ಉತ್ತರ ಕರ್ನಾಟಕದ ರೈತರ ಮೊಗದಲ್ಲಿ ಸಂತಸ ಅರಳಿಸಿತು ಆಲಮಟ್ಟಿ ಜಲಾಶಯ..!

0
125

ವಿಜಯಪುರ ಜಿಲ್ಲೆಯ ಆಲಮಟ್ಟಿಯ ‘ಲಾಲ್ ಬಹಾದ್ದೂರ್ ಶಾಸ್ತ್ರಿ’ ಜಲಾಶಯ ಬಹುತೇಕ ಭರ್ತಿಯಾಗಿದೆ. ಹಾಗಾಗಿ ಉತ್ತರಕರ್ನಾಟಕದ ರೈತರ ಮೊಗದಲ್ಲಿ ಸಂತಸ ಅರಳಿದೆ. ಈ ಬಾರಿಯಾದರೂ ಮುಂಗಾರು – ಹಿಂಗಾರು ಬೆಳೆಗಳಿಗೆ ಸಾಕಷ್ಟು ಪ್ರಮಾಣದಲ್ಲಿ ನೀರು ಸಿಗಬಹುದು ಎಂಬ ಖುಷಿಯಲ್ಲಿದ್ದಾರೆ.

ಇನ್ನು ಮಹಾರಾಷ್ಟ್ರದ ಮಹಾಬಲೇಶ್ವರ, ಸತಾರಾ ಸೇರಿದಂತೆ ಕೃಷ್ಣಾ ಜಲಾಯನ ಪ್ರದೇಶದಲ್ಲಿ ಉತ್ತಮ ಮಳೆಯಾಗುತ್ತಿರುವ ಕಾರಣ ಆಲಮಟ್ಟಿ ಜಲಾಶಯಕ್ಕೆ ನಿರೀಕ್ಷೆಗೂ ಮೀರಿ ನೀರು ಹರಿದುಬರುತ್ತಿದೆ. ಮಹಾರಾಷ್ಟದಲ್ಲಿ ಹೆಚ್ಚು ಮಳೆಯಾದರೆ ಆಲಮಟ್ಟಿ ಜಲಾಶಯ ಸಂಪೂರ್ಣ ಭರ್ತಿಯಾಗಲಿದೆ. ಗರಿಷ್ಠ ಮಟ್ಟ 519.60 ಮೀಟರ್ ಸಾಮಥ್ರ್ಯವಿರುವ ಜಲಾಶಯದಲ್ಲಿ ಇಂದು 519 ಮೀಟರ್ ನೀರು ಸಂಗ್ರಹವಾಗಿದೆ. ಸದ್ಯ ಜಲಾಶಯದಲ್ಲಿ 13310 ಕ್ಯೂಸೆಕ್ ಒಳಹರಿವು ಇದ್ದು, ಹೊರಹರಿವು 128 ಕ್ಯೂಸೆಕ್ ಇದೆ.

LEAVE A REPLY

Please enter your comment!
Please enter your name here