ಐಶ್ವರ್ಯ ರೈ ಸುಂದರಿಯೇ ಅಲ್ವಂತೆ…ಸೌಂದರ್ಯ ತಜ್ಞರ ಪ್ರಕಾರ ವಿಶ್ವಸುಂದರಿ ಯಾರು ಗೊತ್ತಾ..?

0
3941

ವಿಶ್ವಸುಂದರಿ ಯಾರು ಎಂದು ಕೇಳಿದೊಡನೆ ನಮ್ಮ ಕಣ್ಣ ಮುಂದೆ ಬರುವುದು ನೀಲಿ ಕಣ್ಣುಗಳ ಮಂಗಳೂರು ಚೆಲುವೆ ಐಶ್ವರ್ಯ ರೈ. 1994ರಲ್ಲಿ ವಿಶ್ವಸುಂದರಿ ಪಟ್ಟ ಪಡೆದ ಐಶ್ವರ್ಯ ಎಲ್ಲರಿಗಿಂತ ಸುಂದರಿ ಎಂಬುದು ಬಹುತೇಕರ ಅಭಿಪ್ರಾಯ. ನಂತರ ಕೂಡಾ ಎಷ್ಟೋ ಸುಂದರಿಯರಿಗೆ ಮಿಸ್ ವರ್ಲ್ಡ್ ಪಟ್ಟ ದೊರೆತರೂ ಐಶ್ ಬೇಬಿಗಿಂತ ಸುಂದರಿ ಯಾರೂ ಇಲ್ಲ ಎನ್ನುತ್ತಾರೆ ಅಭಿಮಾನಿಗಳು.

 

ಆದರೆ, ಆಶ್ಚರ್ಯದ ವಿಚಾರ ಎಂದರೆ, ಲೆಕ್ಕದ ಪ್ರಕಾರ ವಿಶ್ವಸುಂದರಿ ಬೇರೆವರಂತೆ. ಬಹಳ ವರ್ಷಗಳಿಂದ ವಿಶ್ವಸುಂದರಿ ಯಾರು ಎಂಬ ಚರ್ಚೆ ನಡೆಯುತ್ತಲೇ ಇದೆ. ಸೌಂದರ್ಯತಜ್ಞರ ಪ್ರಕಾರ ಅಮೆರಿಕದ ಸೂಪರ್ ಮಾಡೆಲ್ ಬೆಲ್ಲಾ ಹದೀದ್ಗೆ ಈ ವಿಶ್ವಸುಂದರಿ ಪಟ್ಟ ನೀಡಬಹುದಂತೆ. ಸೌಂದರ್ಯ ಸ್ಪರ್ಧೆಗೆ ಭಾಗವಹಿಸುವವರಿಗೆ ಹಾಗೂ ಸುಂದರಿ ಎಂದು ಹೇಳುವ ವಿಚಾರದಲ್ಲಿ ಒಂದು ಲೆಕ್ಕಾಚಾರ ಇದೆಯಂತೆ. ಕೂದಲು, ಹಣೆ, ಕಣ್ಣು, ಕೆನ್ನೆ, ಹುಬ್ಬು ಎಂದೆಲ್ಲಾ ಸೇರಿ ಅಡಿಯಿಂದ ಮುಡಿವರೆಗೂ ಇಂತಿಷ್ಟೇ ಅಳತೆ ಇರಬೇಕಂತೆ. ಆ ಲೆಕ್ಕದ ಪ್ರಕಾರ ಬೆಲ್ಲಾಗೆ ಆ ಪ್ರತಿಯೊಂದೂ ಲಕ್ಷಣಗಳಿವೆಯಂತೆ. ಪ್ರಾಚೀನ ಗ್ರೀಕ್ ಶಾಸ್ತ್ರಜ್ಞರು ಸೂಚಿಸಿರುವ ಮುಖಭಾವಕ್ಕೆ ತಕ್ಕಂತೆ ಈ ನಿರ್ಧಾರಕ್ಕೆ ಬರಲಾಗಿದೆ ಎನ್ನುತ್ತಾರೆ ಸೌಂದರ್ಯತಜ್ಞರು.

 

ಇನ್ನು ಬೆಲ್ಲಾ ನಂತರ ಎರಡನೇ ಸ್ಥಾನ ಪಾಪ್ ತಾರೆ ಬಿಯಾನ್ಸ್ ನೊಲ್ಸ್, ಮೂರನೇ ಸ್ಥಾನ ಹಾಲಿವುಡ್ ನಟಿ ಅಂಬೆರ್ ಹಾರ್ಡ್ ಹಾಗೂ ಇವರ ನಂತರ ಅಮೆರಿಕ ಗಾಯಕಿ ಅರಿಯಾನ ಗ್ರಾಂಡೆಗೆ ನಾಲ್ಕನೇ ಸ್ಥಾನ ನೀಡಲಾಗಿದೆಯಂತೆ. ಏನೇ ಆದರೂ ಈ ಮಾತನ್ನು ಐಶ್ವರ್ಯ ರೈ ಅಭಿಮಾನಿಗಳು ತಳ್ಳಿಹಾಕಿದ್ದಾರೆ. ಐಶ್ ಬೇಬಿ ಮುಂದೆ ಬೇರೆ ಯಾವ ಸುಂದರಿಯರೂ ಸ್ಪರ್ಧಿಸಲು ಸಾಧ್ಯವಿಲ್ಲ ಎಂಬುದು ಅವರ ವಾದ.

 

 

LEAVE A REPLY

Please enter your comment!
Please enter your name here