ಅಮೇರಿಕಾ ಅಧ್ಯಕ್ಷೀಯ ಚುನಾವಣೆ ಸಮೀಕ್ಷೆ : ಯಾರಿಗೆ ಗೆಲುವು ಗೊತ್ತಾ..?!

0
82

ವಿಶ್ವದ ಅತ್ಯಂತ ಪುರಾತನ ಪ್ರಜಾತಾಂತ್ರಿಕ ವ್ಯವಸ್ಥೆ ಹೊಂದಿರುವ ದೊಡ್ಡಣ್ಣ ಅಮೇರಿಕಾದಲ್ಲಿ ಇದೀಗ ಅಧ್ಯಕ್ಷೀಯ ಚುನಾವಣೆಯ ಕಾವು ತಾರಕಕ್ಕೇರಿದೆ. ರಿಪಬ್ಲಿಕ್ ಮತ್ತು ಡೆಮಾಕ್ರಟಿಕ್ ಪಕ್ಷಗಳ ನಡುವೆ ಈ ಬಾರಿ ತೀವ್ರ ಜಿದ್ದಾಜಿದ್ದಿನ ಸ್ಪರ್ಧೆ ಏರ್ಪಟ್ಟಿದ್ದು, ಅಂತಿಮ ಸುತ್ತಿನ ಚುನಾವಣೆಯ ಪ್ರಚಾರ ಬಿರುಸು ಪಡೆದುಕೊಂಡಿದೆ. ಇನ್ನು ಮುಂದಿನ ೨೩ ದಿನಗಳಲ್ಲಿ ಅಮೆರಿಕದ ಅಧ್ಯಕ್ಷ ಗಾದಿ ಯಾರಿಗೆ ಒಲಿಯುತ್ತೆ, ವೈಟ್‌ಹೌಸ್‌ನ ಅಧಿಪತ್ಯ ಯಾರಿಗೆ ಅನ್ನೋದು ನಿರ್ಧಾರವಾಗಲಿದೆ. ಆದರೆ ಅದಕ್ಕೂ ಮೊದಲೇ ಇತ್ತೀಚೆಗೆ ಬಿಡುಗಡೆಗೊಂಡಿರುವ ಅನೇಕ ಚುನಾವಣಾ ಪೂರ್ವ ಸಮೀಕ್ಷೆಗಳು ಹಾಲಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸೋಲಿಗೆ ಮುನ್ನುಡಿ ಬರೆಯುತ್ತಿವೆ.

ಹೌದು, ಹಾಲಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹಾಗೂ ಜೋ ಬಿಡೆನ್ ನಡುವಿನ ಹಣಾಹಣಿಯಲ್ಲಿ ಜೋ ಬಿಡೆನ್ ಪರವಾಗಿಯೇ ಅಮೇರಿಕಾದ ಜನಾಭಿಪ್ರಾಯ ಮೂಡುತ್ತಿದ್ದು, ಎಲ್ಲ ಚುನಾವಣಾ ಪೂರ್ವ ಸಮೀಕ್ಷೆಗಳ ಮಾಹಿತಿ ಪ್ರಕಾರ ಟ್ರಂಪ್‌ರನ್ನ ಬಿಡೆನ್ ಹಿಂದಿಕ್ಕಿದ್ದಾರೆ. ಅಚ್ಚರಿಯ ಗೆಲುವು ಸಾಧಿಸುವ ಸುಳಿವನ್ನೂ ಜೋ ಬಿಡೆನ್ ನೀಡಿದ್ದಾರೆ.

ಕೊರೊನಾ ಸಂಕಷ್ಟ, ಅಮೆರಿಕದ ಆರ್ಥಿಕತೆ ಕುಸಿತ, ಜನಾಂಗೀಯ ತಾರತಮ್ಯ ಟ್ರಂಪ್ ಹಿನ್ನಡೆಗೆ ಕಾರಣ ಎನ್ನಲಾಗಿದೆ. ಇನ್ನು ಅಚ್ಚರಿ ಎಂದರೆ ಕಳೆದ ಚುನಾವಣೆಯಲ್ಲಿ ಡೊನಾಲ್ಡ್ ಟ್ರಂಪ್ ಗೆದ್ದುಬೀಗಿದ್ದ ಅನೇಕ ರಾಜ್ಯಗಳಲ್ಲೇ ಟ್ರಂಪ್‌ಗೆ ಈ ಬಾರಿ ಹಿನ್ನಡೆ ಉಂಟಾಗಿದೆ. ಅದರಲ್ಲೂ ಅಧ್ಯಕ್ಷರ ಆಯ್ಕೆಯಲ್ಲಿ ನಿರ್ಣಾಯಕ ಪಾತ್ರ ವಹಿಸುವ ರಾಜ್ಯಗಳಲ್ಲೇ ಈ ಬಾರಿ ಟ್ರಂಪ್‌ಗೆ ಭಾರೀ ಹಿನ್ನಡೆ ಉಂಟಾಗಲಿದೆ ಎನ್ನಲಾಗಿದೆ. ಸಮೀಕ್ಷೆಯ ಅಂಕಿ-ಅAಶ ನೋಡೋದಾದ್ರೆ ಹೀಗಿದೆ.

ರಾಜ್ಯ ಬಿಡೆನ್ ಟ್ರಂಪ್ ೨೦೧೬ ಫಲಿತಾಂಶ
ಅರಿಜೋನಾ ೪೮.೮% ೪೫.೭% ಟ್ರಂಪ್ (೩.೬% ಅಂತರ)
ಫ್ಲೋರಿಡಾ ೪೮.೦% ೪೪.೩% ಟ್ರಂಪ್ (೧.೨% ಅಂತರ)ಉತ್ತರ ಕರೋಲಿನಾ ೪೮.೩% ೪೬.೯% ಟ್ರಂಪ್ (೩.೭% ಅಂತರ)
ಪೆನ್ಸಿಲ್ವೇನಿಯಾ ೫೧.೦% ೪೩.೯% ಟ್ರಂಪ್ (೦.೭% ಅಂತರ)

ಟೆಕ್ಸಾಸ್ ೪೪.೮% ೪೯.೦% ಟ್ರಂಪ್ (೯.೧% ಅಂತರ)
ನೆವಾಡಾ ೪೯.೭% ೪೩.೭% ಹಿಲರಿ (೨.೪% ಅಂತರ)
ನ್ಯೂ ಹ್ಯಾಂಪ್ಶೈರ್ ೫೨.೦% ೪೩.೦% ಹಿಲರಿ (೦.೪% ಅಂತರ)
ವರ್ಜೀನಿಯಾ ೫೧.೩% ೪೦.೩% ಹಿಲರಿ (೫.೪% ಅಂತರ)
ಜಾರ್ಜಿಯಾ ೪೬.೮% ೪೬.೫% ಟ್ರಂಪ್ (೫.೨% ಅಂತರ)
ಮಿನ್ನೇಸೋಟ ೫೦.೪% ೪೧.೦% ಹಿಲರಿ (೧.೫% ಅಂತರ)

ಇನ್ನು ಸಮೀಕ್ಷೆಗಳಲ್ಲಿ ಗೆದ್ದವರು ಅಧ್ಯಕ್ಷೀಯ ಚುನಾವಣೆಯಲ್ಲೂ ಹೀಗೆ ಮತ ಗಳಿಸುತ್ತಾರೆ ಎಂದು ಹೇಳಲು ಆಗುವುದಿಲ್ಲ. ಇದಕ್ಕೆ ಅಮೆರಿಕದ ಚುನಾವಣಾ ಇತಿಹಾಸದಲ್ಲೂ ಅನೇಕ ಉದಾಹರಣೆಗಳು ಸಿಗುತ್ತವೆ. ವಿಶ್ವದ ದೊಡ್ಡಣ್ಣ ಅಮೆರಿಕದಲ್ಲಿ ಪ್ರತ್ಯಕ್ಷ ಪ್ರಜಾಪ್ರಭುತ್ವ ವ್ಯವಸ್ಥೆ ಜಾರಿಯಲ್ಲಿ ಇಲ್ಲ. ಪರೋಕ್ಷ ಮತದಾನದ ಮೂಲಕ ಅಧ್ಯಕ್ಷರನ್ನು ಆಯ್ಕೆ ಮಾಡಲಾಗುತ್ತದೆ. ಎಲ್ಲ ರಾಜ್ಯಗಳ ಸಂಸದರು ಅಧ್ಯಕ್ಷೀಯ ಹುದ್ದೆಗೆ ಯಾರು ಸೂಕ್ತ ಎಂಬುದನ್ನು ನಿರ್ಧರಿಸುತ್ತಾರೆ. ಹೀಗಾಗಿ ಇದು ಜಸ್ಟ್ ಟ್ರೇಲರ್ ಅಷ್ಟೇ ಎನ್ನಬಹುದು.

LEAVE A REPLY

Please enter your comment!
Please enter your name here