ಕರುನಾಡ ಆರಾಧ್ಯ ದೈವ ಡಾ॥ ರಾಜ್ ಕುಮಾರ್ ಅವರ ಕುಟುಂಬದಿಂದ ಈಗಾಗಲೇ ಇಬ್ಬರು ಮೊಮ್ಮಕ್ಕಳಾದ ವಿನಯ್ ರಾಜ್ ಕುಮಾರ್ ಹಾಗೂ ಯುವ ರಾಜ್ ಕುಮಾರ್ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಇದೀಗ ಅವರ ಮೊಮ್ಮಗಳಾದ ಧನ್ಯಾ ಅವರು ಸಹಿತ ‘ನಿನ್ನ ಸನಿಹಕೆ’ ಎಂಬುವ ಚಿತ್ರದ ಮೂಲಕ ಚಂದನವನಕ್ಕೆ ಕಾಲಿಟ್ಟಿದ್ದಾರೆ..
ಯಾರು ಧನ್ಯ ?ಯಾರ ಮಗಳು?
ಧನ್ಯಾ ಅವರು ಪೂರ್ಣಿಮಾ ಮತ್ತು ರಾಮ್ ಕುಮಾರ್ ದಂಪತಿಗಳ ಪುತ್ರಿ! ಇನ್ನು ರಾಜ್ ಅವರ ಮೊಮ್ಮಗಳನ್ನು ಬೆಳ್ಳಿ ತೆರೆಯ ಮೇಲೆ ನೋಡಲು ಸಿನಿಪ್ರಿಯರು ಕುತೂಹಲದಿಂದ ಕಾಯುತ್ತಿದ್ದಾರೆ.. ಇನ್ನು ಈ ಚಿತ್ರಕ್ಕೆ ನಾಯಕನಾಗಿ ‘ಸೂರಜ್ ಗೌಡ’ ಅವರನ್ನು ಆರಿಸಲಾಗಿದೆ. ‘ಮದುವೆಯ ಮಮತೆಯ ಕರೆಯೋಲೆ!’ ಚಿತ್ರದಿಂದ ಕೆಎಫ್ಐ ಗೆ ಎಂಟ್ರಿ ಕೊಟ್ಟ ನಟ ಸೂರಜ್ ಗೌಡ. ಕಹಿ ಮತ್ತು ಸಿಲಿಕಾನ್ ಸಿಟಿ ಚಿತ್ರಗಳಲ್ಲಿನ ವಿಭಿನ್ನವಾದ ಪಾತ್ರದ ಮೂಲಕ ಪ್ರೇಕ್ಷಕರ ಹೃದಯ ಗೆದ್ದಿದ್ದಾರೆ!
ಇನ್ನು ಚಿತ್ರಕ್ಕೆ ಆಕ್ಷನ್ ಕಟ್ ಹೇಳಿರುವುದು ‘ಸುಮನ್ ಜಾದೂಗರ್ ‘! ‘ನಿನ್ನ ಸನಿಹಕೆ’,
ನಮ್ಮ ಸುತ್ತಮುತ್ತವೇ ನಡೆಯುವ ಕಥೆ ಆ ಕಥೆಯಲ್ಲಿ ಹೊಸತನ ರಿಯಾಲಿಟಿ ಮತ್ತು ಕಾಮಿಡಿ, ಪ್ರೀತಿ ವೆಳೈಸಿರುವ ಕಥೆಯೊಂದನ್ನು ಪ್ರೇಕ್ಷಕರಿಗೆ ಇಷ್ಟವಾಗುವಂತೆ ರೆಡಿ ಮಾಡಿದ್ದಾರಂತೆ!
ಇನ್ನು ಸುಮನ್ ಜಾದುಗಾರ್ ಸಿಲಿಕಾನ್ ಸಿಟಿ ಚಿತ್ರದಲ್ಲಿ ಕೊ ಡೈರೆಕ್ಟರ್ ಆಗಿದ್ದು ಮತ್ತು ನಟ ‘ಕಮಲ್ ಹಾಸನ್’ ಅವರ ‘ಉತ್ತಮ ವಿಲನ್ ‘ಚಿತ್ರಕ್ಕೆ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿರುವ ಅನುಭವ ಇದೆ..
ಇನ್ನು ‘ನಿನ್ನ ಸನಿಹಕೆ’ ಚಿತ್ರದ ಮೊದಲ ಪೋಸ್ಟರ್ ಬಿಡುಗಡೆಯಾಗಿದ್ದು ಧನ್ಯ ರಾಮಕುಮಾರ್ ಅವರು ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದಾರೆ !
ಸಿನಿಮಾದ ಫಸ್ಟ್ ಲುಕ್ ಹಾಗೂ ಟೈಟಲ್ ನೋಡಿದರೆ ಇದೊಂದು ಲವ್ ಸ್ಟೋರಿ ಸಿನಿಮಾ ಎಂಬುದು ತಿಳಿಯುತ್ತದೆ!
ಇನ್ನು ಚಿತ್ರಕ್ಕೆ ರಘು ದೀಕ್ಷಿತ್ ಅವರು ಸಂಗೀತ ಸಂಯೋಜನೆ ಮಾಡಲಿದ್ದು, ಸದ್ಯ ಚಿತ್ರ ತಂಡ ಪ್ರೀ ಪ್ರೊಡಕ್ಷನ್ ನಲ್ಲಿ ಬ್ಯುಸಿಯಾಗಿದೆ