ಬೃಹತ್ ವೃಕ್ಷಗಳ `ತಾಯಿ’ಗೆ ಮತ್ತೊಂದು ಪ್ರಶಸ್ತಿಯ ಕಿರೀಟ.!

0
196

ವೃಕ್ಷಗಳ ತಾಯಿ ಎಂದ ತಕ್ಷಣವೇ ನಮ್ಮಗೆಲ್ಲ ತಿಳಿಯುತ್ತದೆ ಆ ಮಹಾತಾಯಿ ಸಾಲುಮರದ ತಿಮ್ಮಕ್ಕ ಎಂಬುದು. ಹೌದು, ಮರಗಳನ್ನು ತನ್ನ ಸ್ವಂತ ಮಕ್ಕಳ ಹಾಗೆ ನೋಡಿಕೊಂಡು ಅವುಗಳನ್ನು ಇಂದಿಗೂ ಸಹ ಪೋಷಿಸುತ್ತಿರುವ ಈ ತಾಯಿಯ ಹೃದಯವಂತಿಕೆ ಶ್ರೀಮಂತವಾದದ್ದು. ಕರ್ನಾಟಕ ಭಾಗದ ರಾಷ್ಟ್ರ ಹೆದ್ದಾರಿ ನಡುವೆ 4 ಕಿ.ಮೀ ದೂರದವರೆಗೂ ಸುಮಾರು 385 ಆಲದ ಮರಗಳನ್ನು, ರಸ್ತೆಯ ಬದಿ ಸಾಲಾಗಿ ನೆಟ್ಟು ಅದನ್ನು ಮಕ್ಕಳಂತೆ ಪೋಷಿಸಿ ಬೆಳಸಿದ್ದಾರೆ.

 

 

ಹುಲಿಕಲ್ ಮತ್ತು ಕಡೂರು ರಸ್ತೆಯ ಮಧ್ಯೆ ಹಾದು ಹೋಗುವಾಗ ಈ ಮರಗಳನ್ನು ವೀಕ್ಷಿಸಬಹುದು. ಅದಲ್ಲದೇ ಕೂಡ 8000ಕ್ಕೂ ಹೆಚ್ಚು ಮರಗಳನ್ನು ಪೋಷಿಸಿ ಹಾರೈಕೆ ಮಾಡಿದ್ದಾರೆ. ಸಾಲು ಮರದ ತಿಮಕ್ಕ ಅವರ ಶ್ರೇಷ್ಟ ಸಾಧನೆಯ ಹಾದಿಗೆ ಇಲ್ಲಿಯವರೆಗೂ ಆನೇಕ ಪ್ರಶಸ್ತಿಗಳ ಸರಮಾಲೆಯೇ ಅವರಿಗೆ ಲಭಿಸಿದೆ. ಇತ್ತೀಚಿಗೆ ನವದೆಹಲಿಯಲ್ಲಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರಿಂದ ಭಾರತೀಯ ಶ್ರೇಷ್ಟವಾದ ಪದ್ಮಶ್ರೀ ಪ್ರಶಸ್ತಿ ದೊರೆಕಿತು. ಇದರ ಜೊತೆಗೆ ವೀರಚಕ್ರ ಪ್ರಶಾಂತಿ ಪ್ರಶಸ್ತಿ ಇನ್ನೂ ಮುಂತಾದ ಪ್ರಶಸ್ತಿಗಳು ಅವರ ನಿಸ್ವಾರ್ಥ ಸೇವೆಗೆ ದೊರಕಿದೆ.

 

 

ಇಂದಿಗೂ ಕೂಡ ಸಾಲು ಮರದ ತಿಮಕ್ಕ ಅವರು, ತಮ್ಮ ಮನೆಯ ಸುತ್ತಮುತ್ತವಿರುವ ಆನೇಕ ಮರ, ಗಿಡಗಳನ್ನು ಆರೈಕೆ ಮಾಡುತ್ತಾ, ಪರಿಸರ ಜಾಗೃತಿ ಮೂಡಿಸುತ್ತಿರುವುದು ಬಹಳ ಖುಷಿಯ ಸಂಗತಿ ಎನ್ನಬಹುದು. ಸದ್ಯ ಸಾಲುಮರದ ತಿಮ್ಮಕ್ಕ ಅವರ ಕೆಲಸಕ್ಕೆ ಮತ್ತೊಂದು ಪ್ರಶಸ್ತಿ ಅವರನ್ನು ಹುಡುಕಿಕೊಂಡು ಬಂದಿದೆ. ಚಾಮರಾಜನಗರ ಜಿಲ್ಲೆಯ ಮಾನಸ ಶಿಕ್ಷಣ ಸಂಸ್ಥೆಯ ಆರ್. ಸಿದ್ದೇಗೌಡ-ಲಿಂಗಮ್ಮ ಅವರ ಸ್ಮರಣಾರ್ಥ ಮಾನಸ ಪ್ರಶಸ್ತಿ 2019 ಎಂಬುದನ್ನು ಸಾಲುಮರದ ತಿಮ್ಮಕ್ಕ ಅವರಿಗೆ ನೀಡಿ ಗೌರವಿಸಬೇಕು ಎಂದು ನಿರ್ಧಾರ ಮಾಡಿದೆ.

 

 

ಚಾಮರಾಜನಗರ ಜಿಲ್ಲೆಯ ಕೊಳ್ಳೆಗಾಲ ತಾಲ್ಲೂಕಿನ ಮಾನಸ ಶಿಕ್ಷಣ ಸಂಸ್ಥೆ ಹಮ್ಮಿಕೊಂಡಿರುವ ಮಾನಸೋತ್ಸವ ಕಾರ್ಯಕ್ರಮ ಇದೇ 27 ರಿಂದ 29 ರವರೆಗೂ ನಡೆಯಲಿದೆ. 27ರ ಬೆಳಗ್ಗೆ ಸಮಯ 10ಕ್ಕೆ ಸಚಿವ ಸಿ.ಟಿ. ರವಿ ಅಗಮಿಸಲಿದ್ದು, ಪ್ರಶಸ್ತಿಯನ್ನು ಸಾಲುಮರದ ತಿಮ್ಮಕ್ಕ ಅವರಿಗೆ ನೀಡಿ ಗೌರವಿಸಲಿದ್ದಾರೆ. ಎಂದಿನಂತೆ ಪ್ರತಿ ವರ್ಷವೂ ಹಮ್ಮಿಕೊಳ್ಳುವ ಈ ಕಾರ್ಯಕ್ರಮದಲ್ಲಿ ಹಲವು ಹಿರಿಯ ಸಾಧಕರಿಗೆ ಪ್ರಶಸ್ತಿ ನೀಡಲಾಗುತ್ತಿದೆ.

 

 

ಈ ವರ್ಷದ ಕಾರ್ಯಕ್ರಮದಲ್ಲಿ ನೀಡುವ ಪ್ರಶಸ್ತಿಯ ಮೊತ್ತವನ್ನು ಕೂಡ 25 ಸಾವಿರ ರೂ. ನಿಂದ 40 ಸಾವಿರ ರೂ.ಗೆ ಏರಿಕೆ ಮಾಡಲಾಗಿದೆ ಎಂದು ಸಂಸ್ಥೆ ತಿಳಿಸಿದೆ.

LEAVE A REPLY

Please enter your comment!
Please enter your name here