7 ಗಂಟೆ ನಂತರ ಗಂಡು ಮಕ್ಕಳು ಮನೆಯಲ್ಲಿರಲಿ !

0
256

ಇತ್ತೀಚೆಗೆ ಸಮಾಜದಲ್ಲಿ ಅತ್ಯಾಚಾರಗಳು ಮೇಲಿಂದ ಮೇಲೆ ನಡೆಯುತ್ತಲೇ ಇದೆ ! ವಯಸ್ಕ ಹೆಣ್ಣುಮಕ್ಕಳು ಸೇರಿದಂತೆ ಹದಿಹರೆಯದ ಬಾಲಕಿಯರ ಮೇಲೆ ಅತ್ಯಾಚಾರಗಳು ಕ್ರೂರವಾಗಿ ನಡೆಯುತ್ತಲೇ ಇದೆ. ತಮ್ಮ ಕಾಮದಾಸೆಗೆ ಅದೆಷ್ಟೋ ಕಾಮ ಪಿಶಾಚಿಗಳು ಪ್ರಪಂಚವನ್ನೇ ಅರಿತುಕೊಳ್ಳದ ಹೆಣ್ಣುಮಕ್ಕಳನ್ನು ಲೈಂಗಿಕ ಕ್ರಿಯೆಗೆ ಬಳಸಿ ಬಲಿ ತೆಗೆದುಕೊಳ್ಳುತ್ತಿದ್ದಾರೆ. ಬೇರೆ ದೇಶದ ಕಾನೂನಿನಂತೆ ನಮ್ಮ ದೇಶದ ಕಾನೂನು ಅತ್ಯಾಚಾರ ಮಾಡಿದವರಿಗೆ ಸರಿಯಾದ ಶಿಕ್ಷೆ ನೀಡುತ್ತಿಲ್ಲ. ಆದುದರಿಂದಲೇ ದಿನದಿಂದ ದಿನಕ್ಕೆ ಅತ್ಯಾಚಾರಿಗಳ ಸಂಖ್ಯೆ ಹೆಚ್ಚಾಗುತ್ತಲೇ ಇದೆ !

 

 

ಇತ್ತೀಚಿಗೆ ತೆಲಂಗಾಣದಲ್ಲಿ 26 ವರ್ಷದ ಪಶುವೈದ್ಯೆ ಮೇಲಿನ ಸಾಮೂಹಿಕ ಅತ್ಯಾಚಾರ ಹಾಗೂ ಕೊಲೆ ಪ್ರಕರಣ ಇಡೀ ದೇಶವನ್ನೆ ಬೆಚ್ಚಿ ಬೀಳಿಸಿದೆ. ಭಾರತ ದೇಶವೂ ಮಹಿಳೆಯರಿಗೆ ಸುರಕ್ಷಿತವಲ್ಲ ಎಂಬ ಮಾತು ಹಲವರದ್ದಾಗಿದೆ. ಸರ್ಕಾರವು ಮಹಿಳೆಯರ ಸುರಕ್ಷತೆಗೆ ಯಾವ ಕ್ರಮ ಕೈಗೊಳ್ಳಬಹುದು ಎಂಬ ಕುರಿತಾಗಿಯೂ ಚರ್ಚೆಗಳು ನಡೆಸುತ್ತಿದೆ. ಪ್ರತಿಭಟನೆಯಲ್ಲಿ ಪಾಲ್ಗೊಂಡ ಓರ್ವ ಮಹಿಳೆ ಈ ಕುರಿತಾಗಿ ನೀಡಿರುವ ಉತ್ತರ ಫುಲ್ ವೈರಲ್ ಆಗಿದೆ.

 

 

ನಿಮಗೆ ಗೊತ್ತಿರುತ್ತದೆ,
ಪ್ರತಿ ಬಾರಿ ಅತ್ಯಾಚಾರದ ಪ್ರಕರಣಗಳು ಹೊರ ಬಂದಾಗ ಮಹಿಳೆಯರ ಸುರಕ್ಷತೆಗಾಗಿ ಸರ್ಕಾರದ ವತಿಯಿಂದ ಮತ್ತು ಪೊಲೀಸ್ ಇಲಾಖೆ ಯಿಂದ ಕೆಲವು ಪ್ರಕಟಣೆಗಳನ್ನು ಹೊರಡಿಸಲಾಗುತ್ತದೆ.. ಈ ಪ್ರಕಟಣೆಯಲ್ಲಿ ತಮ್ಮನ್ನು ತಾವು ಹೇಗೆ ರಕ್ಷಿಸಿಕೊಳ್ಳಬೇಕು ಎಂಬ ಸಲಹೆಗಳನ್ನು ನೀಡಿರುತ್ತಾರೆ. ಅಲ್ಲದೇ ಕೆಲ ಗಣ್ಯ ಅಧಿಕಾರಿಗಳು ಮತ್ತು ರಾಜಕಾರಣಿಗಳು, ಮಹಿಳೆಯರಿಗೆ ನೈಟ್ ಶಿಫ್ಟ್ ನೀಡಬಾರದು ಎಂದು ಹೇಳುತ್ತಿರುತ್ತಾರೆ.

 

 

ಆದರೆ ಈ ಸಲಹೆಗಳಿಂದ ನಿಜವಾಗಿಯೂ ಹೆಣ್ಣುಮಕ್ಕಳನ್ನು ಸಂರಕ್ಷಿಸುತ್ತದೆ ಎಂಬ ಗೊಂದಲ ನಮ್ಮಲ್ಲಿ ಸದಾ ಕಾಡುತ್ತಿರುತ್ತದೆ..ಯಾಕೆಂದರೆ ಕತ್ತಲಾಗುವ ಮುನ್ನವೇ ಹೆಣ್ಣುಮಕ್ಕಳು ಮನೆ ಸೇರಿದರೂ ಅತ್ಯಾಚಾರದ ಪ್ರಕರಣಗಳು ಕೇಳಿ ಬರುತ್ತಿವೆ.. ಮೊದಲೆಲ್ಲಾ ಹಿರಿಯರು ‘ಹುಷಾರಾಗಿ ಮನೆಗೆ ಬಾ’ ಎನ್ನುತ್ತಿದ್ದರು ಆದರೆ ಈಗ ‘ಹುಷಾರಾಗಿ ಬದುಕಿ ಬಾ’ ಎಂದು ಹೇಳುವ ಪರಿಸ್ಥಿತಿ ಬಂದಿದೆ.. ಹೀಗಿರುವಾಗ ಹೈದರಾಬಾದ್ ವೈದ್ಯೆ ಮೇಲಿನ ಅತ್ಯಾಚಾರ ಹಾಗೂ ಕೊಲೆ ಪ್ರಕರಣ ಖಂಡಿಸಿ ನಡೆಯುತ್ತಿದ್ದ ಪ್ರತಿಭಟನೆಯಲ್ಲಿ ಮಹಿಳೆಯೊಬ್ಬರು ಕೊಟ್ಟಿರುವ ಸಲಹೆ ಸಾಮಾಜಿಕ ಜಾಲ ತಾಣಗಳಲ್ಲಿ ಸಕತ್ ಆಗಿದೆ ಮತ್ತು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.

 

 

ಹೆಣ್ಣುಮಕ್ಕಳಿಗೆ ಕತ್ತಲಾಗುವ ಮೊದಲು ಮನೆ ಸೇರಿ ಎಂದು ಹೇಳುವ ಬದಲು, ಗಂಡು ಮಕ್ಕಳಿಗೆ ಸಂಜೆ 7 ಗಂಟೆಯೊಳಗೆ ಮನೆ ಸೇರಿ ಎಂದರೆ ಬಹಳ ಚೆನ್ನಾಗಿರುತ್ತದೆ, ಹೀಗಾದರೆ ಮಹಿಳೆಯರು ಸೇಫ್ ಆಗಿರುತ್ತಾರೆ ಮತ್ತು ರಾತ್ರಿ ಹೊತ್ತು ಯಾವುದೇ ಅಡ್ಡಿ ಆತಂಕವಿಲ್ಲದೆ ಪ್ರಯಾಣಿಸಬಹುದು..ನಮ್ಮ ಸಮಸ್ಯೆಯ ಮೂಲ ಕಾರಣ ‘ನೀನು’,ಆದುದರಿಂದ ನೀನು ಮನೆಯಲ್ಲಿರು.. ಹೀಗಾದಲ್ಲಿ ನಮ್ಮ ಸುರಕ್ಷತೆಗಾಗಿ ಯಾವುದೇ ಪೊಲೀಸ್ ಅಧಿಕಾರಿ ಅಥವಾ ಸಹೋದರನನ್ನು ನಾವು ಅವಲಂಭಿಸಬೇಕಾಗಿಲ್ಲ’ ಎಂದು ಪ್ರತಿಭಟನೆ ಸಂದರ್ಭದಲ್ಲಿ ಮಾತನಾಡಿದ್ದಾರೆ …

LEAVE A REPLY

Please enter your comment!
Please enter your name here