ಅನುಶ್ರೀ ಜೊತೆ ಲಿಂಕ್ ಇರೋ ಆ ಮಾಜಿ ಸಿಎಂ ಯಾರು..? ಸರ್ಕಾರಕ್ಕೆ ಪತ್ರ ಬರೆಯುತ್ತೇನೆ : ಹೆಚ್ ಡಿ ಕುಮಾರಸ್ವಾಮಿ

0
213

ಬೆಂಗಳೂರು: ಎರಡು ಬಾರಿ ರಾಜ್ಯದ ಮುಖ್ಯಮಂತ್ರಿಯಾಗಿರೋದು ನಾನು. ಆ ಹೆಣ್ಣು ಮಗಳು ಅನುಶ್ರೀ ಯಾವ ಮಾಜಿ ಸಿಎಂ ಜೊತೆ ಮಾತಾಡಿದ್ದಾರೆ ಎಂಬ ಕುರಿತು ಸತ್ಯ ಗೊತ್ತಾಗಲಿ ಎಂದು ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಆಗ್ರಹಿಸಿದರು. ಈ ಕುರಿತು ಖನಿಜ ಭವನದಲ್ಲಿ ಮಾತನಾಡಿದ ಅವರು, ಡ್ರಗ್ಸ್ ಕೇಸ್ ವಿಚಾರವಾಗಿ ಟಿವಿ ಆ್ಯಂಕರ್ ಒಬ್ಬರ ಪ್ರಕರಣದಲ್ಲಿ ಲಿಂಕ್ ಮಾಡ್ತಿದ್ದಾರೆ.. ಯಾರು ಆ ಹೆಣ್ಣು ಮಗಳು.. ಅನುಶ್ರೀ ಅಂತಾ ಅಲ್ವಾ.. ಅನುಶ್ರೀ ವಿಚಾರವಾಗಿ ಲಿಂಕ್ ಗಳು ಶುರುವಾಗಿದೆ. ರಾಜ್ಯದ ಮೂರು ರಾಜಕೀಯ ಪಕ್ಷಗಳ ನಾಯಕರಿಗೆ ಕಾಲ್ ಮಾಡಿ ಒತ್ತಡ ತರುತ್ತಿದ್ದಾರೆ ಎಂದು ಸುದ್ದಿ ಆಗಿದೆ. ಸಿಸಿಬಿ ಅಧಿಕಾರಿಗಳಿಗೆ ನಂಬರ್ ಸಿಕ್ಕಿದೆ ಅಂತೆ. ಎರಡು ಬಾರಿ ರಾಜ್ಯದ ಮುಖ್ಯಮಂತ್ರಿಯಾಗಿರೋದು ನಾನು. ಮಾಜಿ ಮುಖ್ಯಮಂತ್ರಿಗಳಲ್ಲಿ ನಾನು, ಸಿದ್ದರಾಮಯ್ಯ, ಎಸ್ ಎಂಕೆ, ಮೊಯ್ಲಿ, ಜಗದೀಶ್ ಶೆಟ್ಟರ್, ಡಿವಿಎಸ್ ಇನ್ನೂ ಇದ್ದೇವೆ. ಯಾವ ಅಧಿಕಾರಿ ಮಾಜಿ ಸಿಎಂ ಎಂದು ಮಾಹಿತಿ ಕೊಟ್ಟಿದ್ದಾನೆ ಎಂದು ಹೇಳಲಿ.. ಆ ಹೆಣ್ಣು ಮಗಳು ಮಾಜಿ ಸಿಎಂ ಜತೆ ಮಾತಾಡಿದ್ರೆ ಸತ್ಯ ಗೊತ್ತಾಗಲಿ. ಯಾರು ಆ ಮಾಜಿ ಸಿಎಂ..ಸಾರ್ವಜನಿಕವಾಗಿ ಮೊದಲು ಜನರ ಮುಂದೆ ಇಡಲಿ ಎಂದು ಒತ್ತಾಯಿಸಿದ್ದಾರೆ.

ಮುಂದುವರಿದು ಮಾತನಾಡಿದ ಅವರು, ಡ್ರಗ್ಸ್ ವಿಚಾರದಲ್ಲಿ ನಾನು ಮೊದಲೇ ಹೇಳಿದ್ದೆ. ಇದು ಹಳ್ಳ ಹಿಡಿಯುತ್ತೆ ಎಂದು. ದಿನಕ್ಕೊಂದು ಕಪೋಲ ಕಲ್ಪಿತ ವರದಿಗಳು ಬರುತ್ತಿವೆ. ಕೆಲವು ಮಾಧ್ಯಮಗಳು ಅದರದ್ದೇ ಆದ ರೀತಿಯ ವರದಿಗಳನ್ನು ಮಾಡುತ್ತಿವೆ. ಆ್ಯಂಕರ್ ಅನುಶ್ರೀ ವಿಚಾರದಲ್ಲಿ ಕೂಡಾ ಇಂತದ್ದೇ ವರದಿಗಳು ಬರ್ತಿವೆ
ಕೆಲವು ಪ್ರಭಾವಿ ರಾಜಕಾರಣಿಗಳ ಕೈವಾಡ ಇದೆ. ಆಕೆಯ ಕಾಲ್ ಲಿಸ್ಟ್ ನಲ್ಲಿ ಎರಡು ಬಾರಿ ಸಿಎಂ ಆಗಿದ್ದವರು, ಎಂದೆಲ್ಲಾ ವರದಿಗಳು ಬರ್ತಿವೆ. ಯಾರು ಆ ಮಾಜಿ ಮುಖ್ಯಮಂತ್ರಿ ಎಂಬ ಹೆಸರನ್ನಾದರೂ ಹೇಳ ಬೇಕಲ್ಲಾ..?. ನಾನು ಯಾರು ಈ ವರದಿ ಕೊಟ್ಟಿದ್ದಾರೋ, ಆ ವರದಿಗಾರರ ಬಳಿ ಬೇರೆ ಮೂಲದಿಂದ ತಿಳಿದುಕೊಂಡೆ. ಆತನ ಬಳಿ ಯಾರೋ ಶಿವಪ್ರಕಾಶ್ ಎಂಬ ಅಧಿಕಾರಿ ಮಾತನಾಡಿರುವ ಸಾಧ್ಯತೆ ಇದೆ ಎಂದು ಮಾಹಿತಿ ನೀಡಿದರು.

“ಆ ಮಾಜಿ ಸಿಎಂಗೆ ಶಿಕ್ಷೆ ಆಗಲಿ”

ಯಾವ ಮಾಜಿ ಸಿಎಂ ಅಂತಾ ಜನರು ತಿಳಿದುಕೊಳ್ಳಬೇಕು. ಆ ಮಾಜಿ ಸಿಎಂಗೆ ಶಿಕ್ಷೆ ಆಗಲಿ. ನಾನು ಸಿಎಂ ಬಿಎಸ್ ಯಡಿಯೂರಪ್ಪಗೆ, ಗೃಹ ಸಚಿವ ಬಸವರಾಜ್ ಬೊಮ್ಮಾಯಿ
ಗೆ ಪತ್ರ ಬರೆಯುತ್ತೇನೆ. ಮಾಧ್ಯಮಗಳಲ್ಲಿ ಬರುತ್ತಿರುವ ಸುದ್ದಿಗಳಲ್ಲಿ ಸತ್ಯಾಸತ್ಯತೆ ಏನು ಅನ್ನೋದು ಗೊತ್ತಾಗಬೇಕಿದೆ. ಯಾರು ಮಾಹಿತಿ ಕೊಟ್ಟಿದ್ದಾರೆ.. ಯಾರು ಇದ್ದಾರೆ. ಯಾರು ಮಾಜಿ ಸಿಎಂ ಇದ್ದಾರೆ ಅನ್ನೋ ಸತ್ಯ ಗೊತ್ತಾಗಲಿ ಎಂದು ಆಗ್ರಹಿಸಿದರು.

“ಪ್ರಶಾಂತ್ ಸಂಬರಗಿ ತಪ್ಪಿದ್ದರೆ ಒದ್ದು ಒಳಗೆ ಹಾಕಲಿ”

ಪ್ರಶಾಂತ್ ಸಂಬರಗಿ ಯಾರು ಅಂತಾ ಗೊತ್ತೇ ಇಲ್ಲ. ಅವನಿಗೂ ನನಗೂ ಸಂಬಂಧ ಇಲ್ಲ. ದಿನಕ್ಕೊಂದು ಹೇಳಿಕೆ ಕೊಡ್ತಾನೆ. ರಾಜಕಾರಣಿಗಳ ಮಕ್ಕಳು.. ಅವರು ಇವರು ಇದ್ದಾರೆ ಅಂತಾ ಹೇಳ್ತಾನೆ. ಹೆಸರನ್ನೂ ಯಾಕೆ ಅವನು ಹೇಳಲ್ಲ.. ಅವನದ್ದು ತಪ್ಪಿದ್ರೆ ಒದ್ದು ಒಳಗೆ ಹಾಕಲಿ ಎಂದು ತಿಳಿಸಿದರು.

“ಕಪೋಲಕಲ್ಪಿತ ವರದಿಯನ್ನು ಸುಮ್ಮನೆ ಬಿಡಬಾರದು”

ಆ ಮಾಜಿ ಮುಖ್ಯಮಂತ್ರಿ ಯಾರು ಎಂಬುದನ್ನು ಸರ್ಕಾರ ಹೊರ ತರಬೇಕು.ಮಾಜಿ ಮುಖ್ಯಮಂತ್ರಿ ಎಂಬುದನ್ನು ಮಾಧ್ಯಮಗಳಿಗೆ ಕೊಟ್ಟವರು ಯಾರು..? ಮಾದ್ಯಮಗಳು ಸೃಷ್ಟಿ ಮಾಡಿದ್ದೇ ಆದರೆ ಸರ್ಕಾರ ಮಾಧ್ಯಮಗಳ ಮೇಲೆ ಕ್ರಮ ತೆಗೆದುಕೊಳ್ಳಬೇಕು. ಮಾಜಿ ಸಿಎಂ ಮಗ ಎಂದೂ ವರದಿಗಳು ಬರ್ತಿವೆ. ಈ ರೀತಿಯ ಕಪೋಲಕಲ್ಪಿತ ವರದಿಗಳನ್ನು ಸುಮ್ಮನೆ ಬಿಡಬಾರದು. ನಾನಂತೂ ಇದನ್ನು ತನಿಖೆಗೆ ಒತ್ತಾಯ ಮಾಡುತ್ತೇನೆ ಹೇಳಿದರು.

LEAVE A REPLY

Please enter your comment!
Please enter your name here