ಪತ್ನಿಗೆ ವಿಷ ಕುಡಿಸಿ ತಾನೂ ಆತ್ಮಹತ್ಯೆಗೆ ಶರಣಾದ ವೃದ್ಧ

0
175

ವೃದ್ಧನೊಬ್ಬ ಪತ್ನಿಗೆ ವಿಷ ಕುಡಿಸಿ, ನಂತರ ತಾನೂ ವಿಷ ಕುಡಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಗಿರಿನಗರದಲ್ಲಿ ನಡೆದಿದೆ.
ಗಿರಿನಗರದ ನಿವಾಸಿ ಕೃಷ್ಣಮೂರ್ತಿ ಹಾಗೂ ಸ್ವರ್ಣ ಮೃತ ಪಟ್ಟ ವ್ಯಕ್ತಿಗಳು. ಕೃಷ್ಣಮೂರ್ತಿ ಅವರು ಮೊದಲು ಪತ್ನಿ ಸ್ವರ್ಣ ಅವರಿಗೆ ವಿಷ ಕುಡಿಸಿದ್ದಾರೆ. ನಂತರ ತಾವು ಕೂಡ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಸ್ವರ್ಣ ಅವರು ಕಳೆದ ಕೆಲವು ದಿನಗಳಿಂದ ಅನಾರೋಗ್ಯಕ್ಕೆ ತಗುರಿಯಾಗಿದ್ದರು. ಹಾಸಿಗೆ ಹಿಡಿದ ಅವರನ್ನು ಆರೈಕೆ ಮಾಡಬೇಕಾದ ಮಗ ಹಾಗೂ ಸೊಸೆ ಅವರ ಮೇಲೆ ಕಾಳಜಿ ತೋರುತ್ತಿರಲಿಲ್ಲ. ಅಷ್ಟೇ ಅಲ್ಲದೆ ಸಣ್ಣಪುಟ್ಟ ವಿಚಾರಕ್ಕೂ ವೃದ್ಧ ದಂಪತಿಯ ಜೊತೆಗೆ ಜಳವಾಡುತ್ತಿದ್ದರು. ಇದರಿಂದ ಮನನೊಂದು ದಂಪತಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.
ಈ ಕುರಿತು ಗಿರಿನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ.

LEAVE A REPLY

Please enter your comment!
Please enter your name here