ತನ್ನ ಜೀವನದಲ್ಲಿ ನಡೆದ ಕೆಲವು ಆಕಸ್ಮಿಕ ಘಟನೆಗಳಿಂದ ವಿವಾಹವಾಗದೆ ಉಳಿದಿದ್ದಾರೆ ನಟಿ ಸಿತಾರ ?

0
553

ಚಂದನವನದಲ್ಲಿ ಸಿತಾರ ಅವರನ್ನು ಎಂದಿಗೂ ಮರೆಯಲು ಸಾಧ್ಯವಿಲ್ಲ. ಸಾಹಸ ಸಿಂಹ ಡಾಕ್ಟರ್ ವಿಷ್ಣುವರ್ಧನ್ ಅವರ `ಹಾಲುಂಡ ತವರು’ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪ್ರವೇಶ ಮಾಡಿದ ಅವರು, ಕನ್ನಡಿಗರ ಜನ ಮನ ಗೆದ್ದಿದ್ದಾರೆ. ಮತ್ತು ಚಂದನವನದ ಸ್ಟಾರ್ ನಟರ ಜೊತೆ ಅಭಿನಯಿಸಿ ಜನಪ್ರಿಯತೆಯ ಉತ್ತಂಗದಲ್ಲಿದ್ದರು. ಮೂಲತಃ ಕೇರಳದವರಾದ ಸಿತಾರ, ಕುಟುಂಬದ ಹಿರಿಯ ಮಗಳಾಗಿದ್ದಾರೆ. ಜೂನ್ 30, 1973 ರಂದು ಕೇರಳಾದ ಕಿಲಿಮನೂರಿನಲ್ಲಿ ಪರಮೇಶ್ವರನ್ ನಾಯರ್ ಮತ್ತು ವಲ್ಸಲಾ ನಾಯರ್ ದಂಪತಿಗಳಿಗೆ ಹಿರಿಯ ಮಗಳಾಗಿ ಜನಿಸಿದರು.

 

ತಂದೆ ವಿದ್ಯುತ್ ಮಂಡಳಿಯಲ್ಲಿ ಇಂಜಿನಿಯರ್ ಆಗಿದ್ದರೆ, ತಾಯಿಯೂ ಕೂಡ ವಿದ್ಯುತ್ ಮಂಡಳಿಯಲ್ಲಿ ಅಧಿಕಾರಿಯಾಗಿ ಉದ್ಯೋಗ ಮಾಡುತ್ತಿದ್ದರು. ಸಿತಾರ ಅವರಿಗೆ ಪ್ರತೀಶ್ ಮತ್ತು ಅಭಿಲಾಶ್ ಎಂಬುವ ಇಬ್ಬರು ಕಿರಿಯ ತಮ್ಮಂದಿರು ಇದ್ದಾರೆ. ಸಿತಾರ ಅವರು ತಿರುವನಂತಪುರದ ವಟ್ಟಪ್ಪರಾದ ಲೌಡ್ರ್ಸ್ ಮೌಂಟ್ ಶಾಲೆಯಲ್ಲಿ ಅಧ್ಯಯನ ಮಾಡಿದ್ದಾರೆ. ಕಿಲಮನೂರ್ ನ ಶ್ರೀ ಶಂಕರ ವಿದ್ಯಾಪೀಠ ಕಾಲೇಜಿನಲ್ಲಿ ಪೂರ್ವ ವಿಶ್ವವಿದ್ಯಾಲಯ ಪದವಿಯನ್ನು ಮಾಡುವಾಗ ರಾಜೀವ್‍ನಾಥ್ ಅವರು ನಿರ್ದೇಶನದ, ಕಾವೇರಿ(1886) ಎಂಬುವ ಮಲಯಾಳಂ ಚಿತ್ರದಲ್ಲಿ ಸಣ್ಣ ಪಾತ್ರದಲ್ಲಿ ಕಾಣಿಸಿಕೊಂಡರು.

 

ಮಲಯಾಳಂ, ತಮಿಳು, ತೆಲುಗು, ಕನ್ನಡ ಚಿತ್ರಗಳಲ್ಲಿ ಅಭಿನಯಿಸಿ ಖ್ಯಾತಿ ಪಡೆದುಕೊಂಡಿರುವ ಸಿತಾರ 1989 ರಲ್ಲಿ ಕೆ. ಬಾಲಚಂದರ್ ಅವರ ಪುದು ಪುದು ಅರ್ಥಂಗಳ್ ಎಂಬ ತಮಿಳು ಚಿತ್ರದ ಮೂಲಕ ಪರಿಪೂರ್ಣ ನಾಯಕಿಯಾಗಿ ತಮ್ಮ ವೃತ್ತಿ ಜೀವನವನ್ನು ಪ್ರಾರಂಭಿಸಿದರು. ತೊಂಬತ್ತರ ದಶಕದಲ್ಲಿ ದಕ್ಷಿಣ ಭಾರತದ ಪ್ರಮುಖ ನಾಯಕಿಯರಲ್ಲಿ ಒಬ್ಬರಾಗಿ ಹೆಸರು ಮಾಡಿ, ಅಪಾರ ಕೀರ್ತಿಯನ್ನು ಗಳಿಸಿದ ನಂತರವೂ ಒಬ್ಬಂಟಿಯಾಗಿಯೇ ಉಳಿದ್ದಿದ್ದಾರೆ.

 

ಸಿತಾರ ಅವರಿಗೆ ಈಗ 46 ವರ್ಷ ವಯಸ್ಸಾಗಿದೆ. ಆದರೆ ಇನ್ನೂ ಮದುವೆಯಾಗಿಲ್ಲ. 2010 ರಲ್ಲಿ ಇವರಿಗೆ ವಿವಾಹವಾಗಿದೆ ಎಂಬುವ ವಂದಂತಿಗಳು ಎಲ್ಲೆಡೆ ಹರಡಿತ್ತು. ಹಾಗಾಗಿ ಪ್ರೇಕ್ಷಕರು ಸೇರಿದಂತೆ ಸಿನಿಮಾರಂಗದವರೆಲ್ಲಾ ಸಿತಾರ ಅವರಿಗೆ ಮದುವೆಯಾಗಿದೆ ಎಂದೇ ಅಂದುಕೊಂಡಿದ್ದರು. ಆದರೆ ಕಳೆದ ವರ್ಷ ಒಂದು ಸಂದರ್ಶನದಲ್ಲಿ ತನಗೆ ಮದುವೆಯಾಗಿಲ್ಲ ಎಂಬ ಸುದ್ದಿಯನ್ನು ಹೊರಗೆ ಹಾಕಿ ಎಲ್ಲರಿಗೂ ಬಿಗ್ ಶಾಕ್ ನೀಡಿದ್ದರು.

 

46 ವರ್ಷಗಳಾದರೂ ಸಿತಾರ ಅವರು ಮದುವೆಯಾಗದೆ ಉಳಿಯಲು ನಾನಾ ಕಾರಣಗಳಿವೆ..
ಕನ್ನಡದ ನಟ ಮುರಳಿ ಮತ್ತು ಸಿತಾರಾ ಅವರು ಬಹಳ ಆತ್ಮೀಯ ಸ್ನೇಹಿತರಾಗಿದ್ದರು. ಆದರೆ ಇದ್ದಕ್ಕಿದ್ದಂತೆ ಮುರಳಿ ಅವರು ನಿಧನರಾಗುತ್ತಾರೆ. ಅವರ ಸಾವಿನ ಬಳಿಕ ಸಿತಾರಾ ಅವರು ಸುಮಾರು ವರ್ಷಗಳ ತನಕ ಖಿನ್ನತೆಗೆ ಒಳಗಾಗುತ್ತಾರೆ. ಇದರಿಂದ ಹೊರಬರಲು ಬಹಳ ಸಮಯ ತೆಗೆದುಕೊಂಡ ಸಿತಾರ ನಂತರ ಸುಧಾರಿಸಿಕೊಳ್ಳುತ್ತಾರೆ.

 

ಆದರೆ ಮತ್ತೊಂದು ಆಘಾತವಾದ ಸುದ್ದಿ ಅವರಿಗೆ ಕಾದಿತ್ತು. ಅದೇ ತನ್ನ ತಂದೆಯ ಸಾವು ! ಮುರುಳಿಯವರ ನಿಧನದ ಬಳಿಕ ಹೊರಬರಲು ಬಹಳ ಕಷ್ಟ ಪಟ್ಟಿದ್ದ ಸಿತಾರ ತನ್ನ ತಂದೆಯ ಸಾವನ್ನು ನೋಡಿ ಚೇತರಿಸಿಕೊಳ್ಳಲಾಗದ ಸ್ಥಿತಿಗೆ ಹೋಗಿಬಿಡುತ್ತಾರೆ.! ನನ್ನನ್ನು ಇಷ್ಟಪಟ್ಟವರು ನನ್ನ ಬಳಿ ಇಲ್ಲವಲ್ಲ.. ಜೀವನ ಅಂದರೆ ಇಷ್ಟೇನಾ? ಎನ್ನುವ ಭಾವನೆ ಅವರ ಮನಸ್ಸಿನಲ್ಲಿ ಮೂಡಿತ್ತಂತೆ. ನಂತರ ಮದುವೆಯಾಗುವುದರ ಬಗ್ಗೆ ಯೋಚಿಸಲೇ ಇಲ್ಲವಂತೆ.. ಕೆಲವೊಂದು ಘಟನೆಗಳು ಮನಸ್ಸಿನ ಮೇಲೆ ಹೆಚ್ಚು ಪ್ರಭಾವ ಬೀರಿದಾಗ ನಮ್ಮ ಭಾವನೆಗಳನ್ನು ಕಿತ್ತುಕೊಳ್ಳುತ್ತದೆ ಎಂಬುದಕ್ಕೆ ಸಾಕ್ಷಿ ನಟಿ ಸಿತಾರ.

LEAVE A REPLY

Please enter your comment!
Please enter your name here