ಕಾಶೀನಾಥ್ ಅವರು ದೈವಾಧೀನರಾದ ಬಳಿಕ ಸಂಕಷ್ಟದಲ್ಲಿದ್ದ ಅವರ ಕುಟುಂಬಕ್ಕೆ ಹೆಗಲು ನೀಡಿದ್ದು ಯಾರು ಗೊತ್ತಾ?

0
228

ಕನ್ನಡ ಚಿತ್ರರಂಗ ಕಂಡ ಸೃಜನಶೀಲ ನಿರ್ದೇಶಕ ಮತ್ತು ನಟ ಎಂದರೆ ಕಾಶಿನಾಥ್. ಕಾಶಿನಾಥ್ ಅವರ ಗರಡಿಯಲ್ಲಿ ಬೆಳೆದ ಅದೆಷ್ಟೋ ಕಲಾವಿದರು ಇಂದು ಉನ್ನತ ಸ್ಥಾನಕ್ಕೇರಿದ್ದಾರೆ.! ಚಿತ್ರರಂಗಕ್ಕೆ ಅವರು ಸಲ್ಲಿಸಿರುವ ಸೇವೆ ಅಪಾರ.. ಅಲ್ಲದೇ ಹಿಂದಿ ಮತ್ತು ಮಲಯಾಳಂ ಚಲನಚಿತ್ರಗಳಲ್ಲೂ ಕೂಡ ಕೆಲಸ ಮಾಡಿದ್ದಾರೆ. ಮೂರು ದಶಕಗಳ ವೃತ್ತಿಜೀವನದೊಂದಿಗೆ, ಕಾಶಿನಾಥ್ ಅವರು 40 ಕ್ಕೂ ಹೆಚ್ಚು ಚಲನಚಿತ್ರಗಳಲ್ಲಿ ಅಭಿನಯಿಸಿ ಹಾಸ್ಯ ಪ್ರಕಾರದಲ್ಲಿ ತಮ್ಮನ್ನು ತಾವು ಸ್ಥಾಪಿಸಿಕೊಂಡಿದ್ದಾರೆ.

 

 

ನಟ ಉಪೇಂದ್ರ , ಸಂಗೀತಗಾರ ವಿ. ಮನೋಹರ್ ಮತ್ತು ನಿರ್ದೇಶಕ ಸುನೀಲ್ ಕುಮಾರ್ ದೇಸಾಯಿ ಮತ್ತು ಅನೇಕ ಹೊಸ ಪ್ರತಿಭೆಗಳು ಮತ್ತು ತಂತ್ರಜ್ಞರನ್ನು ಪರಿಚಯಿಸಿದ ಕೀರ್ತಿ ಅವರಿಗೆ ಸಲ್ಲುತ್ತದೆ.

 

 

ಅಪರೂಪದ ಅತಿಥಿಗಳು (1976) ಎಂಬ ಹಾಸ್ಯ-ನಾಟಕ ಚಿತ್ರದ ಮೂಲಕ ನಿರ್ದೇಶಕರಾಗಿ ಪಾದಾರ್ಪಣೆ ಮಾಡಿದ ಕಾಶಿನಾಥ್ ಸಸ್ಪೆನ್ಸ್, ಥ್ರಿಲ್ಲರ್ ಅಪರಿಚಿತಾ (1978) ಚಿತ್ರದ ಮೂಲಕ ಬೆಳಕಿಗೆ ಬಂದರು. ಅನುಭವ (1984) ಎಂಬ ಯಶಸ್ವಿ ಚಿತ್ರದ ಮೂಲಕ ಅವರು ನಟನೆಗೆ ಪಾದಾರ್ಪಣೆ ಮಾಡಿದರು. ಅದೇ ಚಿತ್ರವನ್ನು ಹಿಂದಿ ಭಾಷೆಯಲ್ಲಿ ಅನುಭವ್ (1986) ಎಂದು ರೀಮೇಕ್ ಮಾಡಿ ನಿರ್ದೇಶಿಸಿದರು. ಇದು ಅವರ ಬಾಲಿವುಡ್ ಗೆ ಪ್ರವೇಶವನ್ನು ಮಾಡಿತು. ಹೀಗೆ ಅನೇಕ ಚಿತ್ರಗಳನ್ನು ನಿರ್ದೇಶಿಸಿ, ನಿರ್ಮಿಸಿದ ನಟ ಕಾಶಿನಾಥ್ ಅವರು ಸಂಭಾಷಣೆಯನ್ನು ಹೊರತು ಭಾರತ ಚಿತ್ರರಂಗದಲ್ಲಿ ತನ್ನದೇ ಆದ ಹೆಸರನ್ನು ಸ್ಥಾಪಿಸಿಕೊಂಡರು.

 

 

ಸುಮಾರು ತಿಂಗಳುಗಳಿಂದ ಹಾಡ್ಗ್ಕಿನ್ಸ್ ಲಿಂಫೋಮಾದ ಕ್ಯಾನ್ಸರ್ ನಿಂದ ಬಳಲುತ್ತಿದ್ದು, ಶ್ರೀ ಶಂಕರ ಕ್ಯಾನ್ಸರ್ ಫೌಂಡೇಶನ್‌ನ ಅಧಿಕಾರಿಗಳ ಮೂಲಕ ಚಿಕಿತ್ಸೆ ಪಡೆಯುತ್ತಿದ್ದರು. ತಾನು ಕ್ಯಾನ್ಸರ್ ನಿಂದ ಬಳಲುತ್ತಿರುವ ವಿಚಾರವನ್ನು ಕುಟುಂಬದವರಿಗಾಗಲಿ, ಸ್ನೇಹಿತರಿಗಾಗಲಿ ಮತ್ತು ಶಿಷ್ಯರಿಗಾಗಲಿ ಹೇಳಿರಲಿಲ್ಲ.! ಗೌಪ್ಯವಾಗಿ ಇರಿಸಿದ್ದರು. ಜ್ವರ ಮತ್ತು ಉಸಿರಾಟದ ಸಂಬಂಧಿತ ತೊಂದರೆಗಳಿಂದ ಬಳಲುತ್ತಿದ್ದ ಅವರು ಆಸ್ಪತ್ರೆಗೆ ದಾಖಲಾಗಿ 18 ಜನವರಿ 2018 ರಂದು ನಿಧನರಾಗುತ್ತಾರೆ. ಈ ಸುದ್ದಿಯನ್ನು ಕೇಳಿದ ಚಂದನವನದ ಸಿನಿ ತಂತ್ರಜ್ಞರೆಲ್ಲ ಭಾವುಕರಾಗುತ್ತಾರೆ. ಈ ವಿಚಾರವನ್ನು ಅರಗಿಸಿಕೊಳ್ಳಲು ಸ್ವಲ್ಪ ಕಷ್ಟವಾಗುತ್ತದೆ.

 

 

ಅಲ್ಲದೆ ಕುಟುಂಬಸ್ಥರಿಗೆ ಈ ಒಂದು ಸುದ್ದಿಯಿಂದ ದೊಡ್ಡ ಆಘಾತವೇ ಆಗಿಬಿಡುತ್ತದೆ. ಕಾಶಿನಾಥ್ ನಿಧನದ ನಂತರ ಕುಟುಂಬದ ಜವಾಬ್ದಾರಿ ಪುತ್ರ ಅಭಿಮನ್ಯು ಹೆಗಲಿಗೆ ಬೀಳುತ್ತದೆ. ಅದೇಕೋ ಏನೋ ಕಾಶಿನಾಥ್ ಅವರ ಕುಟುಂಬ ಬಹಳ ಕಷ್ಟದ ಪರಿಸ್ಥಿತಿಗೆ ಸಿಲುಕಿ ಬಿಡುತ್ತದೆ. ಆ ಸಮಯದಲ್ಲಿ ಅವರಿಗೆ ಸಾಂತ್ವನ ನೀಡಿ, ಹೆಗಲಿಗೆ ಹೆಗಲು ನೀಡಿದಂತ ವ್ಯಕ್ತಿ ಅದು ಡಿ ಬಾಸ್ ದರ್ಶನ್.

 

 

ಚಂದನವನದಲ್ಲಿ ಈಗ ಕೇಳುತ್ತಿರುವ ಶಬ್ದವೆಂದರೆ ಡಿ ಬಾಸ್. ಅಭಿಮಾನಿಗಳಿಂದ ಬಾಸ್ ಎಂದು ಕರೆಸಿಕೊಳ್ಳುವ ಏಕೈಕ ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್. ಕೇವಲ ಅಭಿನಯದಿಂದ ಮಾತ್ರವಲ್ಲದೇ, ಸಮಾಜಮುಖಿ ಕೆಲಸದಿಂದಲು ತಮ್ಮನ್ನು ತಾವು ತೊಡಗಿಸಿಕೊಂಡು ಅಭಿಮಾನಿಗಳ ಮನಸ್ಸಿನಲ್ಲಿ ಹಚ್ಚುಳಿದಿದ್ದಾರೆ.! ಕೇವಲ ಬಾಕ್ಸ್ ಆಫೀಸ್ ಸುಲ್ತಾನ ಮಾತ್ರವಲ್ಲದೆ, ಸ್ನೇಹಿತರಿಗೆ, ಆಪತ್ಬಾಂಧವ ಕೂಡ ಹೌದು.

 

 

ತನ್ನ ಸ್ನೇಹಿತರು ಎಂತಹ ಕಷ್ಟದಲ್ಲಿದ್ದರೂ ಅವರ ಬೆನ್ನಿಗೇ ಬೆನ್ನೆಲುಬಾಗಿ ನಿಂತು ಅವರನ್ನು ಮೇಲೆತ್ತುತ್ತಾರೆ. ಬಲಗೈಯಲ್ಲಿ ಮಾಡಿದ ಕೆಲಸ ಎಡಗೈಗೆ ಗೊತ್ತಾಗಬಾರದು ಎಂಬಂತೆ ದರ್ಶನ್ ತಾನು ಮಾಡುವ ಸಹಾಯವನ್ನು, ಎಲ್ಲರ ಮುಂದೆಯೂ ಬಿಚ್ಚಿಡುವುದಿಲ್ಲ, ಮತ್ತು ಯಾರಿಗೂ ತೋರಿಸುವುದಿಲ್ಲ. ಅಂತೆಯೇ ಕಾಶಿನಾಥ್ ಅವರ ಕುಟುಂಬಕ್ಕೆ ಸಹಾಯ ಮಾಡಿ ಹೃದಯವಂತಿಕೆಯನ್ನು ಮೆರೆದಿದ್ದಾರೆ.

 

 

ಕಾಶಿನಾಥ್ ಅವರ ನಿಧನದ ನಂತರ ಕಷ್ಟದ ಸುಳಿಗೆ ಸಿಲುಕಿದ ಅಭಿಮನ್ಯು ಅವರು ಮೇಲೇರಲು ಬಹಳ ನೋವನ್ನು ಅನುಭವಿಸುತ್ತಿರುದ್ದರು. ಆಗ ಅಭಿಮನ್ಯುವಿನ ಬೆನ್ನ ಹಿಂದೆ ನಿಂತಿದ್ದೆ ಡಿ ಬಾಸ್.. ಈ ವಿಚಾರವನ್ನು ಸ್ವತಃ ಅಭಿಮನ್ಯು ಅವರೇ ಹೇಳಿಕೊಂಡಿದ್ದಾರೆ.

 

 

ಡಿ ಬಾಸ್ ಬಗ್ಗೆ ಮಾತನಾಡಿದ ಅಭಿಮನ್ಯು ನಾನು ನನ್ನ ತಂದೆಯನ್ನು ಕಳೆದುಕೊಂಡ ನಂತರ ಕುಟುಂಬದ ಜವಾಬ್ದಾರಿಯೆಲ್ಲ ನನ್ನ ಹೆಗಲ ಮೇಲೆ ಬಂದಿತ್ತು. ತಂದೆ ಇಹಲೋಕ ತ್ಯಜಿಸಿದಾಗ ಎಲ್ಲರೂ ಬಂದು ಸಾಂತ್ವನ ಹೇಳಿದರೇ ಹೊರತು, ಯಾರು ನನ್ನ ಬೆನ್ನ ಹಿಂದೆ ನಿಲ್ಲಲೇ ಇಲ್ಲ. ಆಗ ನನಗೆ ಸಹಾಯ ಮಾಡಿದ್ದು, ದರ್ಶನ್ ಸರ್ ಮಾತ್ರ.

 

 

ದರ್ಶನ್ ಅವರು ಏಕಾಏಕಿ ನನ್ನ ಬಳಿ ಬಂದು ‘ಚಿನ್ನ ನಿನಗೇನೆ ಬೇಕಿದ್ದರೂ ನನ್ನನ್ನು ಕೇಳು ಹದಿನೈದು ನಿಮಿಷದಲ್ಲಿ ನಾನು ಮಾಡಿಕೊಡುತ್ತೇನೆ’ ಎಂದು ಹೇಳಿದ್ದರು.! ಆ ಸಮಯದಲ್ಲಿ ನಾನು ಬಹಳ ಕಷ್ಟದಲ್ಲಿದ್ದು, ದೇವರಂತೆ ಬಂದ ದರ್ಶನ್ ರವರ ಈ ಮಾತನ್ನು ಕೇಳಿದಾಗ ಬಹಳ ಭಾವುಕನಾದೆ. ಇದಾದ ಬಳಿಕ ಸಾಕಷ್ಟು ಬಾರಿ ಅವರ ಹತ್ತಿರ ಸಹಾಯ ಕೇಳಿದ್ದೇನೆ. ನನ್ನ ಅಣ್ಣನಂತೆ ನಿಂತು ಸಹಾಯ ಮಾಡಿದ್ದಾರೆ ಎಂದು ಹೇಳಿ ಕಣ್ಣಂಚಲ್ಲಿ ನೀರು ತುಂಬಿಕೊಂಡರು.

 

 

ಬರೀ ತೆರೆಯ ಮೇಲೆ ಯಜಮಾನ, ಒಡೆಯನಾಗದೆ ನೋವಿನಲ್ಲಿರುವ ಅದೆಷ್ಟೋ ಮಂದಿಗೆ ಸಹಾಯ ನೀಡುತ್ತಾ ಅವರ ಜೀವನದ ಒಡೆಯನಾಗಿದ್ದಾರೆ. ದರ್ಶನ್ ಅವರ ಈ ಸಮಾಜ ಕೆಲಸಗಳು ನಿಮಗೆ ಇಷ್ಟವಾದಲ್ಲಿ ಕಾಮೆಂಟ್ ಮುಖಾಂತರ ತಿಳಿಸಿ.

LEAVE A REPLY

Please enter your comment!
Please enter your name here