ಹೈದರಾಬಾದಿನಲ್ಲಿ ಮತ್ತೊಂದು ರೇಪ್ ಕೇಸ್.!

0
192

ಹೈದರಾಬಾದ್ ನಲ್ಲಿ ಮತ್ತೊಂದು ಅತ್ಯಾಚಾರ ಪ್ರಕರಣ ಹೊರಬಿದ್ದಿದೆ. ಹೌದು, ಪಶುವೈದ್ಯ ಪ್ರಿಯಾಂಕ ರೆಡ್ಡಿಯವರ ಅತ್ಯಾಚಾರದ ಪ್ರಕರಣ ಮಾಸುವ ಮುನ್ನವೇ ಮತ್ತೊಂದು ಅತ್ಯಾಚಾರದ ಘಟನೆ ನಡೆದಿದೆ. ೧೮ ವರ್ಷದ ಕಾಲೇಜು ವಿದ್ಯಾರ್ಥಿನಿ ಮೇಲೆ ಆಟೋ ಚಾಲಕ ಅತ್ಯಾಚಾರ ಮಾಡಿದ್ದಾನೆ. ಹೈದರಾಬಾದ್ ನಲ್ಲಿ ಕೆಲ ದಿನಗಳ ಹಿಂದೆಯಷ್ಟೇ ಪಶುವೈದ್ಯೆ ಪ್ರಿಯಾಂಕಾ ರೆಡ್ಡಿ ಮೇಲೆ ನಾಲ್ಕು ಕಾಮುಕರು ಅತ್ಯಾಚಾರ ಎಸಗಿ ಜೀವಂತವಾಗಿ ಸುಟ್ಟಿದ್ದರು.

 

 

ಆ ಒಂದು ಪ್ರಕರಣ ಕಳೆದು ಎರಡು ವಾರಗಳು ಕೂಡ ಆಗಿಲ್ಲ. ಅಷ್ಟರೊಳಗೆ ಮತ್ತೊಂದು ಅತ್ಯಾಚಾರದ ಘಟನೆ ನಡೆದುಹೋಗಿದೆ. ೧೮ ವರ್ಷದ ಯುವತಿಯ ಮೇಲೆ ಆಟೋ ಚಾಲಕ ಅತ್ಯಾಚಾರ ಮಾಡಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ನಗರದ ಚಂದ್ರಯಂಗುಟ್ಟ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಡಿಸೆಂಬರ್ ೦೮ ರಂದು ಪ್ರಕರಣ ನಡೆದಿದ್ದು, ತಡವಾಗಿ ಎಲ್ಲರ ಗಮನಕ್ಕೆ ಬಂದಿದೆ. ೧೮ ವರ್ಷದ ಯುವತಿ ಮತ್ತು ಆಕೆಯ ೧೦ ವರ್ಷದ ತಂಗಿ ಇಬ್ಬರು ಕೂಡ ತಮ್ಮ ಅಜ್ಜಿ ಮನೆಗೆ ತೆರಳುವಾಗ ದಿಕ್ಕು ಬದಲಾಗಿದೆ.

 

 

ಆಟೋ ಚಾಲಕನಾಗಿದ್ದ ವ್ಯಕ್ತಿಯ ಹಿರಿಯ ಸಹೋದರ ಹುಡುಗಿಯರನ್ನು ಗುರುತಿಸಿ ಅವರನ್ನು ತನ್ನ ಮನೆಗೆ ಕರೆದೊಯ್ದಿದ್ದಾನೆ. ಇದನ್ನು ಕಂಡ ಚಾಲಕನ ತಾಯಿ ಆ ಹೆಣ್ಣುಮಕ್ಕಳನ್ನು ಅವರ ಮನೆಗೆ ಬಿಟ್ಟು ಬರುವಂತೆ ಹೇಳಿದ್ದಾರೆ. ಇದನ್ನು ಲೆಕ್ಕಿಸದ ಹಿರಿಯ ಸಹೋದರ ೧೮ ವರ್ಷದ ಯುವತಿಯನ್ನು ಹತ್ತಿರದ ಲಾಡ್ಜ್ಗೆ ಕರೆದುಕೊಂಡು ಹೋಗಿ ಅತ್ಯಾಚಾರ ಎಸಗಿದ್ದಾನೆ.

 

 

ಮರುದಿನ ಇಬ್ಬರನ್ನು ಫಲಕ್ನುಮಾ ರೈಲು ನಿಲ್ದಾಣದ ಬಳಿ ಬಿಟ್ಟು ಏಕಾಏಕಿ ಪರಾರಿಯಾಗಿದ್ದಾನೆ ಎಂಬುದನ್ನು ಪೊಲೀಸರು ತಿಳಿಸಿದ್ದಾರೆ. ಯುವತಿ ತನ್ನ ಮನೆಯವರಿಗೆ ಕರೆ ಮಾಡುವಲ್ಲಿ ಯಶಸ್ವಿಯಾಗಿದ್ದು, ಮನೆಯವರನ್ನು ಸುರಕ್ಷಿತವಾಗಿ ಸೇರಿಕೊಂಡಿದ್ದಾಳೆ. ಘಟನೆಯ ವಿವರವನ್ನು ಯುವತಿ ತನ್ನ ಸಂಬಂಧಿಕರಿಗೆ ತಿಳಿಸಿದ್ದು, ಇದನ್ನು ಆಲಿಸಿದ ಕುಟುಂಬಸ್ಥರು ಪೊಲೀಸರಿಗೆ ದೂರು ದಾಖಲಿಸಿದ್ದಾರೆ.

 

 

ಆಟೋ ಚಾಲಕ ಮತ್ತು ಆತನ ಸಹೋದರನ ವಿರುದ್ಧ ಪೊಲೀಸರು ಐಪಿಸಿ ಸೆಕ್ಷನ್ ವಿಭಾಗಗಳಿಗೆ ಕೇಸ್ ದಾಖಲಿಸಿದ್ದು, ಆಟೋ ಚಾಲಕನ ಹಿರಿಯ ಸಹೋದರ ಪತ್ತೆಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ ಎಂಬುದು ತಿಳಿದು ಬಂದಿದೆ.

LEAVE A REPLY

Please enter your comment!
Please enter your name here