ಡಿಕೆ ಪುತ್ರಿ ಐಶ್ವರ್ಯ ನಿಶ್ಚಿತಾರ್ಥ: ಪಕ್ಷ ಬೇಧ ಮರೆತು ಒಟ್ಟಿಗೆ ಸೇರಿದ ನಾಯಕರು

0
201

ಬೆಂಗಳೂರು: ಇಂದು ಡಿಕೆ ಶಿವಕುಮಾರ್ ಮಗಳು ಐಶ್ವರ್ಯ ಹಾಗು ಸಿದ್ಧಾರ್ಥ್ ಹೆಗಡೆ ಪುತ್ರ ಅಮಾರ್ಥ್ಯ ಹೆಗಡೆ ಜತೆ ನಿಶ್ಚಿತಾರ್ಥ ನೆರವೇರಿಸಲಾಯಿತು. ಬೆಂಗಳೂರಿನ ಖಾಸಗಿ ಹೊಟೇಲ್ ನಲ್ಲಿ ಬೆಳಗ್ಗೆ 11 ಗಂಟೆಯಿಂದ 11-30 ರ ಶುಭ ಗಳಿಗೆಯಲ್ಲಿ ನಿಶ್ಚಿತಾರ್ಥ ಕಾರ್ಯ ನೆರವೇರಿಸಲಾಯಿತು. ಕುಟುಂಬಸ್ಥರು ಮತ್ತು ಸಂಬಂಧಿಕರಿಗೆ, ಪಕ್ಷದ ಮುಖ್ಯ ಗಣ್ಯರಿಗೆ ಮಾತ್ರ ಅಹ್ವಾನ ನಿಶ್ಚಿತಾರ್ಥಕ್ಕೆ ಆಹ್ವಾನ ಮಾಡಲಾಗಿತ್ತು. ಇನ್ನು ಬೆಳಗ್ಗೆ 10 ಗಂಟೆಯಿಂದ ಮಧ್ಯಾನ್ಹ 2 ಗಂಟೆಯ ವರೆಗೂ ನಿಶ್ಚಿತಾರ್ಥ ಕಾರ್ಯಕ್ರಮ ನಡೆಯಲಿದ್ದು, ಒಟ್ಟು 250 ಮಂದಿಗೆ ಆಹ್ವಾನ ನೀಡಲಾಗಿದೆ.

ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಸೇರಿದಂತೆ ಸಚಿವರುಗಳು, ಆಪ್ತ ಶಾಸಕರು, ಕುಟುಂಬಸ್ಥರಿಗೆ ಮಾತ್ರ ಆಹ್ವಾನ ನೀಡಲಾಗಿದೆ. ಕೋವಿಡ್ ಹಿನ್ನೆಲೆಯಲ್ಲಿ ಸೀಮಿತ ಗಣ್ಯರಿಗೆ ಮಾತ್ರ ಪಾಸ್ ಕಾರ್ಯಕರ್ತರಿಗೆ, ಅಭಿಮಾನಿಗಳಿಗೆ ಆಮಂತ್ರಣ ವಿಲ್ಲ.

ಪಕ್ಷ ಬೇಧ ಮರೆತು ಒಟ್ಟಾದ ನಾಯಕರು

ಚುನಾವಣೆ ಸಂದರ್ಭದಲ್ಲಿ ಒಬ್ಬರ ವಿರುದ್ಧ ಒಬ್ಬರು ಕೆಸರೆರಚಾಡುತ್ತಿದ್ದ ನಾಯಕರು ಇಂದು ಒಟ್ಟಿಗೆ ಸೇರಿದ್ದು ವಿಶೇಷ. ಡಿಕೆ ಶಿವಕುಮಾರ್ ಮಗಳ ನಿಶ್ಚಿತಾರ್ಥ ದಲ್ಲಿ ಪಕ್ಷ ಬೇಧ ಮರೆತು ಎಲ್ಲಾ ನಾಯಕರೂ ಆಗಮಿಸಿದ್ದರು. ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ, ಮಾಜಿ ಸಿಎಂ ಸಿದ್ದರಾಮಯ್ಯ, ಕಂದಾಯ ಸಚಿವ ಆರ್ ಅಶೋಕ್ ಭಾಗಿಯಾಗಿದ್ದರು. ಜೊತೆಗೆ ಇತ್ತೀಚೆಗಷ್ಟೇ ಕಾಂಗ್ರೆಸ್ ನಲ್ಲಿ ಬಂಡಾಯ ಎದ್ದು ಬಿಜೆಪಿಗೆ ಸೇರಿದ್ದ, ಆರೋಗ್ಯ ಸಚಿವ ಸುಧಾಕರ್ ಸಹ ನಿಶ್ಚಿತಾರ್ಥಕ್ಕೆ ಭಾಗಿಯಾಗುವ ಮೂಲಕ ನಮ್ಮಲ್ಲಿ ಯಾವುದೇ ಗೊಂದಲ ಇಲ್ಲ, ಅಸಮಧಾನ ಇಲ್ಲ. ಅದೆಲ್ಲವೂ ಪಕ್ಷಕ್ಕೆ ಮಾತ್ರ ಸೀಮಿತ ಎಂದು ಸಾರಿದರು. ವಿನಯ್ ಗುರುಜಿ ಸೇರಿದಂತೆ ಅನೇಕರು ಭಾಗಿಯಾಗಿದ್ದರು.


ಅಮೆರಿಕದಲ್ಲಿ ಶಿಕ್ಷಣ ಪಡೆದಿರುವ ಅಮರ್ತ್ಯ, ತಂದೆ ಸಿದ್ಧಾರ್ಥ ಹೆಗ್ಡೆ ನಿಧನದ ನಂತರ ತಾಯಿ ಮಾಳವಿಕಾ ಅವರೊಂದಿಗೆ ಕಾಫಿ ಡೇ ವ್ಯವಹಾರ ನಿರ್ವಹಿಸುತ್ತಿದ್ದಾರೆ. ಇನ್ನು ಐಶ್ವರ್ಯಾ ಇಂಜಿನಿಯರಿಂಗ್ ಪದವೀಧರೆಯಾಗಿದ್ದು, ತಂದೆ ಸ್ಥಾಪಿಸಿರುವ ಗ್ಲೋಬಲ್ ಅಕಾಡೆಮಿ ಆಫ್ ಟೆಕ್ನಾಲಜಿ ಸಂಸ್ಥೆಯನ್ನು ಮುನ್ನಡೆಸುತ್ತಿದ್ದಾರೆ. ಕಳೆದ ಜೂ.12ರಂದು ಐಶ್ವರ್ಯ ಮತ್ತು ಅಮರ್ತ್ಯ ಮದುವೆ ನಿಶ್ಚಯವಾಗಿತ್ತು. ಕೊರೊನಾ ಹಿನ್ನಲೆಯಲ್ಲಿ ಮದುವೆ ಕಾರ್ಯವನ್ನು ಮುಂದೂಡಲಾಗಿದ್ದು, 2021ರ ಫೆಬ್ರವರಿಯಲ್ಲಿ ನೆರವೇರುವ ಸಾಧ್ಯತೆ ಇದೆ ಎನ್ನಲಾಗಿದೆ.


ಪ್ರೇಮಿಗಳ ದಿನದಂದೇ ಮದುವೆ..?
ಮದುವೆಯನ್ನು ಪ್ರೇಮಿಗಳ ದಿನವಾದ ಫೆಬ್ರುವರಿ 14ರಂದು ನಡೆಸಬೇಕೋ ಅಥವಾ ಶುಭ ಮುಹೂರ್ತ ನೋಡಿ ಇಡಬೇಕೋ ಎಂಬ ಚರ್ಚೆ ಕುಟುಂಬಸ್ಥರಲ್ಲಿ ಇದೆ. ಇನ್ನು ಜ್ಯೋತಿಷಿಗಳು ಫೆಬ್ರುವರಿ 24ರಂದು ಹೇಳಿದ್ದು, ಯಾವ ದಿನ ಶುಭವಿದೆ ಎಂದು ಕುಟುಂಬಸ್ಥರು ಗೊಂದಲದಲ್ಲಿ ಇದ್ದಾರಂತೆ.

 

ಮಕ್ಕಳ ಜ್ಞಾಪಕ ಶಕ್ತಿ, ಏಕಾಗ್ರತೆ, ಚುರುಕುತನ ಮತ್ತು ಕೌಶಲ್ಯ ಅಭಿವೃದ್ಧಿ ವೃದ್ಧಿಸಲು ಆಯುರ್ವೇದದ ಉತ್ಪನ್ನವಾದ ‘ಬ್ರಹ್ಮ ಶಂಕರ ‘ ಪರಿಹಾರ ಒದಗಿಸುತ್ತದೆ . ಶ್ರೀ ಶ್ರೀ ರವಿಶಂಕರ್ ಗುರೂಜಿಯವರು ಮಕ್ಕಳ ಸರ್ವಾಂಗೀಣ ಬೆಳವಣಿಗೆಗೆ ನುರಿತ ಮತ್ತು ಅನುಭವಿ ಆಯುರ್ವೇದದ ತಜ್ಞ ವೈದ್ಯರ ಸಹಾಯದಿಂದ ನಿರಂತರ ಸಂಶೋಧನೆಗೆ ಪ್ರೋತ್ಸಾಹ ನೀಡಿದ ಪರಿಣಾಮವಾಗಿ ನೈಸರ್ಗಿಕವಾಗಿ ಬ್ರಹ್ಮ ಶಂಕರ ರೂಪುಗೊಂಡಿದೆ.

ಬ್ರಹ್ಮ ಶಂಕರದಲ್ಲಿ ಪ್ರಧಾನವಾಗಿ ಬ್ರಾಹ್ಮೀ ಎಲೆ, ಮಂಡೂಕ ಪರಿಣಿ,ಶಂಖ ಪುಷ್ಟಿ, ಅಶ್ವಗಂಧ,ಮಾಲ್ಕಂಗನಿ,ಜಟಮಾನಸಿ,ತಗರ್ ಅಥವಾ ಸುಗಂಧ ಬಾಲಾ, ಅಮೃತ ಬಳ್ಳಿ,ಸಂಜೆ,ವೀಟ್ ಜರ್ಮ್ ಅಥವಾ ಗೋಧಿ ಭ್ರೂಣವನ್ನು ವೈಜ್ಞಾನಿಕವಾಗಿ ಸಂಸ್ಕರಿಸಿ ಸಂಪೂರ್ಣ ನೈಸರ್ಗಿಕವಾಗಿ ಬ್ರಹ್ಮಶಂಕರದಲ್ಲಿ ಸೇರಿಸಿರುವುದರಿಂದ ಹೆಚ್ಚು ಪರಿಣಾಮಕಾರಿಯಾಗಿದೆ.ಬ್ರಾಹ್ಮೀ ಎಂದರೆ ಸರಸ್ವತಿ . ಮಕ್ಕಳು ಬ್ರಾಹ್ಮೀ ಮುಹೂರ್ತದಲ್ಲಿ ಓದಿದರೆ ಮರೆಯುವುದಿಲ್ಲ ಎಂದು ವೈಜ್ಞಾನಿಕವಾಗಿ ಸಾಬೀತಾಗಿದೆ.ಮಕ್ಕಳ ದೇಹ ಬಹಳ ಸೂಕ್ಷ್ಮವಾಗಿದ್ದು ಬಹುಬೇಗ ಜ್ವರ,ಕೆಮ್ಮು,ಸೋಂಕುಗಳಿಗೆ ತುತ್ತಾಗುತ್ತಾರೆ.ಬ್ರಹ್ಮಶಂಕರ ನಿಮ್ಮ ಮಕ್ಕಳಲ್ಲಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಿ ಅವರನ್ನು ಸಧೃಡ ರನ್ನಾಗಿ ಮಾಡುತ್ತದೆ. ಇಂದಿನ ಮಕ್ಕಳೇ ನಾಳಿನ ಪ್ರಜೆಗಳು.

ಒಂದು ಆರೋಗ್ಯವಂತ, ಜ್ಞಾನವಂತ , ಬುದ್ಧಿವಂತ ಸಮಾಜಕ್ಕಾಗಿ ‘ಬ್ರಹ್ಮ ಶಂಕರ ‘ ನಿಮ್ಮ ಮಕ್ಕಳಿಗೆ ಅತ್ಯವಶ್ಯಕವಾಗಿದೆ.

BUY NOW

LEAVE A REPLY

Please enter your comment!
Please enter your name here