ಈ ದಿನವನ್ನು ಇನ್ನೆಂದಿಗೂ ನೆನೆಪಿಸಿಕೊಳ್ಳಲು ಇಚ್ಚಿಸಲ್ಲ; ಈ ಘಟನೆಗಳು ಅನಿರೀಕ್ಷಿತ ಆ’ಘಾ’ತ

0
222

ಸ್ಯಾಂಡಲ್ ವುಡ್ ನಿಂದ ಹಿಡಿದು ಬಾಲಿವುಡ್ ವರೆಗೂ ಪ್ರಸ್ತುತ ಯಾವ ಸುದ್ದಿ ಸದ್ದು ಮಾಡುತ್ತಿದೆ. ಹಿರಿತೆರೆಯಿಂದ ಹಿಡಿದು ಕಿರುತೆರೆ, ರಿಯಾಲಿಟಿ ಶೋ ಕಲಾವಿದರು, ಕ್ರಿಕೆಟ್ ಆಟಗಾರವರೆಗೂ ಆವೊಂದು ವಿಚಾರ ಹೇಗೆಲ್ಲ ಕಾಡುತ್ತಿದೆ. ಸ್ಟಾರ್ ನಟ-ನಟಿಯರಿಂದ ಹಿಡಿದು ಕ್ರೊರಿಯೋಗ್ರಾಫರ್ ವರೆಗೂ ಮಾದಕ ವಸ್ತು ಎಂಬ ಭೂತ ಬೆಂಬಿಡದೇ ಹಿಂಡುತ್ತಿದೆ ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರ. ಇದೀಗ ಕನ್ನಡದ ಸ್ಟಾರ್ ಆಂಕರ್ ಕಂ ನಿರೂಪಕಿಯ ಮೇಲೂ ಈ ಆರೋಪ ಕೇಳಿಬಂದಿದೆ. ಹೌದು, ನಿರೂಪಕಿ ಅನುಶ್ರೀ ಮೇಲೆ ಇಂತದ್ದೊಂದು ಆರೋಪಗಳು ಕೇಳಿಬಂದಿದ್ದು, ತಮ್ಮ ಮೇಲಿನ ಆರೋಪಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಉತ್ತರ ನೀಡಿದ್ದಾರೆ. ಅಲ್ಲದೇ ತಾವು ಹಲವು ವರ್ಷಗಳ ಹಿಂದೆ ಏಕಾಂಗಿಯಾಗಿ ಬದುಕು ಅರಸಿ ಬೆಂಗಳೂರಿಗೆ ಬಂದೆ ಎಂಬುದನ್ನು ಹೇಳಿಕೊಂಡಿದ್ದಾರೆ. ಹಲವು ಸಂಗತಿಗಳನ್ನು ಹಂಚಿಕೊಂಡಿರುವ ಅನುಶ್ರೀ, 2020, ಸೆ.24 ನನ್ನ ಜೀವನದ ಯಾವ ಘಟ್ಟದಲ್ಲೂ ಕೂಡ ಮತ್ತೆ ನೆನಪಿಸಿಕೊಳ್ಳಲು ಇಷ್ಟಪಡದಂತಹ ದಿನ ಎಂದು ಕಣ್ಣೀರಿಟ್ಟಿದ್ದಾರೆ.  12 ವರ್ಷಗಳ ಹಿಂದೆ ಡಾನ್ಸ್ ರಿಯಾಲಿಟಿ ಶೋನಲ್ಲಿ ಗೆದ್ದು ಬೀಗಿದ್ದೆ. ಆದರೆ ಆ ಗೆಲುವು, ಆ ಖುಷಿ ಇಂದು ಮುಳುವಾಗಿ ನನ್ನನ್ನು ಈ ರೀತಿಯಾಗಿ ಕಾಡುತ್ತೆ ಎಂದುಕೊಂಡಿರಲಿಲ್ಲ. ಯಾವುದೇ ತಪ್ಪು ಮಾಡದಿದ್ದರೂ ಸಿಸಿಬಿ ನೋಟಿಸ್ ಬಂದಾಗ ಶಾಕ್ ಆಯಿತು. ಆದರೆ ಧೈರ್ಯದಿಂದ ವಿಚಾರಣೆಗೆ ಹಾಜರಾಗಿ ಎಲ್ಲಾ ಪ್ರಶ್ನೆಗಳಿಗೆ ಉತ್ತರಿಸಿದ ಮೇಲೂ ನನ್ನ ಬಗೆಗಿನ ಹಲವರ ಅಭಿಪ್ರಾಯ, ಪ್ರತಿಕ್ರಿಯೆಗಳಿಂದ ತುಂಬಾ ಬೇಜಾರಾಗುತ್ತಿದೆ.

ಮಾನಸಿಕವಾಗಿ ನೋವು ತಂದಿದೆ. ಕಳೆದ ಒಂದು ವಾರದಿಂದ ಮನೆಯಲ್ಲಿ ಯಾರೂ ಕೂಡ ನೆಮ್ಮದಿಯಿಂದ ಇಲ್ಲ ಎಂದು ಕಣ್ಣೀರಿಟ್ಟಿದ್ದಾರೆ. ಕನ್ನಡಿಗರು ಕೊಟ್ಟ ಹೆಸರಿಗೆ ನಾನು ಎಂದೂ ಧಕ್ಕೆ ತಂದಿಲ್ಲ, ತರುವುದೂ ಇಲ್ಲ. ಈ ಕಷ್ಟದ ದಿನಗಳಲ್ಲಿ ಕೂಡ ಕನ್ನಡಿಗರು ನನ್ನ ಬೆನ್ನು ಹಿಂದೆ ನಿಂತು ನಿಮ್ಮ ಮೇಲೆ ನಮಗೆ ನಂಬಿಕೆಯಿದೆ. ಧೈರ್ಯ ಕಳೆದುಕೊಳ್ಳಬೇಡಿ ಎಂದು ಹೇಳುತ್ತಿದ್ದಾರೆ. ನನಗೆ ಧೈರ್ಯ ತುಂಬಿದ ಎಲ್ಲಾ ಕನ್ನಡಿಗರಿಗೂ ಧನ್ಯವಾದ. 14 ವರ್ಷಗಳ ಹಿಂದೆ ನಾನೊಬ್ಬಳೆ ಬಸ್ ಹತ್ತಿ ಬೆಂಗಳೂರಿಗೆ ಬಂದೆ. ಕಷ್ಟ ಪಟ್ಟು ಬದುಕು ಕಟ್ಟಿಕೊಂಡಿದ್ದೇನೆ. 12 ವರ್ಷಗಳ ಕಾಲ ಹಾಸ್ಟೇಲ್ ನಲ್ಲಿಯೇ ಇದ್ದೆ. ನಾನು ತುಂಬಾ ಬಡತನದಿಂದ ಬಂದವಳು. ನನಗೆ ಪಾರ್ಟಿ, ಪಬ್ ಇದಾವುದರ ಬಗ್ಗೆಯೂ ಮೊದಲಿನಿಂದಲೂ ಆಸಕ್ತಿಯಿಲ್ಲ. ಶೋಟಿಂಗ್ ಮುಗಿಸಿ ಮನೆಗೆ ವಾಪಸ್ ಆಗುತ್ತೇನೆ ಹೊರತು ಅದಾವುದಕ್ಕೂ ಹೊಗುವುದೂ ಇಲ್ಲ. ಆದರೂ ಅನಗತ್ಯ ಆರೋಪ ತುಂಬಾ ನೋವು ತಂದಿದೆ.

ಈ ಘಟನೆಗಳು ಅನಿರೀಕ್ಷಿತ ಆ’ಘಾತ ತಂದಿದೆ. ನಾವು ಕಷ್ಟಪಟ್ಟು ಮೇಲೆ ಬಂದವರು. ಪ್ರಾಮಾಣಿಕವಾಗಿ ಕೆಲಸ ಮಾಡಿದ್ದೇನೆ, ಕನ್ನಡಿಗರು ಕೊಟ್ಟ ಹೆಸರಿಗೆ ಯಾವತ್ತೂ ಧಕ್ಕೆ ತಂದಿಲ್ಲ, ನಾನು ಮಾಡುವ ಕೆಲಸಕ್ಕೆ ಯಾವತ್ತೂ ಮೋಸ ಮಾಡಿಲ್ಲ. ಹೀಗಾಗಿ ನಾನ್ಯಾಕೆ ಭಯ ಪಡಲಿ ಎಂದು ಧೈರ್ಯವಾಗಿದ್ದೇನೆ. ಆದರೆ ಕೆಲ ಅಭಿಪ್ರಾಯಗಳಿಂದ ಮಾನಸಿಕವಾಗಿ ತುಂಬಾ ಕುಗ್ಗಿ ಹೋಗುವಂತೆ ಮಾಡುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ಸದಾ ಹಸನ್ಮುಖಿಯಾಗಿ, ಎಲ್ಲರನ್ನೂ ನಗಿಸುತ್ತಿದ್ದ ನಿರೂಪಕಿ ಇಂದು ಕಣ್ಣೀರಾಕುತ್ತಿದ್ದಂತೆ ಹಲವರು ಸಮಾಧಾನ ಹೇಳಿದ್ದಾರೆ. ಎಲ್ಲರೂ ನಿಮ್ಮೊಂದಿಗಿದ್ದೆವೆ. ಧೈರ್ಯವಾಗಿದ್ದು, ಎದುರಿಸಿ ಎಂದು ಹೇಳಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿರುವ ಅನುಶ್ರೀ ನಿಮ್ಮ ನಂಬಿಕೆ, ಧೈರ್ಯವೇ ನನಗೆ ಶಕ್ತಿ ಎಂದಿದ್ದಾರೆ.

LEAVE A REPLY

Please enter your comment!
Please enter your name here