ತಾಯಿಯಾದ್ರೂ ಅದೇ ಗ್ಲಾಮರ್ ಉಳಿಸಿಕೊಂಡಿರುವ ನಟಿ… ನಿಜಕ್ಕೂಇವರೇನಾ ಸಿಂಪಲ್ ಹುಡುಗಿ…?

0
356

ಈ ಫೋಟೋಗಳನ್ನು ನೋಡುತ್ತಿದ್ರೆ ಇವರೇನಾ ಶ್ವೇತಾ ಶ್ರೀವಾತ್ಸವ್ ಅನ್ನಿಸುತ್ತಿದೆ. ಏಕೆಂದರೆ ಶ್ವೇತಾ ಮದುವೆಯಾಗಿ ಮಗು ಆದ ನಂತರ ಇನ್ನೂ ಅದೇ ಗ್ಲಾಮರ್ ಉಳಿಸಿಕೊಂಡಿದ್ದಾರೆ. ‘ರಹದಾರಿ’ ಸಿನಿಮಾ ಮೂಲಕ ಸೆಕೆಂಡ್ ಇನ್ನಿಂಗ್ಸ್ ಆರಂಭಿಸಿರುವ ಶ್ವೇತಾ ಹೊಸ ಫೋಟೋಶೂಟ್ ಮಾಡಿಸಿದ್ದಾರೆ.

 

 

2006 ರಲ್ಲಿ ‘ಮುಖಾಮುಖಿ’ ಚಿತ್ರದ ಮೂಲಕ ಬೆಳ್ಳಿತೆರೆಯಲ್ಲಿ ಬಣ್ಣದ ಪಯಣ ಆರಂಭಿಸಿದ ಶ್ವೇತಾಗೆ ಹೆಸರು ನೀಡಿದ್ದು ಮಾತ್ರ ‘ ಸಿಂಪಲ್ಲಾಗ್ ಒಂದ್ ಲವ್ಸ್ಟೋರಿ’ ಸಿನಿಮಾ. ನಂತರ ಫೇರ್ ಅ್ಯಂಡ್ ಲವ್ಲಿ, ಕಿರಗೂರಿನ ಗಯ್ಯಾಳಿಗಳು ಸೇರಿ ಕೆಲವೊಂದು ಸಿನಿಮಾಗಳಲ್ಲಿ ನಟಿಸಿದರು. ನಂತರ ತಾಯಿ ಆದ್ದರಿಂದ ಆ್ಯಕ್ಟಿಂಗ್ನಿಂದ ದೂರ ಸರಿದರು. ಈಗ ಶ್ವೇತಾಗೆ ಅಶ್ಮಿತಾ ಎಂಬ 2 ವರ್ಷದ ಮುದ್ದಾದ ಮಗಳಿದ್ದಾಳೆ.

 

 

ಮೂರು ವರ್ಷಗಳ ನಂತರ ಶ್ವೇತಾ ಮತ್ತೆ ಆ್ಯಕ್ಟಿಂಗ್ಗೆ ವಾಪಸಾಗಿದ್ದಾರೆ. ‘ರಹದಾರಿ’ ಸಿನಿಮಾದಲ್ಲಿ ಶ್ವೇತಾ ಪೊಲೀಸ್ ಅಧಿಕಾರಿಯಾಗಿ ನಟಿಸುತ್ತಿದ್ದಾರೆ. ಸಿನಿಮಾ ಶೂಟಿಂಗ್ ಆರಂಭಕ್ಕೂ ಮುನ್ನ, ಹೊಸ ಫೋಟೋಶೂಟ್ ಕೂಡಾ ಮಾಡಿಸಿದ್ದಾರೆ.

 

 

ಈ ಫೋಟೋಶೂಟ್ನಲ್ಲಿ ಅವರು ಸಖತ್ ಹಾಟ್ ಆಗಿ ಕಾಣುತ್ತಾರೆ. ಒಂದು ಮಗುವಿನ ತಾಯಿ ಆದರೂ ಶ್ವೇತಾ ಮಾತ್ರ ಮೊದಲಿದ್ದ ಗ್ಲಾಮರ್ ಉಳಿಸಿಕೊಂಡಿದ್ದಾರೆ. ತಾಯಿ ಆದ ಮೇಲೆ ತೂಕ ಹೆಚ್ಚಾದರೂ ಇದೀಗ ತೂಕ ಇಳಿಸಿಕೊಂಡು ಮತ್ತೆ ಸ್ಲಿಮ್ ಹಾಗೂ ಫಿಟ್ ಆಗಿದ್ದಾರೆ.

 

 

ಸ್ಯಾಂಡಲ್ವುಡ್ನಲ್ಲಿ ಎರಡನೇ ಇನ್ನಿಂಗ್ಸ್ ಆರಂಭಿಸಿರುವ ಶ್ವೇತಾ ಅವರನ್ನು ಸಿನಿಪ್ರಿಯರು ಹೇಗೆ ಸ್ವೀಕರಿಸುತ್ತಾರೆ ಎಂಬುದನ್ನು ಕಾದು ನೋಡಬೇಕು.

LEAVE A REPLY

Please enter your comment!
Please enter your name here