ಕನ್ನಡ ಭಾಷೆ ಬಿಟ್ಟು ಹೋಗುವುದಿಲ್ಲ ಅವಕಾಶ ಸಿಕ್ಕರೆ ನಟಿಸುತ್ತೇನೆ : ಶೃತಿ ಹರಿಹರನ್ !

0
297

ಕಡಿಮೆ ಅವಧಿಯಲ್ಲಿ ದೊಡ್ಡ ಮಟ್ಟದ ಹೆಸರು ಮಾಡಿದ ನಟಿಯರ ಪೈಕಿ ಶೃತಿ ಹರಿಹರನ್ ಕೂಡ ಒಬ್ಬರು. ಕನ್ನಡದಲ್ಲಿ ಲೂಸಿಯಾ ಚಿತ್ರದ ಮುಖಾಂತರ ತಮ್ಮ ಸಿನಿ ಪಯಣವನ್ನು ಪ್ರಾರಂಭಿಸಿದ ಶ್ರುತಿ ಹರಿಹರನ್ ಅನೇಕ ಚಿತ್ರಗಳಲ್ಲಿ ವಿಭಿನ್ನ ಹಾಗೂ ವಿಶಿಷ್ಟ ಪಾತ್ರಗಳನ್ನು ನಿರ್ವಹಿಸಿ ಅನೇಕ ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿದ್ದಾರೆ. ಕನ್ನಡದಲ್ಲಿ ಆಲ್ಮೋಸ್ಟ್ ಎಲ್ಲಾ ದೊಡ್ಡ ಸ್ಟಾರ್ ನಟರ ಜೊತೆ ಅಭಿನಯಿಸಿರುವ ಶೃತಿ, ಒಂದೊಂದು ಸಿನಿಮಾದಲ್ಲೂ ಒಂದೊಂದು ರೀತಿಯ ಅಭಿನಯವನ್ನು ಮಾಡಿ ಉತ್ತಮ ಪ್ರಶಂಸೆಯನ್ನು ಗಿಟ್ಟಿಸಿಕೊಂಡಿದ್ದಾರೆ.

 

 

ಹೀಗೆ ಸಾಲು ಸಾಲು ಹಿಟ್ ಸಿನಿಮಾಗಳನ್ನು ನೀಡುತ್ತಾ ಕನ್ನಡ ಚಿತ್ರರಂಗದಲ್ಲಿ ತನ್ನದೇ ಆದ ಛಾಪು ಮೂಡಿಸಿಕೊಂಡಿದ್ದ ಅವರುನ್ನು ನೋಡಿ ಅನೇಕ ಸಿನಿ ತಜ್ಞರು ಅವರು ಇನ್ನು ಎರಡು ವರ್ಷದಲ್ಲಿ ಕನ್ನಡ ಚಿತ್ರರಂಗದ ಟಾಪ್ ನಟಿಯಾಗಿ ಬೆಳೆಯುತ್ತಾರೆ ಎಂದು ಲೆಕ್ಕಾಚಾರ ಹಾಕಿದ್ದರು. ಕಾರಣ ಅವರಿಗೆ ಯಾವ ಪಾತ್ರ ಕೊಟ್ಟರೂ ಆ ಪಾತ್ರಕ್ಕೆ ಜೀವ ತುಂಬಿ,ನ್ಯಾಯ ಒದಗಿಸಿಕೊಡುತ್ತಾರೆ. ಹೀಗೆ ಬೆಳೆಯುವ ಸಮಯದಲ್ಲಿ ದೊಡ್ಡ ವಿವಾದವೊಂದನ್ನು ಮಾಡಿಕೊಂಡರು.. ಅದೇ ಮೀಟೂ ಪ್ರಕರಣ.. ಸದ್ಯ ಈ ವಿವಾಧಗಳೆಲ್ಲಾ ಮುಗುದು ವರುಷಗಳು ಉರುಳಿದೆ.. ಇದೀಗ ಮತ್ತೆ ಅಭಿನಯಿಸುವ ಆಸೆ ಹೊಂದಿದ್ದೇನೆ ಎಂದು ಹೇಳಿಕೊಂಡಿದ್ದಾರೆ.

 

 

ಹೌದು ಇತ್ತಿಚೆಗಷ್ಟೇ ದಕ್ಷಿಣ ಭಾರತೀಯ ಚಿತ್ರಗಳಿಗೆ ನೀಡಲಾಗುವ ಫಿಲ್ಮ್ ಫೇರ್ ಪ್ರಶಸ್ತಿ ಘೋಷಣೆಯಾಗಿತ್ತು. ಇದರಲ್ಕಿ ‘ಕೆ.ಜಿ.ಎಫ್’ ಚಿತ್ರವು ಕನ್ನಡದ ಅತ್ಯುತ್ತಮ ಚಿತ್ರ ಪ್ರಶಸ್ತಿಗೆ ಭಾಜನವಾಗಿದರು. ಹಾಗೆಯೇ ‘ನಾತಿಚರಾಮಿ’ ಚಿತ್ರದ ಅಭಿನಯಕ್ಕಾಗಿ ವಿಮರ್ಶಕರ ಅತ್ಯುತ್ತಮ ನಟಿ ಪ್ರಶಸ್ತಿಯನ್ನು ಶೃತಿ ಹರಿಹರನ್ ಮುಡಿಗೇರಿಸಿಕೊಂಡಿದ್ದರು.

 

‘ನಾತಿ ಚರಾಮಿ’ ಬಹಳ ಒಳ್ಳೆಯ ಸಿನಿಮಾಗಳಲ್ಲಿ ಒಂದು ಸಿನಿಮಾ. ಅವಾರ್ಡ್ ಗಳು ಬರುವುದರಿಂದ ಜವಾಬ್ದಾರಿ ಹೆಚ್ಚಾಗುತ್ತದೆ ಎಂದರೆ ಖಂಡಿತಾ ಅದು ನಿಜಾನೇ.. ಇದೇ ತರಹದ ಸಿನಿಮಾಗಳಲ್ಲಿ ನಟಿಸಬೇಕೆಂಬ ಆಸೆಯಿದೆ. ‘ತಾರಕ್’ನಂತಹ ಕಮರ್ಷಿಯಲ್ ಸಿನಿಮಾದಲ್ಲೂ ನಟಿಸಿದ್ದೀನಿ’ ಎಂದರು.

 

 

ಸದ್ಯಕ್ಕೆ ಯಾವುದೇ ಅವಕಾಶಗಳು ಬರುತ್ತಿಲ್ಲ. ನನ್ನ ಪಾತ್ರ ಮತ್ತು ಕಥೆ ಚೆನ್ನಾಗಿದ್ದರೆ ನಟಿಸ್ತೀನಿ. ಹಾಗಂತಾ ಕನ್ನಡ ಭಾಷೆ ಬಿಟ್ಟು ಹೋಗುವುದಿಲ್ಲ. ‘ನಾತಿಚರಾಮಿ’ ಮತ್ತು ‘ಗೋಧಿ ಬಣ್ಣ ಸಾಧಾರಣ ಮೈಕಟ್ಟು’ ಚಿತ್ರಗಳು ನನ್ನಲ್ಲಿನ ಪ್ರತಿಭೆಯನ್ನು ತೋರಿಸಿವೆ’ ಎಂದು ಶೃತಿ ಖುಷಿಯನ್ನು ಹಂಚಿಕೊಂಡರು.

LEAVE A REPLY

Please enter your comment!
Please enter your name here