ಜಗತ್ತನ್ನೇ ಮತ್ತೆ ರೂಪಿಸುವ ‘ಅಮೃತ ಕುಂಭ’ ಇರುವುದು ಕರ್ನಾಟಕದಲ್ಲೇ..!

0
431

ಕರ್ನಾಟಕ ಹಲವು ದೇವಾಲಯಗಳನ್ನು ಒಳಗೊಂಡಿರುವ ರಾಜ್ಯ. ಒಂದು ರಾಜ್ಯ ಹಲವು ಜಗತ್ತು ಎಂಬುದು ಇಲ್ಲಿನ ಪ್ರಸಿದ್ಧ ಮಾತು. ಆದರೆ ಇಲ್ಲಿನ ಕಥೆಗಳು ಮತ್ತು ಪುರಾಣ ಐತಿಹಾಸಿಕ ಉಲ್ಲೇಖಗಳು ನಿಜಕ್ಕೂ ಕರ್ನಾಟವನ್ನು ವಾಹ್ ಎನ್ನುವಂತೆ ಮಾಡುತ್ತವೆ.

ಆದಿ ರಂಗ, ಮಧ್ಯರಂಗ ಮತ್ತು ಅಂತ್ಯ ರಂಗ ಅತ್ಯಂತ ಪವಿತ್ರ ಕ್ಷೇತ್ರಗಳು. ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣದಲ್ಲಿ ಆದಿ ರಂಗ ಇದ್ದರೆ, ಇದೇ ಜಿಲ್ಲೆಯ ಶಿವನಸಮುದ್ರದ ಬಳಿ ನೆಲೆನಿಂತಿರುವ ಶ್ರೀರಂಗನಾಥಸ್ವಾಮಿಯನ್ನು ಮಧ್ಯ ರಂಗ ಎನ್ನುತ್ತಾರೆ. ಇನ್ನು ತಮಿಳುನಾಡಿನ ಶ್ರೀರಂಗನು ಅಂತ್ಯ ರಂಗ ಎಂದೇ ಖ್ಯಾತಿ ಪಡೆದುಕೊಂಡಿದ್ದು ಮೂರು ಕ್ಷೇತ್ರಗಳನ್ನು ಕಾವೇರಿ ನದಿ ಸುತ್ತುವರೆದಿರುವುದು ವಿಶೇಷತೆ. ಮೂರು ಕ್ಷೇತ್ರಗಳ ಸಂದರ್ಶನವನ್ನು ಒಂದೇ ದಿನ ಮಾಡಿದ್ರೆ ಪುಣ್ಯ ಲಭಿಸುತ್ತೆ ಅನ್ನೋದು ಆಸ್ತಿಕರ ನಂಬಿಕೆ.

ಈ ರಂಗನಾಥಸ್ವಾಮಿ ಭಕ್ತರ ಕಣ್ಮನ ಸೆಳಯುವ ರೂಪದಲ್ಲಿರುವುದರಿಂದ ಜನರು ಮಧ್ಯ ರಂಗನನ್ನು ಜಗನ್ಮೋಹನ ಎಂದು ಕರೆಯುತ್ತಾರೆ. ಇಲ್ಲಿ ಶ್ರೀರಂಗನಿಗೆ ಹೂವಿನ ಹಾರದಂತೆ ಹರಿಯುತ್ತಿದ್ದ ಕಾವೇರಿ ನದಿಗೆ ಹೆಬ್ಬಂಡೆ ರೂಪದಲ್ಲಿ ರಾಕ್ಷಸನೊಬ್ಬ ಅಡ್ಡಿಯಾಗುತ್ತಾನೆ. ಕಾವೇರಿಗೆ ಅಡ್ಡಿಪಡಿಸಿ ಶ್ರೀರಂಗನಿಗೆ ಉಪಟಳ ನೀಡಿದೆ ರಾಕ್ಷಸನ ವಿರುದ್ಧ ಸಾಕ್ಷಾತ್ ಪರಶಿವನೇ ಧರೆಗಿಒಳಿದು ಬಂದು ರಕ್ಕಸನ ಸಂಹಾರ ಮಾಡುತ್ತಾನೆ ಈ ಕಾರಣಕ್ಕೆ ಇಲ್ಲಿನ ಕ್ಷೇತ್ರ ಶಿವನ ಸಮುದ್ರ ಎಂದು ಹೆಸರುವಾಸಿಯಾಗಿದೆ.

ಪುರಾಣ ಕಾಲದಲ್ಲಿ ದೇವರಾಜನಾದ ದೇವೆಂದ್ರನಿಗೆ ಶಾಪವಾಗಿರುತ್ತದೆ. ಶಾಪವಿಮೋಚನೆಗಾಗಿ ದೇವೆಮದ್ರನಿಗೆ ಸಪ್ತರ್ಷಿಗಲು ಸಾಲಿಗ್ರಾಮ ವಿಗ್ರಹದಲ್ಲಿ ಮಹಾವಿಷ್ಣುವನ್ನು ಸ್ಥಾಪಿಸುವಂತೆ ಸೂಚಿಸುತ್ತಾರೆ. ಇಲ್ಲಿ ದೇವೆಂದ್ರ ಸ್ಥಾಪಿಸಿದ ಆ ವಿಗ್ರಹವೇ ಶೇಷಶಯನ ಶ್ರೀರಂಗನಾಥಸ್ವಾಮಿ. ಪಕ್ಕದಲ್ಲೇ ಇರುವ ಭರಚುಕ್ಕಿ ಸ್ಥಳದಲ್ಲಿ ಸಪ್ತರ್ಷಿಗಲು ಪವಿತ್ರ ಸ್ನಾನ ಮಾಡುವ ಕಾರಣದಿಮದಲೇ ಈ ಕ್ಷೇತ್ರ ಸಪ್ತರ್ಷಿ ಕ್ಷೇತ್ರ ಎಂದು ಚಿರಪರಿಚಿತವಾಗಿದೆ.

ಈ ದೇವಾಲಯದ ಶ್ರೀರಂಗನಾಥಸ್ವಾಮಿಯ ವಿಗ್ರಹದ ಕೆಳಗೆ ಅಂದರೆ 60 ಅಡಿಗಳ ಆಳದಲ್ಲಿ ಮುನಿಗಳು ಅಮೃತಕುಂಭವನ್ನು ಸ್ಥಾಪಿಸಿದ್ದಾರೆ. ಇದು ಪ್ರಳಯದ ನಂತರ ಇಡೀ ಜಗತ್ತನ್ನು ಪುನಶ್ಚೇತಗೊಳಿಸುವ ಶಕ್ತಿ ಹೊಂದಿದೆ. ಈ ಕುಂಭವನ್ನು ದುರ್ಗಾದೇವಿ ಮತ್ತು ಆಂಜನೇಯಸ್ವಾಮಿ ರಕ್ಷಿಸುತ್ತಿದ್ದಾರೆ ಎಂಬ ನಂಬಿಕೆಗಳಿವೆ. ಇಲ್ಲಿ ಸರ್ಪಲೋಕದ ಒಡೆಯ ತಕ್ಷ ಅವನೇ ಇಲ್ಲಿನÀ ಕ್ಷೇತ್ರ ಪಾಲಕನಾಗಿದ್ದು ದೇವಾಲಯದ ಒಳಗಡೆ ವಿಗ್ರಹವಿದೆ. ಇನ್ನು ಶಿವನ ಸಮುದ್ರ ಮತ್ತು ಮಧ್ಯರಂಗನ ಇತಿಹಾಸವನ್ನು ಬೆಂಗಳೂರಿನ ಹಲಸೂರಿನ ಶ್ರೀ ಸೋಮೇಶ್ವರ ದೇವಾಲಯದಲ್ಲಿನ ಶಿಲಾಶಾಸನ ಹೇಳುತ್ತಿದೆ.

LEAVE A REPLY

Please enter your comment!
Please enter your name here