ನಟಿ ಅನುಷ್ಕಾ ಶೆಟ್ಟಿ `ಇನ್ಮುಂದೆ ಮಾತನಾಡುವುದಿಲ್ಲವಂತೆ’.! ಕಾರಣ ಕೇಳಿದರೆ ನೀವು ಅಚ್ಚರಿ ಪಡುತ್ತಿರಿ.!

0
209

ಮಂಗಳೂರಿನ, ಕನ್ನಡದ ಮುದ್ದಾದ ನಟಿ ಅನುಷ್ಕಾ ಶೆಟ್ಟಿ ಮೂಲತಃ ಕನ್ನಡದವರಾದರು ಕೂಡ ಹೆಚ್ಚು ಹೆಸರು ಮಾಡಿದ್ದು ತೆಲುಗು ಚಿತ್ರರಂಗದಲ್ಲಿ. ತೆಲುಗು ಭಾಷೆಯ ಸಿನಿಮಾಗಳಲ್ಲಿ ಹೆಚ್ಚು ನಟಿಸಿ ಜನರ ಪ್ರೀತಿ ಗಳಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಾಹುಬಲಿ ಸಿನಿಮಾದ ಬಳಿಕ ಅನುಷ್ಕಾ ಅವರು ಹೆಚ್ಚಾಗಿ ಎಲ್ಲೂ ಕಾಣಿಸಿಕೊಂಡಿಲ್ಲ.! ಪ್ರಭಾಸ್ ಅವರ ಸಾಹೋ ಸಿನಿಮಾಗೆ ಶುಭಹಾರೈಕೆ ನೀಡಿದ್ದೆ ಕೊನೆ ಎಂದು ಹೇಳಬಹುದು. ಅನುಷ್ಕಾ ಶೆಟ್ಟಿ ಅವರ ಅಭಿಮಾನಿಗಳು ತಮ್ಮ ನೆಚ್ಚಿನ ನಟಿಯನ್ನು ತೆರೆಯ ಮೇಲೆ ನೋಡಲು ತುದಿಗಾಲಿನಲ್ಲಿ ಕಾಯುತ್ತಿದ್ದಾರೆ ಎನ್ನಬಹುದು. ಆದರೆ ಅನುಷ್ಕಾ ಅವರು ಯಾವ ಸಿನಿಮಾದ ಸಳಿವು ಅವರ ಅಭಿಮಾನಿಗಳಿಗೆ ಸಿಗಲಿಲ್ಲ.

ಅನುಷ್ಕಾ ಅವರಿಗೆ ಬಾಹುಬಲಿ ಸಿನಿಮಾ ನಂತರ ಯಾವ ಸಿನಿಮಾ ಅವಕಾಶಗಳು ಹೆಚ್ಚಾಗಿ ಸಿಗಲಿಲ್ಲ. ಯಾಕೆಂದರೆ ಅವರ ದೇಹದ ತೂಕದ ಕಾರಣದಿಂದಾಗಿ ಹಲವಾರು ಸಿನಿಮಾಗಳ ಆಫರ್‍ಗಳನ್ನು ಕಳೆದುಕೊಂಡಿದ್ದರು. ಈ ಕುರಿತು ಅವರು ವಿದೇಶಕ್ಕೆ ತೆರಳಿ ದೇಹದ ತೂಕ ಇಳಿಸಿಕೊಳ್ಳುವ ಚಿಕಿತ್ಸೆ ಪಡೆದುಕೊಂಡು ಭಾರತಕ್ಕೆ ಹಿಂದಿರುಗಿದ್ದಾರೆ. ಈಗ ಹೊಸ ಸುದ್ದಿ ಕೇಳಿಬಂದಿರುವುದು ಏನೆಂದರೆ, ನಟಿ ಅನುಷ್ಕಾ ಇನ್ನು ಮುಂದೆ ಮಾತನಾಡುವುದಿಲ್ಲವಂತೆ.! ಹೌದು, ಅನುಷ್ಕಾ ತಮ್ಮ ಹೊಸ ಚಿತ್ರ `ನಿಶ್ಬದಂ’ ಸಿನಿಮಾದಲ್ಲಿ ಮಾತುಬಾರದ ಕಲಾವಿದೆಯ ಪಾತ್ರದಲ್ಲಿ ನಟಿಸುತ್ತಿದ್ದಾರೆ.

ದೇಹದ ತೂಕ ಇಳಿಸಿಕೊಂಡಿರುವ ಅನುಷ್ಕಾ ಹೊಸ ರೂಪದಲ್ಲಿ, ಹೊಸ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ. ಹೇಮಂತ್ ಮಧುಕರ್ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಚಿತ್ರದಲ್ಲಿ ಅನುಷ್ಕಾ ಮೂಕ ಕಲಾವಿದೆಯಾಗಿ ನಟಿಸುತ್ತಿದ್ದು, ಈ ಸಿನಿಮಾ ಐದು ಭಾಷೆಗಳಲ್ಲಿ ನಿರ್ಮಾಣವಾಗುತ್ತಿದೆ. ಮಲೆಯಾಳಂ, ತೆಲುಗು, ತಮಿಳು, ಹಿಂದಿ ಮತ್ತು ಇಂಗ್ಲೀಷ್. ಮಾಧವನ್, ಶಾಲಿನಿ ಪಾಂಡೆ, ಆಂಜಲಿ, ಸುಬ್ಬುರಾಜ್ ಮತ್ತು ಮೈಕಲ್ ಮಡೆಸನ್ ಚಿತ್ರದಲ್ಲಿ ಅಬಿನಯಿಸುತ್ತಿದ್ದಾರೆ. ಈ ಒಂದು ಸಿನಿಮಾ ಹಾಲಿವುಡ್‍ನಲ್ಲಿ ಮೂಡಿಬರುತ್ತಿರುವುದು ಸಿನಿಮಾದ ವಿಶೇಷತೆ ಎಂದೇ ಹೇಳಬಹುದು.

LEAVE A REPLY

Please enter your comment!
Please enter your name here