`ನಿಮ್ಮ ಮಾತೃ ಭಾಷೆಯ ಜೊತೆ ಹಿಂದಿಯ ಬಳಕೆಯನ್ನೂ ಕೂಡ ಹೆಚ್ಚಿಸಿ’ : ಅಮಿತ್ ಶಾ..!

0
231

ಇಂದು ಸೆಪ್ಟಂಬರ್ 14ರ ದಿನವನ್ನು ದೇಶಾದ್ಯಂತ ಹಿಂದಿ ದಿನವೆಂದು ಅಚರಣೆ ಮಾಡಲಾಗುತ್ತಿದ್ದು, ನರೇಂದ್ರ ಮೋದಿ ಅವರು ಸರ್ಕಾರ ಆಡಳಿಕ್ಕೆ ಬಂದ ದಿನದಿಂದಲೇ ದೇಶದಲ್ಲಿ ಹಿಂದಿ ಹೇರಿಕೆ ಜಾಸ್ತಿಯಾಗಿರುವುದು ಎಂಬುದು ಹಲವರ ಆರೋಪ. ಗೃಹ ಸಚಿವರಾಗಿರುವ ಅಮಿತ್ ಶಾ ಅವರು ದೇಶದಲ್ಲಿ ಶನಿವಾರ ಸೆಪ್ಟಂಬರ್ 14ರಂದು ಹಿಂದಿ ದಿವಸವಾಗಿ ಅಚರಣೆಯಾಗುತ್ತಿರುವುದು ಸಂತಸದ ವಿಷಯ.! “ಒಂದು ದೇಶ ಒಂದು ಭಾಷೆ’, ಕನಸನ್ನು ನನಸು ಮಾಡಬೇಕು ಎಂದು ಟ್ವೀಟ್ ಮಾಡುವ ಮೂಲಕ ಅಮಿತ್ ಶಾ ಹೇಳಿಕೊಂಡಿದ್ದಾರೆ. ಅಮಿತ್ ಶಾ ಮಾಡಿರುವ ಟ್ವೀಟ್ ಗಮನಿಸಿದ ಕನ್ನಡಿಗರು ಅಮಿತ್ ಶಾ ವಿರುದ್ಧ ಕಿಡಿಕಾರಿದ್ದಾರೆ.

ದೇಶದಲ್ಲಿ ಹಿಂದಿ ಭಾಷೆಯ ಹೇರಿಕೆ ಎಲ್ಲ ವರ್ಗದಲ್ಲೂ ಪ್ರಭಾವ ಬೀರುತ್ತಿದೆ ಎಂಬುದು ಕನ್ನಡಿಗರ ಆಕ್ರೋಶ. ಅಮಿತ್ ಶಾ ಮಾಡಿದ ಟ್ವೀಟ್ ಬಳಿಕ ಸಾಮಾಜಿಕ ಜಾಲತಾಣದಲ್ಲಿ ಹಿಂದಿ ಹೇರಿಕೆ ನಿಯಂತ್ರಣವಾಗಬೇಕು ಎಂಬ ಅಭಿಯಾನವೇ ನಡೆಯುತ್ತಿದೆ. ಅಮಿತ್ ಶಾ ಮಾಡಿರುವ ಟ್ವೀಟ್‍ನಲ್ಲಿ ಹಿಂದಿ ಮಾತ್ರವೇ ದೇಶವನ್ನು ಒಂದುಗೂಡಿಸಬಲ್ಲದು ಎಂಬ ಹೇಳಿಕೆಗೆ ಮಾಜಿ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರು “ಭಾಷೆಗಳು ಜ್ಞಾನದ ಕಿಂಡಿಗಳು, ಅದನ್ನು ಪ್ರೀತಿಯಿಂದ ಬೆಳೆಸಬೇಕೇ ಹೊರತು ಒತ್ತಡ-ಒತ್ತಾಯದ ಮೂಲಕ ಅಲ್ಲ.

ನಮ್ಮ ವಿರೋಧ ಹಿಂದಿ ಭಾಷೆಯ ವಿರುದ್ಧವಲ್ಲ ಬದಲು ಹಿಂದಿ ಭಾಷೆಯ ಬಲವಂತದ ಹೇರಿಕೆಯ ಬಗ್ಗೆ ಎಂದು ಖಡಕ್ ಆಗಿ ಟ್ಟೀಟ್ ಮಾಡಿ ತಿಳಿಸಿದ್ದಾರೆ. ಇದರ ಬೆನ್ನಲ್ಲೇ ಮತ್ತೋರ್ವ ಮಾಜಿ ಮುಖ್ಯಮಂತ್ರಿಗಳಾದ ಹೆಚ್.ಡಿ.ಕುಮಾರಸ್ವಾಮಿ ಅವರು `ಇಂದು ದೇಶದ್ಯಾಂತ ಕೇಂದ್ರ ಸರ್ಕಾರ ಹಿಂದಿ ದಿವಸ್ ಆಚರಿಸುತ್ತಿದೆ. ಸಂವಿಧಾನದಲ್ಲಿ ಹಿಂದಿಯೊಂದಿಗೆ ಅಧಿಕೃತ ಭಾಷೆ ಎನಿಸಿಕೊಂಡಿರುವ ಕನ್ನಡದ ಭಾಷಾ ದಿವಸವನ್ನು ದೇಶದ್ಯಾಂತ ಯಾವಾಗ ಆಚರಿಸುತ್ತೀರಿ ಪ್ರಧಾನಿ ಮೋದಿಯವರೇ.? ಎಂದು ತಮ್ಮ ಟ್ವೀಟ್ ಮೂಲಕ ಪ್ರಧಾನಿ ಮೋದಿ ಅವರಿಗೆ ಪ್ರಶ್ನಿಸಿದ್ದಾರೆ.

LEAVE A REPLY

Please enter your comment!
Please enter your name here