ಆದಿ ಚುಂಚನಗಿರಿ ಮಠದಿಂದ ಪ್ರವಾಹ ಸಂತ್ರಸ್ಥರಿಗೆ ನೆರವು..!

0
160

ರಾಜ್ಯಾದ್ಯಂತ ಸುರಿದ ಭೀಕರ ಮಳೆ ಅನೇಕರ ಬದುಕನ್ನು ನಾಶ ಮಾಡಿದೆ. ಇನ್ನು ಉತ್ತರ ಕರ್ನಾಟಕದಲ್ಲಿ ಆರಂಭವಾದ ಪ್ರವಾಹ ನಂತರದ ದಿನಗಳಲ್ಲಿ ದಕ್ಷಿಣ ಒಳನಾಡು ಮತ್ತು ಕರಾವಳಿ ಜಿಲ್ಲೆಗಳನ್ನು ವ್ಯಾಪಿಸಿ, ಅಪಾರ ನಷ್ಟ ಉಂಟು ಮಾಡಿದೆ.

ಇನ್ನು ಕಾಫಿ ನಾಡು ಚಿಕ್ಕಮಗಳೂರಿನಲ್ಲಿ ಭೀಕರ ಮಳೆಯಿಂದ ಅಪಾರ ಹಾನಿ ಸಂಭವಿಸಿದೆ. ಹೀಗಾಗಿ ಆದಿ ಚುಂಚನಗಿರಿ ಮಹಾ ಸಂಸ್ಥಾನ ಮಠ ನೊಂದ ಜನರಿಗೆ ಆಸರೆಯಾಗಲು ಮುಂದೆ ಬಂದಿದೆ. ಹೌದು, ಆದಿ ಚುಂಚನಗಿರಿ ಮಠ ಸಂತ್ರಸ್ತರಿಗೆ 1 ಸಾವಿರ ರಗ್ಗು ಹಾಗೂ ಆಹಾರ ಸಾಮಗ್ರಿಗಳನ್ನು ವಿತರಣೆ ಮಾಡಿದೆ. ಹಾಸನ ಶಾಖಾ ಮಠ, ನೆರವಿನ ವಸ್ತುಗಳನ್ನು ತಲುಪಿಸುವಲ್ಲಿ ನಿರತವಾಗಿದೆ.

ಇನ್ನು ಶ್ರೀ ನಿರ್ಮಲಾನಂದ ಸ್ವಾಮೀಜಿ ಅವರು ಇಂದು ಪರಿಹಾರ ಕೇಂದ್ರಗಳಿಗೆ ಭೇಟಿ ನೀಡಿದ್ದಾರೆ. ಮೂಡಿಗೆರೆ, ಸಕಲೇಶಪುರ ಸೇರಿದಂತೆ ಚಿಕ್ಕಮಗಳೂರು ಜಿಲ್ಲೆಯ ಪ್ರವಾಹ ಪೀಡಿತ ಪ್ರದೇಶಗಳಿಗೆ ಶ್ರೀಗಳು ತೆರಳಲಿದ್ದಾರೆ.

LEAVE A REPLY

Please enter your comment!
Please enter your name here