ನಟಿ ಪ್ರಿಯಾಂಕಾ ಚೋಪ್ರಾ ಖರೀದಿ ಮಾಡಿದ ಬಂಗಲೆ ಬೆಲೆ ಕೇಳಿದರೆ.! ನೀವು ಶಾಕ್ ಆಗ್ತೀರಾ..!!

0
94

ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ ಹಾಗೂ ಅವರ ಪತಿ ನಿಕ್ ಜೋನಸ್ ಲಾಸ್ ಏಜ್‍ಂಲಿಸ್‍ನಲ್ಲಿ ಒಂದು ಐಷರಾಮಿ ಬಂಗಲೆಯನ್ನು ಖರೀದಿ ಮಾಡಿದ್ದಾರೆ ಎನ್ನಲಾಗಿದೆ. ಕಳೆದ ವರ್ಷ ಡಿಸೆಂಬರ್ ತಿಂಗಳಲ್ಲಿ ಮದುವೆಯಾದ ಜೋಡಿ ಹೆಚ್ಚು ಸಮಯವನ್ನು ವಿದೇಶದಲ್ಲಿ ಕಳೆಯುವ ಮೂಲಕ ಎಲ್ಲ ಅಭಿಮಾನಿಗಳಲ್ಲಿ ಸಾಕಷ್ಟು ಕೂತೂಹಲ ಮೂಡಿಸಿದ್ದಾರೆ. ಕಳೆದ ತಿಂಗಳು ತಮ್ಮ ಪತಿ ನಿಕ್ ಜೊತೆ ಲಾಸ್ ಏಜಂಲಿಸ್‍ನಲ್ಲಿ ತೆಗೆದಿರುವ ಫೋಟೊಗಳನ್ನು ತಮ್ಮ ಸಾಮಾಜಿಕ ಜಾಣತಾಣಗಳಲ್ಲಿ ಪೋಸ್ಟ್ ಮಾಡಿದ್ದರು. ಇದನ್ನು ಗಮನಿಸಿದ ಅವರ ಅಭಿಮಾನಿಗಳು ಅವರ ಫೋಟೊಗೆ ಲೈಕ್‍ಗಳ ಸುರಿಮಳೆ ನೀಡಿ, ಹಲವು ಕಾಮೆಂಟ್ ಹರಿಸಿದ್ದರು.
ಪ್ರಿಯಾಂಕ ಚೋಪ್ರಾ ಮತ್ತು ನಿಕ್ ಅವರು ತಮ್ಮ ಅಭಿಮಾನಿಗಳಿಗೆ ಮತ್ತೊಂದು ಆಶ್ಚರ್ಯ ಸುದ್ದಿಯೊಂದ್ದನ್ನು ನೀಡಿದ್ದಾರೆ. ಲಾಸ್ ಏಜಂಲಿಸ್‍ನ ಬೆವರ್ಲಿ ಹಿಲ್ಸ್/ ಬೆಲ್ ಏರ್‍ನಲ್ಲಿ ಹೊಸದಾಗಿ ಒಂದು ಬಂಗಲೆಯನ್ನು ಖರೀದಿ ಮಾಡಿದ್ದಾರೆ, ಬಂಗಲೆಯ ಬೆಲೆ ಬರೋಬ್ಬರಿ 141.87 ಕೋಟಿ ರೂ. ಎಂದು ಮೂಲಗಳು ತಿಳಿಸಿವೆ. ತಮ್ಮ ಪತಿ ಹಿಂದೆ ಖರೀದಿ ಮಾಡಿದ್ದ ಬಂಗಲೆಯ ಮೊತ್ತವನ್ನು ಮೀರಿಸಿ ಬೃಹತ್ ಐಷರಾಮಿ ಬಂಗಲೆಯನ್ನು ಪರ್ಚೆಸ್ ಮಾಡಿದ್ದಾರೆ ನಟಿ ಪ್ರಿಯಾಂಕಾ ಚೋಪ್ರಾ.

LEAVE A REPLY

Please enter your comment!
Please enter your name here