ಕರ್ನಾಟಕ ನಾಟಕ ಅಕಾಡೆಮಿ 2019-20ನೇ ಸಾಲಿನ ವಾರ್ಷಿಕ ಪ್ರಶಸ್ತಿಗಳನ್ನು ಪ್ರಕಟಿಸಿದೆ. ಕನ್ನಡದ ಹಿರಿಯ ನಟಿ ಉಮಾಶ್ರೀ ಅವರು ಜೀವಮಾನದ ಸಾಧನೆ ಪ್ರಶಸ್ತಿಗೆ ಪಾತ್ರರಾಗಿದ್ದಾರೆ. ಇನ್ನು ಜೀವಮಾನದ ಸಾಧನೆ ಪ್ರಶಸ್ತಿ 50 ಸಾವಿರ ರೂ.ಗಳನ್ನು ಒಳಗೊಂಡಿದೆ.
ಇನ್ನು ಧಮೇರ್ಂದ್ರ ಅರಸು (ಬೆಂಗಳೂರು), ಗಣೇಶ್ ಶೆಣೈ(ಬೆಂಗಳೂರು). ಚಿಕ್ಕಹನುಮಂತಯ್ಯ (ತುಮಕೂರು), ಗ್ಯಾರಂಟಿ ರಾಮಣ್ಣ (ಹಾಸನ), (ಬೆಂಗಳೂರು), ಉಮೇಶ್ ಎಂ.ಸಾಲಿಯಾನ್ (ಕಾಸರಗೋಡು), ವೆಂಕಟೇಶ್ ಮೂರ್ತಿ (ಚಿಕ್ಕನಾಯಕನಹಳ್ಳಿ), ಜಯಕುಮಾರ್ ಕೊಡಗನೂರು (ದಾವಣಗೆರೆ), ಮಾ.ಬ.ಸೋಮಣ್ಣ (ಬಳ್ಳಾರಿ), ವಿಜಯಕುಮಾರ್ ಜತೂರಿ (ಗದಗ) ನಾಗಪ್ಪ ಬಳೆ (ರಾಯಚೂರು), ಪ್ರಭಾಕರ ಕುಲಕರ್ಣಿ (ಬಾಗಲಕೋಟೆ), ಗುರುಬಸಪ್ಪ ಕಲ್ಲಪ್ಪ ಸಜ್ಜನ್ (ವಿಜಯಪುರ), ಗೀತಾ ಸುರತ್ಕಲ್ (ಮಂಗಳೂರು), ಲಕ್ಷ್ಮೀಪತಿ ಕೋಲಾರ (ಕೋಲಾರ), ಸಣ್ಣಪ್ಪ ಕೊಡಗಳ್ಳಿ (ಮಂಡ್ಯ), ರಾಜ್ ಗೋಪಾಲ ಶೇಟ್ (ಉಡುಪಿ), ಎಸ್.ತಿಪ್ಪೇಸ್ವಾಮಿ (ಚಳ್ಳಕೆರೆ), ಕೊಟ್ರಪ್ಪ ಚನ್ನಪ್ಪ ಕೊಟ್ರಪ್ಪನವರ್ (ಹಾವೇರಿ), ಬಸವರಾಜ ಬಸವಣ್ಣೆಪ್ಪ ಕಡ್ಲೆಣ್ಣವರ (ಧಾರವಾಡ), ಎನ್.ಮಂಜಮ್ಮ, ಗುಬ್ಬಿ (ಗದಗ), ಅರುಣ್ ಸಾಗರ್ (ಬೆಂಗಳೂರು), ಎಚ್.ಎಸ್.ಪ್ರಸನ್ನ (ಸಾಗರ), ಈಶ್ವರಪ್ಪ ಫರ್ಹಾತಾಬಾದ್ (ಕಲಬುರ್ಗಿ), ವೆಂಕಟೇಶ್ (ಪ್ರಭಾತ್ ಕಲಾವಿದರು) ಇವರು ವಾರ್ಷಿಕ ರಂಗ ಪ್ರಶಸ್ತಿ ಪುರಸ್ಕೃರಾರಕ್ಕೆ ಪಾತ್ರರಾಗಿದ್ದಾರೆ