ಕ್ಯಾನ್ಸರ್ ಗಾಳಿಗೆ ತೂರಿ ಕೆಜಿಎಫ್ ಶೂಟಿಂಗ್ ಗೆ ಬರಲಿದ್ದಾನೆ ಅಧೀರ

0
67

ಬೆಂಗಳೂರು: ಅಧೀರ ಕ್ರೂರಿ ಅಲ್ಲ.. ರಣ ಕ್ರೂರಿ..ಭಯಕ್ಕೆ ಮತ್ತೊಂದು ಹೆಸರೇ ಅಧೀರ.. ಹೀಗೊಂದು ಪದ ಬಳಸುವ ಮೂಲಕ ಕೆಜಿಎಫ್ ಪಾರ್ಟ್ 1 ಸಿನಿಮಾ ಸಿನಿ ರಸಿಕರನ್ನು ಹಿಡಿದಿಟ್ಟಿತ್ತು.. ಕುತೂಹಲ ಮೂಡಿಸಿತ್ತು.. ಅಧೀರ ಪಾರ್ಟ್ 2 ನಲ್ಲಿ ಭರ್ಜರಿ ಎಂಟ್ರಿ ಕೊಡಲಿದ್ದಾನೆ.. ಭಯಾನಕವಾಗಿ ಕಾಣಿಸಿಕೊಳ್ಳಲಿದ್ದಾನೆ ಎಂಬ ಸುದ್ದಿ ಹಬ್ಬುತ್ತಿರುವಾಗಲೇ ಇತ್ತ ಸಂಜಯ್ ದತ್ ಕುಸಿದಿದ್ದರು..

ಕಳೆದು 3 ತಿಂಗಳಿನಿಂದ ಶ್ವಾಸಕೋಶದ ಕ್ಯಾನ್ಸರ್ ಸಮಸ್ಯೆ ಅವರನ್ನು ಇನ್ನಿಲ್ಲದಂತೆ ಕಾಡಿಸಿತ್ತು.. ಇದಕ್ಕಾಗಿ ಅವರು ಚಿಕಿತ್ಸೆಯನ್ನು ಪಡೆಯುತ್ತಿದ್ರು.. ಅಲ್ಲದೇ ಇತ್ತೀಚೆಗೆ ಈ ಸಂಬಂಧ ವಿದೇಶಕ್ಕೂ ಹೋಗಿದ್ದರು. ಹೀಗಾಗಿ ಅವರ ಅಭಿಮಾನಿಗಳಲ್ಲಿ ಹಾಗೂ ಕೆಜಿಎಫ್ ತಂಡಕ್ಕೆ ಆತಂಕ ಮೂಡಿಸಿತ್ತು.. ಆದರೆ ಇದೀಗ ಕಟಿಂಗ್ ಶಾಪ್ ನಲ್ಲಿ ಕಾಣಿಸಿಕೊಳ್ಳುವ ಮೂಲಕ ಸಂಜು ಬಾಬಾ ಫಿಟ್ ಆ್ಯಂಡ್ ಫೈನ್ ಆಗಿರುವ ಕುರಿತು ತಿಳಿಸಿದ್ದಾರೆ.

ಯಸ್.. ನಾನು ಫಿಟ್ ಆ್ಯಂಡ್ ಫೈನ್ ಆಗಿದ್ದೀನಿ ಅಂತ ಸಂಜಯ್ ದತ್ ಅಲಿಯಾಸ್ ಅಧೀರ ಹೇಳ್ಕೊಂಡಿದ್ದಾರೆ. ಸೆಲೆಬ್ರಿಟಿ ಹೇರ್ ಸ್ಟೈಲಿಸ್ಟ್ ಆಲಿಮ್ ಹಕೀಮ್ ಅವರ ಸಲೂನ್ಗೆ ಹೋಗಿ ಸಂಜಯ್ ದತ್ ಕಟಿಂಗ್ ಮಾಡಿಸಿಕೊಂಡಿದ್ದಾರೆ. ಇದೇ ವೇಳೆ ಮಾತನಾಡಿರುವ ಅವರು, ಈಗ ನನಗೆ ಯಾವುದೇ ಆರೋಗ್ಯ ಸಮಸ್ಯೆ ಇಲ್ಲ. ಅನಾರೋಗ್ಯದಿಂದ ಬಳಲುತ್ತಿದ್ದೇನೆ ಎಂಬ ರೀತಿ ಬರೆಯಬೇಡಿ ಎಂದು ಕೇಳಿಕೊಂಡಿರೋ ವಿಡಿಯೋ ಸಖತ್ ವೈರಲ್ ಆಗಿದೆ.

 

View this post on Instagram

 

My day just got better with @duttsanjay entering our Salon HA… It’s always such a delight to see him but today was something else…. A whole lot of emotions caught up as we go a long way and share such beautiful memories together.❤️ Sanjay Dutt at Salon Hakim’s Aalim after getting a haircut done with all the necessary precautions Instructed by the government and the experts. #SanjayDutt #AalimHakim #Rockstar #SalonHakimsAalim #TeamHA #SafetyFirst #Precautions #Hygiene #SocialDistancing #NewNorms #TeamHakimsAalim #SalonLife #Viral #Trending #MovieLife #razorcuts #ActorsLife #fighter #warrior #babarocks #friends #menshair #mensfunkyhairstyle #funkyhaircolouring #legacy #habarberingcompany💈 @duttsanjay @aalimhakim

A post shared by Aalim Hakim (@aalimhakim) on

“ಕ್ಯಾನ್ಸರ್ ಅನ್ನು ಬಹು ಬೇಗ ಮಣಿಸುತ್ತೇನೆ”

ಆಲಿಮ್ ಹಕೀಮ್ ಸಹ ಕಟಿಂಗ್ ಮಾಡುತ್ತಿದ್ದ ವಿಡಿಯೋ ಹಂಚಿಕೊಂಡಿದ್ದು, ಇದರಲ್ಲಿ ಸಂಜು ಬಾಬಾ ಮಾತನಾಡಿದ್ದಾರೆ. ಸಲೂನ್ಗೆ ಮರಳಿ ಬಂದಿದ್ದಕ್ಕೆ ತುಂಬಾ ಸಂತೋಷವಾಗುತ್ತಿದೆ. ಕ್ಯಾನ್ಸರ್ ನ್ನು ಬಹುಬೇಗ ಮಣಿಸುತ್ತೇನೆ. ಆಲಿಮ್ ಹಾಗೂ ನಾನು ತುಂಬಾ ಹಳೆಯ ಸ್ನೇಹಿತರು ಎಂದಿದ್ದಾರೆ.

ನವೆಂಬರ್ ನಲ್ಲಿ ಕೆಜಿಎಫ್ ಚಿತ್ರೀಕರಣದಲ್ಲಿ ಸಂಜಯ್ ದತ್ ಭಾಗಿ

ಸಂಜಯ್ ದತ್ ಆಸ್ಪತ್ರೆ ಸೇರಿದ ಬೆನ್ನಲ್ಲೇ ಕೆಜಿಎಫ್ ತಂಡಕ್ಕೆ ಆತಂಕ ಶುರುವಾಗಿತ್ತು. ಆದರೆ ಇದೀಗ ಸಂಜಯ್ ದತ್ ಮುಂಬೈಗೆ ಬಂದಿಳಿದಿದ್ದರಿಂದ ಸಂತಸಗೊಂಡಿದ್ದಾರೆ. ಚಿಕಿತ್ಸೆ ಬಳಿಕ ಚೇತರಿಸಿಕೊಂಡಿರುವ ಸಂಜಯ್ ದತ್, ಚಿತ್ರೀಕರಣಕ್ಕೆ ಮರಳಲು ಸಿದ್ಧತೆ ನಡೆಸಿದ್ದಾರೆ. ನವೆಂಬರ್ ನಲ್ಲಿ ಕೆಜಿಎಫ್-2 ಚಿತ್ರೀಕರಣಕ್ಕೆ ಹಾಜರಾಗಲಿದ್ದಾರೆ ಎನ್ನಲಾಗಿದೆ.ಅದಕ್ಕಾಗಿ ವರ್ಕೌಟ್ ಸಹ ಮಾಡ್ತಿದ್ದಾರೆ. ಸದ್ಯ ಮಂಗಳೂರಿನಲ್ಲಿ ಕೆಜಿಎಫ್-2 ಸಿನಿಮಾದ ಶೂಟಿಂಗ್ ನಡೆಯುತ್ತಿದ್ದು, ಯಶ್, ನಾಯಕಿ ಶ್ರೀನಿಧಿ ಶೆಟ್ಟಿ ಭಾಗದ ಚಿತ್ರೀಕರಣ ನಡೆಯುತ್ತಿದೆ.

LEAVE A REPLY

Please enter your comment!
Please enter your name here