅವರು ಪ್ರಸ್ತಾಪಿಸಿರುವ ಶುಗರ್ ಡ್ಯಾಡಿ ಯಾರು ಅನ್ನೋ ಪ್ರಶ್ನೆ ಎಲ್ರನ್ನೂ ಕಾಡ್ತಿದೆ. ಹಣ ಮತ್ತು ಐಷಾರಾಮಿ ಉಡುಗೊರೆಗಳನ್ನು ನೀಡುವ ಮೂಲಕ ಸಹಕಾರವಾಗಿರುವ ಹಿರಿಯ ವ್ಯಕ್ತಿಗೆ ‘ಶುಗರ್ ಡ್ಯಾಡಿ’ ಎನ್ನಲಾಗುತ್ತದೆ. ಅನುಶ್ರೀ ಹಿಂದೆಯೂ ಅಂಥ ಒಬ್ಬ ವ್ಯಕ್ತಿ ಇದ್ದಾರೆ ಎಂದು ಪ್ರಶಾಂತ್ ಸಂಬರಗಿ ಆರೋಪಿಸಿದ್ದಾರೆ. ಆದರೆ ಅವರ ಹೆಸರನ್ನು ಪ್ರಸ್ತಾಪಿಸುತ್ತಿಲ್ಲ. ಸೆ.24ರಂದು ಆ ಶುಗರ್ ಡ್ಯಾಡಿಗೆ ‘ಸರ್ ಹೆಲ್ಪ್ ಮೀ ಪ್ಲೀಸ್’ ಎಂದು ಅನುಶ್ರೀ ಮೆಸೇಜ್ ಮಾಡಿದ್ದರು ಎಂಬುದಾಗಿಯೂ ಅವರು ತಿಳಿಸಿದ್ದಾರೆ.
ಹಾಗೆಯೇ, ಅನುಶ್ರೀ ನಟಿಸಿದ್ದ ‘ರಿಂಗ್ ಮಾಸ್ಟರ್’ ಚಿತ್ರದ ಬಗ್ಗೆಯೂ ಸಂಬರಗಿ ಪ್ರಸ್ತಾಪ ಮಾಡಿದ್ದಾರೆ. ‘ರಿಂಗ್ ಮಾಸ್ಟರ್ ಕನ್ನಡ ಸಿನಿಮಾದಲ್ಲಿ ಅನುಶ್ರೀ ಮತ್ತು ಅವರ ಸ್ನೇಹಿತರು ನ್ಯೂ ಇಯರ್ ಪಾರ್ಟಿ ಸೆಲೆಬ್ರೇಟ್ ಮಾಡಲು ಒಬ್ಬ ಡ್ರ’ಗ್ ಪೆ’ಡ್ಲ’ರ್ನನ್ನು ಕರೆಯುತ್ತಾರೆ. ಆ ಡ್ರ’ಗ್ ಪೆ’ಡ್ಲ’ರ್ ತನ್ನ ಅಸಲಿ ಮುಖ ತೋರಿಸಿದಾಗ ಪರಿಸ್ಥಿತಿ ಕೈ ಮೀರಿ ಹೋಗುತ್ತದೆ. ಜೀವನವನ್ನು ಕಲೆ ಅನುಕರಿಸುತ್ತದೆಯೋ ಅಥವಾ ಸಿನಿಮಾವನ್ನು ಜೀವನ ಅನುಕರಿಸುತ್ತದೆಯೋ?’ ರಿಂಗ್ ಮಾಸ್ಟರ್ ಚಿತ್ರವೇ ಥಾಯ್ ಭಾಷೆಯ ಕೌಂಟ್ಡೌನ್ ಚಿತ್ರದ ಕಾಪಿ’ ಎಂದು ಸಂಬರಗಿ ಪೋಸ್ಟ್ ಮಾಡಿದ್ದಾರೆ. ಆದ್ರೆ ಪ್ರಶಾಂತ್ ಸಂಬರಗಿಗೆ ಇಷ್ಟೆಲ್ಲಾ ವಿಷಯ ಗೊತ್ತಿದ್ರೂ ಯಾಕೆ ಬಾಯಿ ಬಿಡ್ತಿಲ್ಲ..ನೇರವಾಗಿ ಪೊಲೀಸರ ಮುಂದೆಯೇ ತಿಳಿಸಬಹುದು ಅಲ್ವೇ.. ಇದನ್ನ ತಿಳಿಸೋದಕ್ಕೆ ಸಾಮಾಜಿಕ ಜಾಲತಾಣ ಯಾಕೆ ಬಳಕೆ ಮಾಡ್ತಿದ್ದಾರೆ. ಪ್ರಚಾರಕ್ಕಾಗಿ ಈ ರೀತಿ ಮಾತಾಡ್ತಿದ್ದಾರಾ ಎಂಬ ಪ್ರಶ್ನೆ ಸಾಮಾಜಿಕ ಜಾಲತಾಣದಲ್ಲಿಯೇ ಕೇಳಲಾಗುತ್ತಿದೆ.