ಭಾರತ ತಂಡದಲ್ಲಿ ತಮ್ಮ ಬ್ಯಾಟಿಂಗ್ ವೈಖರಿಯಿಂದಲೇ ಸಾಕಷ್ಟು ಹೆಸರು ಮಾಡಿದ ಓಪನಿಂಗ್ ಬ್ಯಾಟ್ಸ್ಮನ್ ಅಜಿಂಕ್ಯ ರಹಾನೆ, ಈಗ ತಂದೆ ಆಗುತ್ತಿದ್ದಾರೆ.! ತಮ್ಮ ಹೆಂಡತಿ ‘ರಾಧಿಕಾ ದೋಪ್ವಾಕರ್’ ಅವರ ಜೊತೆ ಕಣ್ಣಲ್ಲಿ ಕಣ್ಣಿಟ್ಟು ನೋಡುತ್ತಿರುವ ಫೋಟೋವೊಂದನ್ನು ಸಾಮಾಜಿಕ ಜಾಲತಾಣವಾದ ಇನ್ಸ್ಟಾಗ್ರಾಮ್ನಲ್ಲಿ ಪೋಸ್ಟ್ ಮಾಡಿ ಅಭಿಮಾನಿಗಳಲ್ಲಿ ಖುಷಿ ಮೂಡಿಸಿದ್ದಾರೆ ಎನ್ನಬಹುದು.
ಶಾಲೆ ದಿನಗಳಲ್ಲಿ ಕ್ಲಾಸ್ಮೇಟ್ಸ್ ಆಗಿದ್ದಾಗಲೇ ಇವರಿಬ್ಬರ ನಡುವೆ ಗೆಳೆತನವಿತ್ತಂತೆ, ಬಳಿಕ ೨೦೧೪ ರಲ್ಲಿ ಪ್ರೀತಿಸಿ ಮದುವೆಯಾದ ಈ ಜೋಡಿ, ಈಗ ಅಭಿಮಾನಿಗಳಿಗೆ ಅವರ ಖುಷಿಯ ಸಂಗತಿಯನ್ನು ಹಂಚಿಕೊಂಡಿದ್ದಾರೆ. ಅಜಿಂಕ್ಯಾ ರಹಾನೆ ಅವರ ಪತ್ನಿ ರಾಧಿಕಾ ದೋಪ್ವಾಕರ್ ಅವರು ತಮ್ಮ ಇನ್ಸ್ಟಾಗ್ರಾಮ್ ಪ್ರೊಫೈಲ್ನಲ್ಲಿ “ನಮ್ಮ ಕುಟುಂಬಕ್ಕೆ ಮತ್ತಷ್ಟು ಪ್ರೀತಿಯನ್ನು ತುಂಬುತ್ತಿದ್ದೇವೆ” ಎಂಬ ಶೀರ್ಷಿಕೆ ನೀಡುವ ಮೂಲಕ ಫೋಟೋ ಪೋಸ್ಟ್ ಮಾಡಿದ್ದಾರೆ. ಈ ಫೋಟೋಗೆ ಅಜಿಂಕ್ಯ ರಹಾನೆ ಅವರ ಅಭಿಮಾನಿಗಳು ಸಾಕಷ್ಟು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಕ್ರಿಕೆಟ್ ವೃತ್ತಿಯಲ್ಲಿ ಉತ್ತಮ ಆಟಗಾರನಾಗಿ ಹೊರಹೊಮ್ಮಿರುವ ಪ್ರತಿಭೆ ಅಜಿಂಕ್ಯಾ ರಹಾನೆ ಅವರನ್ನು ಅಭಿಮಾನಿಗಳು ಅವರ ಬ್ಯಾಟಿಂಗ್ ವೈಖರಿಯನ್ನು ನೋಡಿ ರಾಹುಲ್ ದ್ರಾವಿಡ್ ಅವರ ಪ್ರತಿರೂಪ ಎಂದೇ ಕರೆಯುತ್ತಾರೆ.