ಕೊಡಗಿನ ಬೆಡಗಿ ನಟಿ ರಶ್ಮಿಕಾ ಮಂದಣ್ಣ ನಟಿ ಸೌಂದರ್ಯರನ್ನು ನೆನಪಿಸಿಕೊಂಡಿದ್ದೇಕೆ ಗೊತ್ತಾ ?

0
194

ಕನ್ನಡದಲ್ಲಿ ಸ್ಟಾರ್‌ ನಟಿಯಾಗಿದ್ದ ಈ ಚೆಲುವೆ ಈಗ ತೆಲುಗಿನಲ್ಲಿ ಟಾಪ್‌ ಮೋಸ್ಟ್‌ ನಟಿ. ಹೌದು ಬ್ಯಾಕ್ ಟು ಬ್ಯಾಕ್ ಸಿನಿಮಾಗಳಲ್ಲಿ ಬ್ಯುಸಿಯಿರುವ ರಶ್ಮಿಕಾ ಸ್ಟಾರ್ ನಟರ ಜೊತೆ ತೆರೆಹಂಚಿಕೊಳ್ಳುತ್ತಿದ್ದಾರೆ. ಸದ್ಯ ಟಾಲಿವುಡ್ ನ ಸ್ಟಾರ್ ನಟ ಪ್ರಿನ್ಸ್ ಮಹೇಶ್ ಬಾಬು ಸಿನಿಮಾದಲ್ಲಿ ಕಾಣಿಸಿಕೊಂಡಿರುವ ರಶ್ಮಿಕಾ ರಿಲೀಸ್ ಗಾಗಿ ಕಾಯುತ್ತಿದ್ದಾರೆ.

 

 

ಈ ಮಧ್ಯೆ ನಟಿ ರಶ್ಮಿಕಾಗೆ ದಕ್ಷಿಣ ಭಾರತೀಯ ಚಿತ್ರರಂಗದ ಖ್ಯಾತ ನಟಿಯ ಬಯೋಪಿಕ್ ಮಾಡುವ ಆಸೆ ವ್ಯಕ್ತಪಡಿಸಿದ್ದಾರೆ. ನಮ್ಮ ಕನ್ನಡ ನಟಿ ರಶ್ಮಿಕಾಗೆ ನಟಿ ಸೌಂದರ್ಯ ಬಯೋಪಿಕ್ ನಲ್ಲಿ ಕಾಣಿಸಿಕೊಳ್ಳುವ ಆಸೆಯಂತೆ. ಇದನ್ನು ಸ್ವತಃ ರಶ್ಮಿಕಾ ಅವರೇ ಹೇಳಿಕೊಂಡಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಯಾರಾದರು ಯಾವುದೇ ಪ್ರಶ್ನೆಗಳನ್ನು ಕೇಳಬಹುದು ಎಂದು ಹೇಳಿದ್ದರು. ಅಭಿಮಾನಿಗಳು ಸಾಕಷ್ಟು ಪ್ರಶ್ನೆಗಳನ್ನು ಕೇಳಿದ್ದರು.

 

 

ಸದ್ಯ ಈಗಾಗಲೇ ಸಾಕಷ್ಟು ಸ್ಟಾರ್ ನಟಿಯರ ಬಯೋಪಿಕ್ ಬಂದಿವೆ. ಆದರೆ ಇನ್ನು ಸೌಂದರ್ಯ ಬಗ್ಗೆ ಬಯೋಪಿಕ್ ತಯಾರಾಗಿಲ್ಲ. ಆದರೆ ಸೌಂದರ್ಯ ಆಗಿ ಕಾಣಿಸಿಕೊಳ್ಳುವ ಆಸೆ ವ್ಯಕ್ತಪಡಿಸಿದ್ದಾರೆ ಕೊಡಗಿನ ಬೆಡಗಿ ರಶ್ಮಿಕಾ ಮಂದಣ್ಣ. ಎಲ್ಲರೂ ರಶ್ಮಿಕಾರವರನ್ನು ನೀನು ಸೌಂದರ್ಯ ಹಾಗೆ ಕಾಣಿಸುತ್ತೀಯಾ ಎಂದು ಹೇಳುತ್ತಾರೆ” ಎಂದು ಹೇಳಿದ್ದಾರೆ. ಈಗಾಗಲೆ ಸಾಕಷ್ಟು ಸ್ಟಾರ್ ನಟಿಯರ ಬಯೋಪಿಕ್ ಬಂದಿವೆ. ಆದರೆ ಇನ್ನು ಸೌಂದರ್ಯ ಬಗ್ಗೆ ಬಯೋಪಿಕ್ ತಯಾರಾಗಿಲ್ಲ.

 

 

ಅಲ್ಲದೆ ಸೌಂದರ್ಯ ಬಯೋಪಿಕ್ ಮಾಡುವ ಬಗ್ಗೆಯು ಯಾವ ನಿರ್ದೇಶಕರು ಚರ್ಚೆ ನಡೆಸಿದ ಹಾಗಿಲ್ಲ. ಒಂದು ವೇಳೆ ಸೌಂದರ್ಯ ಅವರ ಬಯೋಪಿಕ್ ಸೆಟ್ಟೇರಿದರೆ ರಶ್ಮಿಕಾ ಆಯ್ಕೆ ಮೊದಲಾಗಿದ್ದರು ಅಚ್ಚರಿ ಇಲ್ಲ ಎಂಬುದು ಈಗ ಕೇಳಿ ಬರುತ್ತಿರುವ ವಿಚಾರ.

LEAVE A REPLY

Please enter your comment!
Please enter your name here