ನಟಿ ದೀಪಿಕಾ ಪಡುಕೋಣೆ ದೇಶ ದ್ರೋಹಿನಾ.?

0
238

ಬಾಲಿವುಡ್ ಬೆಡಗಿ, ಬ್ರಾಂಡ್ ವಸ್ತುಗಳ ರೂವಾರಿ ನಟಿ ದೀಪಿಕಾ ಪಡುಕೋಣೆ ಯಾರಿಗೆ ಗೊತ್ತಿಲ್ಲ ಹೇಳಿ.? ಬಾಲಿವುಡ್ ನಲ್ಲಿ ತಮ್ಮ ನಟನೇ ಮೂಲಕ ಇಡಿ ಭಾರತ ಚಿತ್ರರಂಗದಲ್ಲಿ ಉತ್ತಮ ಹೆಸರು ಪಡೆದುಕೊಂಡಿರುವ ಅದ್ಭುತ ನಟಿ ಎಂದೇ ಹೇಳಬಹುದು. ದೀಪಿಕಾ ಪಡುಕೋಣೆ ಆಯ್ದುಕೊಳ್ಳುವ ಪ್ರತಿಯೊಂದು ಪಾತ್ರ ಕೂಡ ಬಹಳ ಸೂಕ್ಷ್ಮವಾದದ್ದು, ಯಾವ ಪಾತ್ರ ಕೊಟ್ಟರು ಆ ಪಾತ್ರಕ್ಕೆ ಅನುಗುಣವಾಗಿ ನಟಿಸಿ ಅದಕ್ಕೇ ನ್ಯಾಯ ಒದಗಿಸುವಂತ ನಟಿ. ಇತ್ತೀಚಿಗೆ ದೀಪಿಕಾ ಪಡುಕೋಣೆ ಅವರು ಇಡಿ ಭಾರತ ದೇಶದ ಜನಸಾಮಾನ್ಯರ ಕೆಂಗಣ್ಣಿಗೆ ಗುರಿಯಾಗಿದ್ದರು.!

 

 

ಹೌದು, ನಟಿ ದೀಪಿಕಾ ತೆಗುದುಕೊಂಡ ಒಂದೇ ಒಂದು ನಿರ್ಧಾರ ಅವರನ್ನು ದೇಶ ದ್ರೋಹಿ ಎಂಬ ಪಟ್ಟವನ್ನು ಅಲಂಕರಿಸುವ ಹಾಗೆ ಮಾಡಿದೆ. ಕಳೆದ ಮಂಗಳವಾರ ಅವರು ಜೆಎನ್‍ಯು ದೆಹಲಿ ವಿಶ್ವವಿದ್ಯಾಲಯದಲ್ಲಿ ನಡೆಯುತ್ತಿದ್ದ ವಿದ್ಯಾರ್ಥಿಗಳ ಪ್ರತಿಭಟನೆಗೆ ಹಾಗೂ ಅವರ ಮೇಲೆ ನಡೆಯುತ್ತಿದ್ದ ಕ್ರೂರ ದಾಳಿಯನ್ನು ಖಂಡಿಸಿ, ಜೆಎನ್‍ಯು ವಿದ್ಯಾರ್ಥಿಗಳ ಬೆಂಬಲಕ್ಕೆ ನಿಂತು ಅವರ ಹೋರಾಟಕ್ಕೆ ತಾವು ಕೂಡ ಕೈಜೋಡಿಸಿ ಪ್ರತಿಭಟಿಸಿದರು. ತಮ್ಮ ಬಹು ನಿರೀಕ್ಷಿತ ನೈಜ ಘಟನೆ ಆಧಾರಿತ ಸಿನಿಮಾ ಚಪಾಕ್ ಪ್ರಚಾರಗಳಲ್ಲಿ ನಿರತರಾಗಿದ್ದ ದೀಪಿಕಾ ಪಡುಕೋಣೆ ಬಿಡುವು ಮಾಡಿಕೊಂಡು ಜೆಎನ್‍ಯು ವಿಧ್ಯಾರ್ಥಿಗಳಿಗೆ ಎದುರಾದ ದಾಳಿಯ ವಿರುದ್ಧ ಒಗಟ್ಟನ್ನು ವ್ಯಕ್ತಪಡಿಸಿದರು.

 

ಈ ರೀತಿ ನಡೆಯುತ್ತಿರುವುದು ನನಗೆ ಬಹಳ ಕೋಪ ತಂದಿದೆ. ಅದೇ ಸಮಯದಲ್ಲಿ ಯಾವುದೇ ರೀತಿಯ ಕ್ರಮ ಕೈಗೊಳ್ಳದಿರುವುದು ಕಳವಳಕಾರಿ ಸಂಗತಿಯಾಗಿದೆ ಎಂದು ನಟಿ ದೀಪಿಕಾ ಸ್ಥಳೀಯ ಪತ್ರಿಕೆಯ ಸಂದರ್ಶನಕ್ಕೆ ಪ್ರತಿಕ್ರಿಯೆ ನೀಡುತ್ತಾರೆ. ನಟಿ ದೀಪಿಕಾ ಅವರು ತೆಗದುಕೊಂಡ ನಿಲುವು ಸಾಕಷ್ಟು ಜನಕ್ಕೆ ಅಸಮಾಧಾನ ಉಂಟುಮಾಡಿತು. ಇದರಿಂದ ಆನೇಕ ನೆಟ್ಟಿಗರು ದೀಪಿಕಾ ಅವರ ಚಪಾಕ್ ಸಿನಿಮಾವನ್ನು ಭಾರತದ ಯಾವ ಮೂಲೆಯಲ್ಲೂ ಬಿಡುಗಡೆ ಮಾಡಲು ಅನುಮತಿ ನೀಡಬಾರದು.! ಅವರ ಸಿನಿಮಾಗೆ ಯಾವ ರೀತಿಯ ಬೆಂಬಲ ಸಿಗಬಾರದು, ಯಾರು ಕೂಡ ಇಂಥ ದೇಶ ದ್ರೋಹಿ ಸಿನಿಮಾವನ್ನು ಬೆಂಬಲಿಸಬಾರದು ಮತ್ತು ದೇಶದಲ್ಲಿ ಚಪಾಕ್ ಬಿಡುಗಡೆಗೊಳ್ಳಬಾರದು ಎಂದು ಸಾಮಾಜಿಕ ಜಾಲತಾಣಗಳಲ್ಲಿ ತೀವ್ರವಾಗಿ ಹ್ಯಾಶ್ ಟ್ಯಾಗ್ ಬಳಸಿ ಖಂಡಿಸಿ ಪ್ರತಿಭಟನೆ ಮಾಡುತ್ತಾರೆ.

 

 

ಹಲವು ಹಿರಿಯ ಪತ್ರಕರ್ತರು ದೀಪಿಕಾ ಅವರ ಒಂದು ದಿಟ್ಟ ಹೆಜ್ಜೆಯನ್ನು ಗಮನಿಸಿ ಟ್ವೀಟ್ ಮುಖಾಂತರ ತಿಳಿಸಿದ್ದಾರೆ. ದೀಪಿಕಾ ಅವರು ತಮ್ಮ ಬಹುನಿರೀಕ್ಷಿತ ಚಪಾಕ್ ಸಿನಿಮಾ ಇನ್ನೇನು ಎರಡು ದಿನಗಳಲ್ಲಿ ಬಿಡುಗಡೆಯಾಗುವ ತುತ್ತ ತುದಿಯಲ್ಲಿ ಇತ್ತು, ಇಂಥ ಒಂದು ಸಮಯದಲ್ಲಿ ಈ ಒಂದು ನಿರ್ಧಾರ ತೆಗೆದುಕೊಂಡ ದೀಪಿಕಾ ಅವರ ದೈರ್ಯವನ್ನು ಮೆಚ್ಚಬೇಕು ಎಂದು ಹೇಳಿದ್ದಾರೆ. ಇನ್ನು ಕೆಲವರು ದೀಪಿಕಾ ಅವರು ಇಲ್ಲಿಯವರೆಗೂ ಯಾವ ಒಂದು ರಾಜಕೀಯವಾಗಿ ನಿರ್ಧಾರ ತೆಗೆದುಕೊಂಡಿಲ್ಲ ಮತ್ತು ರಾಜಕೀಯ ವಿಷಯಗಳ ಬಗ್ಗೆ ಹೆಚ್ಚಾಗಿ ಮೌನವಾಗಿರುವ ದೀಪಿಕಾ ಅವರಿಂದ ಈ ರೀತಿಯ ಒಂದು ನಿಲುವು ಬಂದಿರುವುದು ಅಶ್ಚರ್ಯ ಚಕಿತವಾಗಿದೆ ಎಂದು ಹೇಳಿದ್ದಾರೆ.

 

 

ಈ ಕುರಿತು ಆನೇಕರು ದೀಪಿಕಾ ಅವರ ಸಿನಿಮಾವನ್ನು ನೋಡಬಾರದು ಅವರ ಸಿನಿಮಾ ಬ್ಯಾನ್ ಆಗಬೇಕು ಎಂದು ತೀವ್ರ ಪ್ರತಿಭಟನೆಯನ್ನು ಮಾಡಿದರು. ದೀಪಿಕಾ ಪಡುಕೋಣೆ ಅವರ ವಿರುದ್ದ ಜನಸಾಮಾನ್ಯರು ಉಗ್ರವಾಗಿ ಖಂಡಿಸಲು ಆಸಲಿ ಕಾರಣವೇನು.? ಇದಕ್ಕಿಂತ ಹೆಚ್ಚಾಗಿ ಅವರ ಸಿನಿಮಾ ಈಗಾಗಲೇ ದೇಶಾದ್ಯಂತ ಬಿಡುಗಡೆಗೊಂಡಿದೆ. ಆದರೆ ಅವರ ಸಿನಿಮಾವನ್ನು ಬಿಡುಗಡೆ ಮಾಡಬಾರದು ಎಂದು ನಟ್ಟಿಗರು ಹೇಳಿದಾದ್ದರು ಯಾಕೆ ಎಂಬುದರ ಬಗ್ಗೆ ನಮ್ಮ ಕನ್ನಡ ಯೂಟ್ಯೂಬ್ ಚಾನಲ್’ನ ನಿರೂಪಕ ಸುಮನ್ ಶರ್ಮಾ ಸುಲಲಿತವಾಗಿ ಈ ಒಂದು ವಿಡಿಯೋದಲ್ಲಿ ವಿಶ್ಲೇಷಿಸಿದ್ದಾರೆ. ವಿಡಿಯೋ ವೀಕ್ಷಿಸಲು ಕೆಳಗೆ ಕೊಟ್ಟಿರುವ ಲಿಂಕ್ ಅನುಸರಿಸಿ.

LEAVE A REPLY

Please enter your comment!
Please enter your name here