ವಿಶ್ವದಲ್ಲೇ ಅತಿ ಹೆಚ್ಚು ಸಂಭಾವನೆ ಪಡೆಯುವ ನಟರ ಸಾಲಿನಲ್ಲಿ ಅಕ್ಷಯ್‍ಕುಮಾರ್..!

0
216

ವಿಶ್ವದ ಅತಿ ಹೆಚ್ಚು ಸಂಭಾವನೆ ಪಡೆಯುವ ನಟರ ಪಟ್ಟಿಯಲ್ಲಿ ಭಾರತದ ಏಕೈಕ ನಟ ಆಕ್ಷಯ್ ಕುಮಾರ್ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ. ವಿಶೇಷ ಅಂದ್ರೆ ವಿಶ್ವದ ಖ್ಯಾತ ನಟ ಜಾಕಿಚಾನ್ ಅವರನ್ನು ಅಕ್ಷನ್‍ಕುಮಾರ್ ಹಿಂದಿಕ್ಕಿದ್ದಾರೆ. ಈ ಮೂಲಕ ಅಕ್ಷಯ್‍ಕುಮಾರ ವಿಶ್ವದ ಹೆಚ್ಚು ಸಂಭಾವನೆ ಪಡೆಯುವ ಪಟ್ಟಿಯಲ್ಲಿ ನಾಲ್ಕನೆ ಸ್ಥಾನ ಪಡೆದಿದ್ದಾರೆ.

ಅಮೆರಿಕದ ನಿಯತಕಾಲಿಕೆ ಫೋಬ್ರ್ಸ್ 2019ರ ಅತೀ ಹೆಚ್ಚು ಸಂಭಾವನೆ ಪಡೆಯುವ ನಟರ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಇನ್ನು ಈ ಪಟ್ಟಿಯಲ್ಲಿ ಜಾಗ ಪಡೆದ ಭಾರತದ ಏಕೈಕ ನಟ ಅಕ್ಷಯ್ ಕುಮಾರ್. ಇನ್ನು ಅಕ್ಷಯ್ ಕುಮಾರ್ ವಾರ್ಷಿಕ ಸಂಭಾವನೆ ಒಟ್ಟು 466 ಕೋಟಿ ಎನ್ನಲಾಗಿದೆ.

2019ರ ಹೆಚ್ಚು ಸಂಭಾವನೆ ಪಡೆಯುವ ಟಾಪ್ ಟೆನ್ ನಟರ ಲಿಸ್ಟ್ ಹೀಗಿದೆ

ದಿ ರಾಕ್ ಡ್ವೇನ್ ಜಾನ್ಸನ್ – 640 ಕೋಟಿ
ಕ್ರಿಸ್ ಹೆಮ್ಸ್ ವರ್ತ್ – 547 ಕೋಟಿ
ರಾಬರ್ಟ್ ಡೌನಿ ಜೂನಿಯರ್ – 473 ಕೋಟಿ
ಅಕ್ಷಯ್ ಕುಮಾರ್ – 466 ಕೋಟಿ
ಜಾಕಿ ಚಾನ್ – 415 ಕೋಟಿ

ಬ್ರಾಡ್ಲಿ ಕೂಪರ್ – 408 ಕೋಟಿ
ಆಡಮ್ ಸ್ಯಾಂಡ್ಲರ್ – 408 ಕೋಟಿ
ಕ್ರಿಸ್ ಇವಾನ್ಸ್ – 311 ಕೋಟಿ
ಪಾಲ್ ರುಡ್ – 293 ಕೋಟಿ
ವಿಲ್ ಸ್ಮಿತ್ – 250 ಕೋಟಿ

LEAVE A REPLY

Please enter your comment!
Please enter your name here