ಗ್ಯಾಂಗ್ ಸ್ಟರ್ ಮಗಳ ವೇಷ ಧರಿಸಿ ಜೈಲಿನಿಂದ ಪರಾರಿಯಾಗಲು ವಿಫಲ ಪ್ರಯತ್ನ

0
112

ಹೆಣ್ಣಿನ ವೇಷ ಧರಿಸಿ ಬ್ರೆಜಿಲ್ ನ ಕೈದಿ ಜೈಲಿನಿಂದ ಪರಾರಿಯಾಗಲು ಪ್ರಯತ್ನ ಮಾಡಿದ್ದಾನೆ.
ಅವನು ಈ ಪ್ರಯತ್ನದಲ್ಲಿ ಸಫಲನಾಗದೆ ಮತ್ತೆ ಪೊಲೀಸರ ಕೈಗೆ ಸಿಕ್ಕಿಬಿದ್ದು ಜೈಲು ಪಾಲಾಗಿದ್ದಾನೆ.
ಕೈದಿಗಳು ಜೈಲಿನಿಂದ ಪರಾರಿಯಾಗಲು ಎಂತೆಂತಹ ಪ್ರಯತ್ನ ಮಾಡುತ್ತಾರೆ ಎನ್ನುವುದಕ್ಕೆ ಇವನು ಉದಾಹರಣೆ ಆಗಿದ್ದಾನೆ.
ಬ್ರೆಜಿಲ್ಲಿನಲ್ಲಿ ಡ್ರಗ್ಸ್ ಹಾಗೂ ಇತರೆ ಕಾನೂನು ಬಾಹಿರ ಚಟುವಟಿಕೆಗಳನ್ನು ನಡೆಸುವ ಗುಂಪಿನ ನಾಯಕನಾಗಿದ್ದ ಕ್ಲಾವಿನೋ ಡಾ ಸಿಲ್ವಾ ಎಂಬಾತ ಜೈಲಿನಿಂದ ಎಸ್ಕೇಪ್ ಆಗಲು ಪ್ಲಾನ್ ಮಾಡಿ ಸಿಕ್ಕಿಬಿದ್ದಿದ್ದಾನೆ.
ಅವನು ಜೈಲಿನಿಂದ ತಪ್ಪಿಸಿಕೊಳ್ಳಲು ಪ್ಲಾನ್ ಮಾಡುತ್ತಿರುವ ವೇಳೆ ಅದೃಷ್ಟ ಎನ್ನುವಂತೆ ಅವನ ಮಗಳು ಅವನನ್ನು ನೋಡಲು ಜೈಲಿಗೆ ಬಂದಿದ್ದಳು.
ಆಗ ಇವನು ಮಗಳ ವೇಷಧರಿಸಿ ಅವಳನ್ನು ಜೈಲಿನಲ್ಲಿ ಇರಿಸಿ ಅವನು ಜೈಲಿನಿಂದ ಎಸ್ಕೇಪ್ ಆಗಲು ಪ್ರಯತ್ನಿಸಿದ್ದಾನೆ.
ಯಾರಿಗೂ ತಿಳಿಯದಂತೆ ಆತ ತನ್ನ ಮಗಳಂತೆ ವೇಷ ಧರಿಸಿ ಬಟ್ಟೆ , ವಿಗ್ , ಹಾಗೂ ಮುಖವಾಡ ಧರಿಸಿ ಸಿದ್ಧನಾಗಿ ಜೈಲಿನಿಂದ ಎಸ್ಕೇಪ್ ಆಗಲು ಹೊರಬರುತ್ತಿರುವಾಗ ಹೆಣ್ಣು ವೇಷ ಧರಿಸಿದ ಆ ಕೈದಿ ವಿಚಿತ್ರ ವರ್ತನೆ ಮಾಡುತ್ತಿದ್ದ ಅದನ್ನು ಗಮನಿಸಿದ ಪೊಲೀಸರು ಆತನನ್ನು ನಿಲ್ಲಿಸಿ ಪರಿಶೀಲನೆ ನಡೆಸಿದರು ಆಗ ನಿಜಾಂಶ ಹೊರಬಿದ್ದಿದೆ
ಪೊಲೀಸರು ಮತ್ತೆ ಆತನನ್ನು ಬಂದಿಸಿ , ಆತ ಮತ್ತೆ ತಪ್ಪಿಸಿಕೊಳ್ಳಲು ಆಗದಂತೆ ಬಿಗಿ ಬಂದೋಬಸ್ತ್ ಮಾಡಿದ್ದಾರೆ.
ಹಾಗೂ ಈತನು ತನ್ನ ವೇಷ ಕಳಚುವಾಗ ಪೊಲೀಸರು ಅದನ್ನು ವಿಡಿಯೋ ಮಾಡಿದ್ದಾರೆ.
ಆ ವಿಡಿಯೋ ಎಲ್ಲ ಕಡೆ ವೈರಲ್ ಆಗಿ ಸುದ್ದಿ ಮಾಡಿದೆ.
ಇದಾದ ನಂತರ ಸಿಲ್ವಾ ಪೊಲೀಸರ ಬಿಗಿ ಬಂದೋಬಸ್ತ್ ನಲ್ಲಿ ಇಟ್ಟಿದ್ದಾರೆ ಅವನ ಕೊಠಡಿಯನ್ನು ಕೂಡ ಶಿಫ್ಟ್ ಮಾಡಿದ್ದಾರೆ.
ಇವನಿಗೆ ವಿಶೇಷ ಭದ್ರತೆಯನ್ನು ಕೂಡ ಮಾಡಿದ್ದಾರೆ ಮತ್ತೆ ಅವನು ಎಸ್ಕೇಪ್ ಆಗದಂತೆ ನೋಡಿಕೊಳ್ಳುತ್ತಿದ್ದಾರೆ.

LEAVE A REPLY

Please enter your comment!
Please enter your name here