ಚಂದನವನದಲ್ಲಿ ಸದ್ಯ ಚಿತ್ರಗಳು ಒಂದಷ್ಟು ದಿನಗಳು ಓಡಿದರೆ ಅದನ್ನೇ ನಾವು ದಾಖಲೆ ಎನ್ನುತ್ತೇವೆ. ಆದರೆ ಈವರ್ಷ ನಿನಾಸಂ ಸತೀಶ್ ಅಭಿನಯದ ಬ್ರಹ್ಮಚಾರಿ ಸಿನಿಮಾ ಮೂರನೇ ವಾರವು ಥಿಯೇಟರ್ ನಲ್ಲಿ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಈ ಸಿನಿಮಾ ಸಕ್ಸಸ್ ಹಿನ್ನೆಲೆ ನಡೆದ ಸುದ್ದಿಗೋಷ್ಠಿಯಲ್ಲಿ ನಟಿ ಅದಿತಿ ಪ್ರಭುದೇವ ಮಾತ್ರ ಕಣ್ಣೀರು ಹಾಕಿದ್ದಾರೆ.
ಹೌದು, ನಟ ನೀನಾಸಂ ಸತೀಶ್ ಅಭಿನಯದ ಬ್ರಹ್ಮಚಾರಿ 100 ಪರ್ಸೆಂಟ್ ವರ್ಜಿನ್ ಎಂಬ ಟ್ಯಾಗ್ಲೈನ್ ನೊಂದಿಗೆ ಚಿತ್ರಮಂದಿರಗಳಿಗೆ ಕಳೆದ 3 ವಾರಗಳ ಕೆಳಗೆ ಲಗ್ಗೆ ಇಟ್ಟಿತ್ತು. ಇನ್ನು ಇದೇ ಬ್ರಹ್ಮಚಾರಿ ಚಿತ್ರದ ಕಾಮಿಡಿ ಕಚಗುಳಿಗೆ ಪ್ರೇಕ್ಷಕರ ಬಿದ್ದು ಬಿದ್ದು ನಗುತ್ತಿದ್ದಾರೆ. ಇದೇ ಕಾರಣಕ್ಕೆ ಇಡೀ ಬ್ರಹ್ಮಚಾರಿ ಟೀಂ ಸಕ್ಸಸ್ ಖುಷಿಯಲ್ಲಿದೆ. ನಿನಾಸಂ ಸತೀಶ್ ಮಾತನಾಡಿ ಬ್ರಹ್ಮಚಾರಿ ಎರಡನೇ ವಾರದ ನಂತರ 200 ಥಿಯೇಟರ್ಗಳಲ್ಲಿ ಯಶಸ್ವಿಯಾಗಿ ಓಡುತ್ತಿರುವುದು ಸಂತಸ ತಂದಿದೆ.
ಒಂದು ಸಿನಿಮಾ ಗೆದ್ದರೆ ಬರಗಾಲದಲ್ಲಿ ಮಳೆ ಬಂದಂಗೆ , ಎಲ್ಲರಿಗೂ ಕೆಲಸ ಸಿಗುತ್ತದೆ ಎಂದು ನಟರಾದಿಯಾಗಿ ಇಡೀ ಚಿತ್ರತಂಡವೇ ಸಂತಸದಗಡಲಲ್ಲಿ ತೇಲುತ್ತಿತ್ತು..ಆದರೆ ಬ್ರಹ್ಮಚಾರಿ ಸಿನಿಮಾ ಬಗ್ಗೆ ಬಂದ ಕೆಲವು ನೆಗೆಟಿವ್ ಕಾಮೆಂಟ್ಸ್ಗಳಿಂದ ರೋಸಿ ಹೋಗಿರುವ ನಟಿ ಅಧಿತಿ ಪ್ರಭುದೇವ ಸುದ್ದಿಗೋಷ್ಠಿಯಲ್ಲೇ ಕಣ್ಣೀರು ಹಾಕಿದರು. ನನ್ನ ಬಗ್ಗೆ ನಿಂದಿಸುವವರ ಬಗ್ಗೆ ನಾನು ತಲೆಕೆಡಿಸಿಕೊಳ್ಳುವುದಿಲ್ಲ ಎಂದು ದಾಸರ ಪದ ಹೇಳಿ ಟಾಂಗ್ ಕೊಟ್ಟಿದ್ದಾರೆ. ಅಲ್ಲದೇ, ಯಾರು ಕ್ಯಾಮೆರಾಗಳಿಗೆ ಕಾಣಿಸಿಕೊಳ್ಳುತ್ತಾರೆ ಅವರ ಜೀವನವು ಬಹಳ ಕಷ್ಟವಾಗಿರುತ್ತದೆ.
ಒಂದೊಂದು ಸಾರಿ ಹಿಂಸೆಯಿಂದ ರೋಸಿಹೋಗಿಬಿಡುತ್ತೇವೆ ಎಂದಿದ್ದಾರೆ. ಬ್ರಹ್ಮಚಾರಿ ಚಿತ್ರ ಯಶಸ್ವಿ ಪ್ರದರ್ಶನ ಕಾಣುತ್ತಿದ್ದು, ಈ ವಾರ ಇನ್ನೂ 25 ಚಿತ್ರಮಂದಿರ ಹೆಚ್ಚಾಗಿದೆ ಎಂದು ನಿರ್ಮಾಪಕ ಉದಯ್ ಕೆ. ಮೆಹ್ತಾ ಸಂಭ್ರಮಿಸಿದರೆ, ಬ್ರಹ್ಮಚಾರಿ ನನ್ನ ಮೂರನೇ ಸಿನಿಮಾವಾಗಿದ್ದು, ಇದು ನನಗೆ ಹೆಸರು ತಂದು ಕೊಟ್ಟಿದೆ ಎಂದು ನಿರ್ದೇಶಕ ಚಂದ್ರ ಮೋಹನ್ ಖುಷಿ ಪಟ್ಟರು. ಸುದ್ದಿಗೋಷ್ಠಿಯಲ್ಲಿ ಎಲ್ಲಿಯೂ ಸಹ ಅದಿತಿ ಪ್ರಭುದೇವ್ ಅವರು ತಮಗಾದ ಅನ್ಯಾಯದ ಬಗ್ಗೆ ರಿವೀಲ್ ಮಾಡಲಿಲ್ಲ.