ಈ ಕುಮಾರಿಯ ಕೊಡುಗೆ ಅಷ್ಟಿಷ್ಟಲ್ಲ..! ತಪ್ಪದೇ ಓದಿ

0
359

ಅಲೋವೆರಾ ಇಂದಿನ ಪ್ರತಿಯೊಂದು ಸೋಪಿನ ಜಾಹಿರಾತಿನಲ್ಲೂ ಕಾಣುವ ಗಿಡಮೂಲಿಕೆ. ಚರ್ಮದ ಸೌಂದರ್ಯಕ್ಕೆ ಹೆಚ್ಚಿನ ಮೆರುಗು ನೀಡವಲ್ಲಿ ಈ ಅಲೋವೆರಾ ಪಾತ್ರ ಮಹತ್ವದ್ದು. ಅಲೋವೆರಾ ಆಂಗ್ಲ ಭಾಷೆಯ ಹೆಸರು ಸಂಸ್ಕ್ರತದಲ್ಲಿ ಅಲೋವೆರಾವನ್ನು ಕುಮಾರಿ ಎಂದು ಕರೆದಿದ್ದಾರೆ. ಕುಮಾರಿ ಎಂದರೆ ಕಪ್ಪು ಕೂದಲು ಯೌವ್ವನದ ಸಂಕೇತ. ಕಪ್ಪು ಕೂದಲು ನುಣುಪಾದ ಕೂದಲು ಹೊಂದಲು ಈ ಅಲೋವೆರಾ ಬಳಕೆ ಉತ್ತಮ. ಭಾರತೀಯ ಆಯುರ್ವೇದ ಪರಂಪರೆ ಜಗತ್ತಿನ ಅನೇಕ ಸಮಸ್ಯೆಗಲಿಗೆ ಅಡ್ಡಪರಿಣಾಮಗಳಿಲ್ಲದೆ ಪರಿಹಾರ ನೀಡಬಲ್ಲದು.

ಆಯುರ್ವೇದದಲ್ಲಿ ಅಲೋವೆರಾ ಅಥವಾ ಲೋಳೆಸರದ ಬಗ್ಗೆ ಸಾಕಷ್ಟು ಉಲ್ಲೇಖಗಳಿವೆ. ಚರ್ಮದ ಆರೋಗ್ಯ ಕಾಪಾಡುವಲ್ಲಿ ಈ ಲೋಳೆಸರ ಒಂದು ರೀತಿಯ ಆರೋಗ್ಯ ವರ್ಧಕ. ಅಲೋವೆರಾ ಮೇಲ್ಪದರ ತೆಗೆದು ಜೆಲ್ ಅನ್ನು ನೀರಿನಲ್ಲಿ ಸೇರಿಸಿ ಅಥವಾ ಹಾಗೆಯೇ ಹಚ್ಚಿದರೆ ಚರ್ಮ ಮ್ರದುವಾಗುತ್ತದೆ. ಮುಖ್ಯವಾಗಿ ಮುಖಕ್ಕೆ ಹಚ್ಚುವುದರಿಂದ ಮೊಡವೆಗಳು ಕಡಿಮೆಯಾಗುತ್ತವೆ. ಕಪ್ಪು ಕಲೆಗಳು ಮಾಯಾವಾಗುತ್ತದೆ. ಮುಖದ ಕಾಂತಿ ಹೆಚ್ಚುತ್ತದೆ.

ಅಲೋವೆರಾದಲ್ಲಿರುವ ಜೀವಸತ್ವ, ಖನಿಜ, ಕಿಣ್ವ, ಕಾರ್ಬೋ ಹೈಡ್ರೇಟ್, ಅಮೈನೋ ಆಮ್ಲ ಮತ್ತು ಸ್ಯಾಲಿಸಿಲಿಕ್ ಆಮ್ಲ ಮತ್ತು ಇತರ ಪೋಷಕಾಂಶಗಳು ಜೀರ್ಣ ಕ್ರಿಯೆಗೆ ಸಹಕಾರಿಯಾಗಿದ್ದು ಅತಿಯಾದ ಊಟದ ನಂತರ ಸ್ವಲ್ಪ ಲೋಳೆಸರ ಸೇವಿಸಿದ್ರೆ ಸುಲಭವಾಗಿ ಜೀರ್ಣವಾಗುತ್ತದೆ.

ಲೋಳೆಸರವನ್ನು ಪಾನೀಯದಂತೆ ಸೇವಿಸಿದ್ರೆ ತೂಕ ಹತೋಟಿಯಲ್ಲಿಡಬಹುದು, ದೇಹದ ತೂಕ ಸಮತೋಲನದಲ್ಲಿದ್ದರೆ ಅನೇಕ ರೋಗಗಳನ್ನು ತಡೆಯಬಹುದು. ಲೋಳೆಸರವನ್ನು ಹಣ್ಣಿನ ರಸದೊಂದಿಗೆ ಸೇರಿಸಿ ಕುಡಿಯಬಹುದು. ಇನ್ನು ಕೆಲವರು ಲೋಳೆಸರದ ರಸವನ್ನು ನಿಂಬೆಹಣ್ಣಿನೊಂದಿಗೆ ಸೇರಿ ಇಲ್ಲವೆ ಜೀನಿನ ಹನಿಗಳೊಂದಿಗೆ ಸೇವಿಸುವ ಅಬ್ಯಾಸ ಮಾಡಿಕೊಂಡಿರುತ್ತಾರೆ ಇದು ಕೂಡ ಒಳ್ಳೆಯದೇ.

ತಂಪು ನೀಡಬಲ್ಲ ಲೋಳೆಸರವನ್ನು ಮನೆಯಲ್ಲಿಯೇ ಸರಲವಾಗಿ ಬೆಳೆಸಬಹುದು. ಹೆಚ್ಚಿನ ನೀರನ್ನು ಬಯಸದ ಗಿಡ ಲೋಳೆಸರ, ಮುಳ್ಳುಗಳಿಂದ ಕೂಡಿದ ಅಗಲವಾದ ಎಲೆಗಳನ್ನು ಬಿಡಿಸಿಕೊಂಡು ಲೋಳೆಯನ್ನು ತೆಗೆದು ಬಳಸುವುದು ಉತ್ತಮ. ಇಲ್ಲಿ ಲೋಳೆ ಶುದ್ಧವಾಗಿರಬೇಕು ಬಳಸುವ ಕೆಲವೇ ಹೊತ್ತಿನ ಮುಂಚೆ ಗಿಡದಿಂದ ಕತ್ತರಿಸಿದ್ರೆ ಒಳ್ಳೆಯದು. ಇಲ್ಲಿದಿದ್ದರೆ ಅದರ ಪರಿಣಾಮ ಕುಂದಬಹುದು.

ಇನ್ನು ಈ ಆಲೋವೆರಾ ಗಿಡವನ್ನು ಒಣಗಿಸಿ ಮನೆಯಲ್ಲಿ ಇಟ್ಟರೆ ಅಥವಾ ಯಾವುದಾದರೂ ಒಂದು ಮೂಲೆಯಲ್ಲಿ ಕಟ್ಟಿದರೆ ಸುಳ್ಳೆಯ ಕಾಟ ಇರುವುದಿಲ್ಲ. ಇದನ್ನು ಬಹಳಷ್ಟು ಜನರು ತಮ್ಮ ಮನೆಯಲ್ಲಿ ಕಟ್ಟಿರುವುದು ಸಾಮಾನ್ಯವಾಗಿ ಕಾಣಬಹುದಾಗಿದೆ.

LEAVE A REPLY

Please enter your comment!
Please enter your name here