ನನ್ನ ಆಸ್ತಿಯಲ್ಲಿ ಎಷ್ಟು ಪಾಲು ನನ್ನ ಮಗನಿಗಿದೆಯೋ, ಅಷ್ಟೇ ಪಾಲು ನನ್ನ ಮಗಳಿಗೂ ಇದೆ ಎಂದು ಬಾಲಿವುಡ್ ಬಿಗ್ ಬಿ ಅಮಿತಾಬ್ ಬಚ್ಚನ್ ಹೇಳಿದ್ದಾರೆ. ತಮ್ಮ ಆಸ್ತಿಯ ವಿಲ್ಲ್ ಬಗ್ಗೆ ಪತ್ರಕರ್ತರ ಪಶ್ನೆಗೆ ಉತ್ತರಿಸಿರುವ ಅವರು ಅಭಿಷೇಕ್ ಬಚ್ಚನ್ ಒಬ್ಬನೇ ನನ್ನ ಆಸ್ತಿಯ ವಾರಸುದಾರನಲ್ಲ,ನನ್ನ ಆಸ್ತಿಯಲ್ಲಿ ನನ್ನ ಮಗಳಿಗೂ ಸಮಾನಾ ಪಾಲು ಸಿಗಲಿದೆ ಎಂದು ಹೇಳಿದ್ದಾರೆ.

ಭೇಟಿ ಪಡಾವೂ,ಭೇಟಿ ಬಚಾವೊ ಅಭಿಯಾನದ ರಾಯಭಾರಿಯಾಗಿರುವ ಅವರು ಪಿತೃ ಪ್ರಧಾನ ವ್ಯವಸ್ತೆಯನ್ನು ತೆಗೆಯಲು ಹೀಗೆ ಮಾಡಿರುವುದಾಗಿ ಸುದ್ಧಿಗೋಷ್ಟಿಯೊಂದಿಗೆ ಹೇಳಿದ್ದಾರೆ. ತಮಗೆ ಅಭಿಷೇಕ್ ಬೇರೆ ಅಲ್ಲ,ಶ್ವೇತ ಬೇರೆ ಅಲ್ಲ ಎಂದಿದ್ದಾರೆ. ಇತ್ತೀಚಿಗೆ ಶ್ವೇತ ಬಚ್ಚನ್
ಪಾರಡೈಸ್ ಸ್ಟೋವರ್’ ಎಂಬು ಕಾಂದಬರಿ ಬಿಡುಗಡೆ ಮಾಡಿದ್ದು,ಈ ಪುಸ್ತಕ ಬೆಸ್ಟ್ ಸೆಲ್ಲರ್ ಲಿಸ್ಟ್ಗೆ ಸೇರಿದೆ. ಅದಕ್ಕಾಗಿ ಬಿಗ್ ಬಿ ತಮ್ಮ ಮಗಳಿಗೆ ಅಭಿನಂದಿಸುತ್ತ ಈ ರೀತಿ ಹೇಳಿದ್ದಾರೆ!
