`ಅಮೇಜಾನ್’ ಕಾಡು ದಾಖಲೆಯನ್ನು ಮೀರುವ ರೀತಿಯಲ್ಲಿ ಉರಿಯುತ್ತಿದೆ..!!

0
281

ದೇಶಗಳಲ್ಲಿ ಪ್ರಮುಖವಾದ ದೊಡ್ಡ, ದಟ್ಟ ಅರಣ್ಯ ವಲಯ ಎಂದರೆ ಅದು ಅಮೇಜಾನ್ ಅರಣ್ಯ. ಹೌದು, ಬ್ರೆಸಿಲ್ ದೇಶದಲ್ಲಿ ಇರುವ ಅಮೇಜಾನ್ ಅರಣ್ಯ ಪ್ರದೇಶ ಕಾಡ್ಗಿಚ್ಚಿಗೆ ತುತ್ತಾಗಿ ಭಾರಿ ಪ್ರಮಾಣದಲ್ಲಿ ಉರಿದು ಹೋಗುತ್ತಿದೆ. ಈ ವಿಚಾರವನ್ನು ಯಾವ ದೇಶವು, ಜನರ ಗಮನಕ್ಕೆ ತರುವಲ್ಲಿ ದಿಟ್ಟ ಹೆಜ್ಜೆ ಇಡುತ್ತಿಲ್ಲ ಎಂಬುದು ಬೇಸರ ಸಂಗತಿಯಾಗಿ ಉಳಿದಿದೆ. ಆಗಸ್ಟ್ 15 ರಂದು ಬೆಂಕಿಗೆ ಆಹುತಿಯಾದ ಕಾಡು, ಇಂದಿಗೂ ಅದಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಉರಿಯುತ್ತಿದೆ. ಬ್ರಸಿಲ್ ದೇಶವನ್ನು ಪ್ರತಿನಿಧಿಸುತ್ತಿದ್ದ ಅಮೇಜಾನ್ ತನ್ನ ಹಸಿರು ಮರಗಳು, ಪ್ರಾಣಿ, ಪಕ್ಷಿಗಳು, ಜಲಪಾತಗಳಿಂದ ಎಲ್ಲ ಪ್ರಕೃತಿ ಪ್ರೇಮಿಗಳನ್ನು ಸೆಳೆಯುವಲ್ಲಿ ಮುಂದಿದ್ದ ಅರಣ್ಯ ಪ್ರದೇಶ. ಇಂಥ ಅರಣ್ಯ ಬೆಂಕಿಗೆ ಆಹುತಿಯಾಗುವ ಮೂಲಕ ಬರೋಬ್ಬರಿ 9,500ಕ್ಕೂ ಹೆಚ್ಚು ಮರಗಳನ್ನು ನಾಶ ಮಾಡಿಕೊಂಡಿದೆ.

ಆಮೇಜಾನ್ ಕಾಡನ್ನು ಇಂಗ್ಲಿಷ್‍ನಲ್ಲಿ “ದ ಲಂಗ್ಸ್ ಆಫ್ ದಿ ಪ್ಲಾನೆಟ್” ಎಂದು ಕರೆಯಲಾಗುತ್ತದೆ. ನಮ್ಮ ಜಗತ್ತಿನಲ್ಲಿ ಬೇರೆ ದೇಶಗಳ ಅರಣ್ಯಗಳಿಗೆ ಹೋಲಿಸಿದರೆ, ಆಮೇಜಾನ್ ಅರಣ್ಯ 20 ಪರ್ಸೆಂಟ್‍ಗೂ ಅಧಿಕ ಆಮ್ಲಜನಕ ಒದಗಿಸುವ ಪ್ರದೇಶವಾಗಿದೆ. ಬ್ರೆಸಿಲ್‍ನ ಬಾಹ್ಯಾಕಾಶ ಸಂಸ್ಥೆ ಇಲ್ಲಿಯವರೆಗೂ 73,000ದಷ್ಟು ಬೆಂಕಿ ಅನಾಹುತಗಳನ್ನು ಪತ್ತೆ ಹಚ್ಚಿದೆ. ಬಾಹ್ಯಾಕಾಶ ಸಂಸ್ಥೆಯಿಂದ ಅಮೇಜಾನ್ ಅರಣ್ಯ ಉರಿದು ಹೋಗುತ್ತಿರುವ ದೃಶ್ಯ ಸೇರೆಯಾಗಿದೆ ಹಾಗೂ ಕಾಣಬಹುದಾಗಿದೆ. ದಿನೇ ದಿನೇ ಬೆಂಕಿಯ ಆರ್ಭಟ ಹೆಚ್ಚುತ್ತಿದ್ದು, ಇದೆಂದೂ ಈ ರೀತಿಯ ಕಾಡ್ಗಿಚ್ಚು ಕಾಣಿಸಿರಲಿಲ್ಲ.!

ಕಾಡು ಉರಿಯುತ್ತಿರುವುದು ಗರಿಷ್ಟ ಮಟ್ಟವನ್ನು ಕೂಡ ಮೀರುವಂತಿದೆ ಎನ್ನಲಾಗಿದೆ. ಕಾಡ್ಗಿಚ್ಚು ಭಾರಿ ರಭಸದಿಂದ ಉರಿಯುತ್ತಿದ್ದು, ಈಗಾಗಲೇ 550 ಮಿಲಿಯನ್ ಹೆಕ್ಟರ್ ಪ್ರದೇಶ ನಾಶವಾಗಿದೆ. ಅಮೇಜಾನ್ ಕಾಡಿನ ಪ್ರಾಣಿ, ಪಕ್ಷಿ ಸಂಕುಲುಗಳು ನಾಶವಾಗುತ್ತಿರುವುದು ತೀರ ನೋವುಂಟಾಗುವ ಸಂಗತಿ ಎನ್ನಬಹುದು. ಈ ಕುರಿತು ಹಲವಾರು ಸೆಲೆಬ್ರಿಟಿಗಳು ತಮ್ಮ ಫೇಸ್‍ಬುಕ್ ಹಾಗೂ ಇನ್‍ಸ್ಟಾಗ್ರ್ಯಾಂಮ್‍ನಲ್ಲಿ ಪೋಸ್ಟ್ ಮಾಡುವ ಮೂಲಕ ಎಲ್ಲರಿಗೂ ತಿಳಿಸುವುದರ ಜೊತೆಗೆ ಭಗವಂತನಲ್ಲಿ ಪ್ರಾರ್ಥಿಸುತ್ತಿದ್ದಾರೆ.

LEAVE A REPLY

Please enter your comment!
Please enter your name here