ವರ್ಗಾವಣೆ ರದ್ದುಗೊಳಿಸುವಂತೆ ಸಿಎಟಿಗೆ ಅರ್ಜಿ ಸಲ್ಲಿಸಿದ ಅಲೋಕ್ ಕುಮಾರ್

0
190

ಬೆಂಗಳೂರು ಪೊಲೀಸ್ ಆಯುಕ್ತರಾಗಿದ್ದ ಅಲೋಕ್ ಕುಮಾರ್ ಅವರನ್ನು ಯಡಿಯುರಪ್ಪನವರ ಸರ್ಕಾರ ಶುಕ್ರವಾರ ವರ್ಗಾವಣೆ ಮಾಡಿ ಆದೇಶ ಹೊರಡಿಸಿತ್ತು. ಅದನ್ನು ಪ್ರಶ್ನಿಸಿ ಇಂದು (ಸೋಮವಾರ)  ಅಲೋಕ್ ಕುಮಾರ್ ರವರು ಕೇಂದ್ರ ಆಡಳಿತಾತ್ಮಕ ನ್ಯಾಯಮಂಡಳಿಗೆ ತಮ್ಮ ವರ್ಗಾವಣೆ ಆದೇಶವನ್ನು ರದ್ದುಗೊಳಿಸಬೇಕು ಎಂದು ಅರ್ಜಿ ಸಲ್ಲಿಸಿದ್ದಾರೆ. ಆದರೆ ಅಲೋಕ್ ಕುಮಾರ್ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಸಿ.ಎ.ಟಿ. ಭಾಸ್ಕರ್ ರಾವ್ ನೇಮಕಾತಿ ಆದೇಶಕ್ಕೆ ತಡೆ ನೀಡಲು ನಿರಾಕರಿಸಿದೆ. ರಾಜ್ಯ ಸರ್ಕಾರ, ಕೇಂದ್ರ ಸರ್ಕಾರ ಹಾಗೂ ನೂತನ ಆಯುಕ್ತರಾದ ಭಾಸ್ಕರ್ ರಾವ್‌ ರವರಿಗೆ ನೋಟಿಸ್ ನೀಡಿ, ವಿಚಾರಣೆಯನ್ನು ಆ.14ಕ್ಕೆ ಮುಂದೂಡಲಾಗಿದೆ.
ಅಲೋಕ್ ಕುಮಾರ್‌ ರವರನ್ನು ಬೆಂಗಳೂರು ಪೊಲೀಸ್ ಆಯುಕ್ತರಾಗಿ ನೇಮಕ ಮಾಡಿ ಹೆಚ್ ಡಿ ಕುಮಾರಸ್ವಾಮಿ ರವರ ಸರ್ಕಾರ ಕೇವಲ 1 ತಿಂಗಳ ಹಿಂದೆ ಆದೇಶ ಮಾಡಿತ್ತು . ಸರ್ಕಾರ ಬದಲಾವಣೆ ಆದ ಕಾರಣ ನೂತನ ಮುಖ್ಯಮಂತ್ರಿ ಸನ್ಮಾನ್ಯ ಶ್ರೀ ಬಿ. ಎಸ್. ಯಡಿಯೂರಪ್ಪ ನವರು ಅವರನ್ನು ವರ್ಗಾವಣೆ ಮಾಡಿ ಭಾಸ್ಕರ್ ರಾವ್ ಅವರನ್ನು ಅವರ ಸ್ಥಾನಕ್ಕೆ ನೇಮಕ ಮಾಡಿ ಆದೇಶ ಹೊರಡಿಸಿದ್ದರು.

ಅಲೋಕ್ ಕುಮಾರ್ ಗೆ ಚಾಲೆಂಜ್ ಹಾಕಿದ್ದ ರೇಣುಕಾಚಾರ್ಯ
ಅಂದು ಬಿಜೆಪಿ ಮುಖಂಡ ಹಾಗೂ ಬಿ ಎಸ್ ಯಡಿಯೂರಪ್ಪರವರ ಮಾನಸ ಪುತ್ರ ಎಂದೆ ಖ್ಯಾತಿಯಾಗಿರುವ ಎಂ ಪಿ ರೇಣುಕಾಚಾರ್ಯ ಅವರು ನಗರ ಪೊಲೀಸ್ ಆಯುಕ್ತರಾಗಿದ್ದ ಅಲೋಕ್ ಕುಮಾರ್ ರವರಿಗೆ 1 ತಿಂಗಳಲ್ಲಿ ಎಲ್ಲಿ ಇರ್ತೀರಾ ನೋಡಿ ಎಂದು ಸವಾಲು ಹಾಕಿದ್ದರು. ಅಂದಿನ ಅವರ ಸವಾಲಿಗೂ ಈಗ ಆಗಿರುವ ಅಲೋಕ್ ಕುಮಾರ್ ರವರು ವರ್ಗಾವಣೆಗೂ ಇರುವ ಸಂಬಂಧ ಕಾಕತಾಳೀಯವೋ ಅಥವಾ ಉದ್ದೇಶಪೂರ್ವಕವೋ ಒಟ್ಟಿನಲ್ಲಿ ಅಂದಿನ ಘಟನೆಯನ್ನು ಇಂದು ಮೆಲುಕು ಹಾಕುವಂತಾಗಿದೆ.

LEAVE A REPLY

Please enter your comment!
Please enter your name here