ಆ ಭಯದಿಂದ ಆಲಿಯಾ ಭಟ್​​​​ರನ್ನು ತಮ್ಮ ಚಿತ್ರದಿಂದ ಹೊರಕಳಿಸಲು ನಿರ್ಧರಿಸಿದ್ದಾರಾ ರಾಜಮೌಳಿ…?

0
165

ಎಸ್​​​​.ಎಸ್. ರಾಜಮೌಳಿ ತೆಲುಗು ಚಿತ್ರರಂಗಕ್ಕೆ ಅನೇಕ ಹಿಟ್ ಚಿತ್ರಗಳನ್ನು ನೀಡಿದ ನಿರ್ದೇಶಕ. 2001 ರಲ್ಲಿ ‘ಸ್ಟೂಡೆಂಟ್ ನಂ 1’ ತೆಲುಗು ಚಿತ್ರದ ಮೂಲಕ ಡೈರೆಕ್ಷನ್ ಜರ್ನಿ ಆರಂಭಿಸಿದ ರಾಜಮೌಳಿ ಅಲ್ಲಿಂದ ಸಿಂಹಾದ್ರಿ, ಛತ್ರಪತಿ, ವಿಕ್ರಮಾರ್ಕುಡು, ಯಮದೊಂಗ, ಮಗಧೀರ, ಮರ್ಯಾದಾ ರಾಮಣ್ಣ, ಈಗ, ಬಾಹುಬಲಿಯಂತ ಹಿಟ್ ಸಿನಿಮಾಗಳನ್ನು ತೆಲುಗು ಚಿತ್ರರಂಗಕ್ಕೆ ನೀಡಿ ಸ್ಟಾರ್ ನಿರ್ದೇಶಕ ಎನಿಸಿಕೊಂಡವರು. ಸದ್ಯಕ್ಕೆ ರಾಜಮೌಳಿ ‘ಆರ್​​ಆರ್​ಆರ್’ ಚಿತ್ರದ ಕೆಲಸಗಳಲ್ಲಿ ಬ್ಯುಸಿ ಇದ್ದಾರೆ. ಚಿತ್ರದಲ್ಲಿ ರಾಮ್​​ಚರಣ್ ತೇಜ ಹಾಗೂ ಜ್ಯೂನಿಯರ್ ಎನ್​​​ಟಿಆರ್ ಪ್ರಮುಖ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ. ಚಿತ್ರೀಕರಣ ಬಹುತೇಕ ಮುಗಿದಿದ್ದು ಕೆಲವೊಂದು ದೃಶ್ಯಗಳನ್ನು ಶೂಟ್ ಮಾಡಬೇಕಿದೆ.

ಇನ್ನು ಆರ್​​ಆರ್​ಆರ್ ಚಿತ್ರದಲ್ಲಿ ಬಾಲಿವುಡ್​​​ ನಟಿ ಆಲಿಯಾ ಭಟ್ ಕೂಡಾ ನಟಿಸುತ್ತಿದ್ದಾರೆ. ಆದರೆ ಇದೀಗ ಆಲಿಯಾ ಭಟ್ ಅವರನ್ನು ಚಿತ್ರದಿಂದ ಹೊರ ಕಳಿಸಲು ಚಿತ್ರತಂಡ ನಿರ್ಧರಿಸಿದೆ ಎಂಬ ಮಾತು ಕೇಳಿಬಂದಿದೆ. ಇದಕ್ಕೆ ಕಾರಣ ಭಾರತ ಸೇರಿದಂತೆ ವಿದೇಶಗಳಲ್ಲಿನ ಕೆಲವು ಸಿನಿಪ್ರಿಯರು ಸ್ಟಾರ್​​ ಕಿಡ್​​​ಗಳ ಸಿನಿಮಾವನ್ನು ಬಹಿಷ್ಕರಿಸಲು ನಿರ್ಧರಿಸಿರುವುದು. ಆಲಿಯಾ ಭಟ್ ಖ್ಯಾತ ನಿರ್ದೇಶಕ ಮಹೇಶ್ ಭಟ್ ಪುತ್ರಿ. ಸುಶಾಂತ್ ಪ್ರಕರಣ ಆದಾಗಿನಿಂದ ಬಾಲಿವುಡ್​​​​ನಲ್ಲಿ ಸ್ವಜನಪಕ್ಷಪಾತದ ಬಗ್ಗೆ ಚರ್ಚೆ ಆಗುತ್ತಿದೆ. ಜೊತೆಗೆ ಸ್ಟಾರ್ ಕಿಡ್​​​ಗಳ ಚಿತ್ರಗಳನ್ನು ಬಹಿಷ್ಕರಿಸುವಂತೆ ಕರೆ ನೀಡಲಾಗಿದೆ. ಇದಕ್ಕೆ ಉದಾಹರಣೆ ಇತ್ತೀಚೆಗೆ ಬಿಡುಗಡೆಯಾದ ಮಹೇಶ್ ಭಟ್ ನಿರ್ದೇಶನದಲ್ಲಿ ಆಲಿಯಾ ಭಟ್ ನಟಿಸಿರುವ ಸಡಕ್​​-2 ಟ್ರೇಲರ್​.

1991 ರಲ್ಲಿ ಬಿಡುಗಡೆಯಾದ ಸೂಪರ್ ಹಿಟ್ ಚಿತ್ರ ಸಡಕ್​​ ಚಿತ್ರದ ಎರಡನೇ ಭಾಗ ಸಡಕ್ 2. ಸುಶಾಂತ್ ಪ್ರಕರಣಕ್ಕೂ ಮುನ್ನ ಈ ಚಿತ್ರದ ಮೇಲೆ ಭಾರೀ ನಿರೀಕ್ಷೆ ಇತ್ತು. ಸಿನಿಮಾ ಯಾವಾಗ ಬಿಡುಗಡೆ ಆಗುವುದೋ ಎಂದು ಎಲ್ಲರೂ ಕಾಯುತ್ತಿದ್ದರು. ಆದರೆ ಜೂನ್ 14 ರ ಸುಶಾಂತ್ ದುರ್ಘಟನೆ ನಂತರ ಎಲ್ಲವೂ ತಲೆ ಕೆಳಕಾಯ್ತು. ಬಾಲಿವುಡ್​​ನಲ್ಲಿ ಹೊಸಬರಿಗೆ ಅವಕಾಶವಿಲ್ಲ. ಬೆಳೆಯುವವರನ್ನು ಸ್ಟಾರ್​​ಕಿಡ್​​ಗಳು ತುಳಿಯುತ್ತಿದ್ದಾರೆ ಎಂಬ ಆರೋಪ ಕೇಳಿಬಂತು. ಇನ್ನು ಮುಂದೆ ಸ್ಟಾರ್ ಕಿಡ್​​​​​​​​ಗಳ ಸಿನಿಮಾಗಳನ್ನು ನಾವು ನೋಡುವುದಿಲ್ಲ ಎಂದು ಸುಶಾಂತ್ ಹಾಗೂ ಕಂಗನಾ ಅಭಿಮಾನಿಗಳು ನಿರ್ಧರಿಸಿದರು. ಆ ಕಾರಣ ಸಡಕ್-2 ಚಿತ್ರದ ಟ್ರೇಲರ್​​​ಗೆ ಕೂಡಾ ನಿರೀಕ್ಷಿಸಿದಷ್ಟು ವೀಕ್ಷಣೆ ಆಗಲಿ, ಲೈಕ್ ಆಗಲಿ ದೊರೆಯಲಿಲ್ಲ.

ಇದೀಗ ಈ ಭಯ ರಾಜಮೌಳಿ ಅವರನ್ನು ಕಾಡುತ್ತಿದೆ. ಆಲಿಯಾ ಭಟ್ ಆರ್​​ಆರ್​ಆರ್ ಚಿತ್ರದಲ್ಲಿ ಸೀತಾ ಎಂಬ ಪಾತ್ರ ಮಾಡುತ್ತಿದ್ದಾರೆ. ಒಂದು ವೇಳೆ ಸಿನಿಮಾ ಬಿಡುಗಡೆಯಾದಾಗ ಜನರು ಈ ಚಿತ್ರವನ್ನು ಬಹಿಷ್ಕರಿಸಿದರೆ ಸಿನಿಮಾ ಯಶಸ್ಸು ಗಳಿಸುವುದಿಲ್ಲ. ಹೇಳಿ ಕೇಳಿ ಇದು 450 ಕೋಟಿ ರೂಪಾಯಿ ಮೊತ್ತದ ದೊಡ್ಡ ಬಜೆಟ್ ಚಿತ್ರ. ಆದ್ದರಿಂದ ಆಲಿಯಾ ಭಟ್ ಅವರನ್ನು ಚಿತ್ರದಿಂದ ಹೊರಗೆ ಕಳಿಸಿ ಆ ಜಾಗಕ್ಕೆ ಮತ್ತೊಬ್ಬ ನಟಿಯನ್ನು ಕರೆತರಲು ಆರ್​​ಆರ್​ಆರ್ ಚಿತ್ರತಂಡ ನಿರ್ಧರಿಸಿದ್ದು ಆಲಿಯಾ ಜಾಗಕ್ಕೆ ಪ್ರಿಯಾಂಕ ಛೋಪ್ರಾ ಅವರನ್ನು ಕರೆತರಲು ಚಿತ್ರತಂಡ ಪ್ಲ್ಯಾನ್ ಮಾಡುತ್ತಿದೆ ಎಂಬ ಮಾತು ಕೇಳಿಬರುತ್ತಿದೆ. ಆದರೆ ಚಿತ್ರತಂಡ ಈ ಬಗ್ಗೆ ಅಧಿಕೃತವಾಗಿ ಹೇಳಿಕೊಂಡಿಲ್ಲ. ಇನ್ನು ಕೆಲವೇ ದಿನಗಳಲ್ಲಿ ಈ ಬಗ್ಗೆ ಸ್ಪಷ್ಟನೆ ದೊರೆಯಲಿದೆ.

LEAVE A REPLY

Please enter your comment!
Please enter your name here