ಆಂಧ್ರ ವಿಧಾನಸಭೆಯಲ್ಲಿ ಸಿಎಂ ಅತ್ಯಾಚಾರಿಗಳ ವಿರುದ್ಧ ಕೈಗೊಂಡ ಐತಿಹಾಸಕ ನಿರ್ಣಯವೇನು ಗೊತ್ತಾ.!

0
442

ರಾಜ್ಯದಲ್ಲಿ ಅತ್ಯಾಚಾರಿಗಳ ಆರ್ಭಟ ದಿನದಿಂದ ದಿನಕ್ಕೆ ಜೋರಾಗಿದ್ದು, ಇದಕ್ಕೆ ಒಂದು ಗಂಭೀರ ನಿರ್ಣಯ ಬೇಕಾಗಿತ್ತು. ರಾಜ್ಯ ಸೇರಿದಂತೆ ದೇಶದ ಆನೇಕ ಕಡೆ ಇಲ್ಲಿಯವರೆಗೂ ನಡೆದಿರುವ ಅತ್ಯಾಚಾರದ ಪ್ರಕರಣಗಳಿಗೆ ಸಂಬಂಧಿಸಿದ ಆರೋಪಿಗಳಿಗೆ ಯಾವುದೇ ರೀತಿಯಲ್ಲೂ ಕಠಿಣ ಶಿಕ್ಷೆ ದೊರೆತ್ತಿರಲಿಲ್ಲ. ಆದರೆ ಇತ್ತೀಚಿಗೆ ಹೈದ್ರಾಬಾದ್ ನಲ್ಲಿ ನಡೆದ ಪಶುವೈದ್ಯೆ ಪ್ರಿಯಾಂಕಾ ರೆಡ್ಡಿ ಅತ್ಯಾಚಾರದ ಪ್ರಕರಣ ಇಡೀ ದೇಶವೇ ಬೆಚ್ಚಿ ಬೀಳುವಂತೆ ಮಾಡಿತ್ತು.

 

ಈ ಪ್ರಕರಣ ಕುರಿತು ಹಲವು ಸಂಘಟನೆ, ಸಮಾಜಮುಖಿ ಹೋರಾಟಗಾರರು ಪ್ರತಿಭಟನೆ ನಡೆಸಿದರು. ಅತ್ಯಾಚಾರಿಗಳನ್ನು ಪೋಲಿಸರು ಬಂಧಿಸಿದ್ದರು ಎಂಬ ಸುದ್ಧಿ ಕೇಳಿಬಂದಿತ್ತು. ಆರೋಪಿಗಳಿಗೆ ಕಠಿಣ ಶಿಕ್ಷೆ ಆಗಬೇಕೆಂದು ಜನರು ಆಗ್ರಹಿಸಿದ್ದರು ಅದಕ್ಕೆ ತಕ್ಕಂತೆ ತೆಲಂಗಾಣ ಪೊಲೀಸ್ ಕಮೀಷನರ್ ವಿ.ಸಿ. ಸಜ್ಜನರ್ ಅವರು 4 ಆರೋಪಿಗಳನ್ನು ಎನ್‍ಕೌಂಟರ್ ಮಾಡಿದರು. ಇದರಿಂದ ಆರೋಪಿಗಳಿಗೆ ಕಾನೂನು ನೀಡುವ ಶಿಕ್ಷೆಗೆ ಕಾಯದೆ ವೇಗವಾಗಿ ಶಿಕ್ಷೆಯನ್ನು ವಿಧಿಸಿದರು ಎಂಬುದು ಖುಷಿಯ ವಿಚಾರ.

 

ಸಜ್ಜನರ್ ಅವರ ನಿರ್ಧಾರದಿಂದ ದೇಶದ ಆನೇಕ ಕಡೆಯಿಂದ ಅವರ ಕೆಲಸಕ್ಕೆ ಭಾರಿ ಮೆಚ್ಚುಗೆ ವ್ಯಕ್ತಗೊಂಡಿತ್ತು. ಇದರ ಬೆನ್ನಲ್ಲೇ ಆಂಧ್ರ ಪ್ರದೇಶ ಸರ್ಕಾರ ಅತ್ಯಾಚಾರ ಪ್ರಕರಣಗಳನ್ನು ತಡೆಯಬೇಕು ಎಂಬ ನಿಟ್ಟಿನಲ್ಲಿ ದಿಶಾ ಮಸೂದೆ 2019 ಅನ್ನು ಸದನದಲ್ಲಿ ಮಂಡಿಸಿತ್ತು. ಈ ಮಸೂದೆಯು ಇಂದು ಸಿಎಂ ಜಗನ್ ಮೋಹನ್ ಅವರ ಮುಂದಾಳತ್ವದಲ್ಲಿ ವಿಧಾನಸಭೆಯಲ್ಲಿ ನಡೆಯಿತು.

 

ಜಗನ್ ಮೋಹನ್ ಅವರ ಮಾತಿನಂತೆ ಈ ಮಸೂದೆಯು ಸುದೀರ್ಘ ಚರ್ಚೆಯೊಂದಿಗೆ ಸರ್ವಾನುಮತದಿಂದ ಅಂಗೀಕಾರಗೊಂಡಿತು. ದಿಶಾ ಮಸೂದೆಯ ಪ್ರಕಾರ ಇನ್ನು ಮುಂದೆ ಯಾರು ಅತ್ಯಾಚಾರದ ಕೃತ್ಯವನ್ನು ಮಾಡಬಾರದು. ಅತ್ಯಾಚಾರದ ಆರೋಪ ಸಾಬೀತಾದರೆ ಎಫ್‍ಐ ಆರ್ ದಾಖಲಾದ 21 ದಿನಗಳೊಳಗೆ ಅವರಿಗೆ ಗಲ್ಲು ಶಿಕ್ಷೆಯನ್ನು ವಿಧಿಸಲಾಗುತ್ತದೆ ಎಂಬುದು ದಿಶಾ ಮಸೂದೆಯ ಮುಖ್ಯ ಉದ್ದೇಶವಾಗಿದೆ. ಆಂಧ್ರ ಪ್ರದೇಶದ ಸಿಎಂ ಜಗನ್ ಮೋಹನ್ ಅವರು ಈ ಒಂದು ಐತಿಹಾಸಿಕ ನಿರ್ಣಯವನ್ನು ತೆಗೆದುಕೊಂಡಿದ್ದಾರೆ.

LEAVE A REPLY

Please enter your comment!
Please enter your name here