ಬಾಲಿವುಡ್ ನಟಿ ‘ಲವ್ ಯೂ ಜಿಂದಗಿ’ ಚಿತ್ರದ ಖ್ಯಾತಿಯ ಆಲಿಯಾ ಭಟ್ ಅನೇಕ ಅಭಿಮಾನಿಗಳನ್ನು ಹೊಂದಿರುವ ನಟಿ. ಅಲಿಯಾ ಭಟ್ ಯಾರಿಗೆ ಗೊತ್ತಿಲ್ಲ ಹೇಳಿ.? ಬಾಲಿವುಡ್’ನ ಗುಳಿಕೆನ್ನೆ ಹುಡುಗಿ, ಸದ್ಯ ಬಾಲಿವುಡ್ನಲ್ಲಿ ಹಲವು ಚಿತ್ರಗಳಲ್ಲಿ ಬಿಝಿ ಇರುವ ನಟಿಯಾಗಿದ್ದಾರೆ. ಆಲಿಯಾ ತಮ್ಮ ಮಾತಲ್ಲಿ ಎಲ್ಲರ ಗಮನ ಸೆಳೆಯುವ ನಟಿ. ಸಾಮಾಜಿಕ ಜಾಲತಾಣದಲ್ಲಿ ಸದಾ ನಿರತರಾಗಿರುವ ಅಲಿಯಾ ಭಟ್, ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಒಂದು ಜಿಫ್ ಅಪ್ಲೋಡ್ ಮಾಡಿದ್ದರು. ಇದನ್ನು ದಕ್ಷಿಣ ಆಫ್ರಿಕಾ ತಂಡದ ಕ್ರಿಕೆಟಿಗ, ಸ್ಫೋಟಕ ಬ್ಯಾಟ್ಸ್ಮನ್ ‘ಹರ್ಷಲ್ ಗಿಬ್ಸ್’ ಆಲಿಯಾ ಅವರ ಜಿಫ್(GIF) ನೋಡಿ ಲೈಕ್ ಕೊಟ್ಟು ಅದನ್ನು ಶೇರ್ ಮಾಡಿದ್ದಾರೆ.

ಆಲಿಯಾ ಭಟ್ ಯಾರೆಂದು ತಿಳಿಯದಿದ್ದರೂ ಗಿಬ್ಸ್ ಅವರು ಅವರ `ಜಿಫ್’ ಶೇರ್ ಮಾಡಿದ್ದರು. ಇದನ್ನು ಗಮನಿಸಿದ ಅವರ ಅಭಿಮಾನಿಯೊಬ್ಬರು ಗಿಬ್ಸ್ಗೆ ಕೇಳಿದ್ದಾರೆ, ಸಾರ್ ನಿಮಗೆ ಅವರು ಯಾರು ಗೊತ್ತಾ? ಎಂದು ಇದಕ್ಕೆ ಉತ್ತರಿಸಿದ ಗಿಬ್ಸ್ ಇಲ್ಲ ಎಂದು ಹೇಳಿದ್ದಾರೆ. ಅದಕ್ಕೆ ಅಭಿಮಾನಿ, ಅವರು ಬಾಲಿವುಡ್ ನಟಿ ಅಲಿಯಾ ಭಟ್ ಎಂದಾಗ ಗಿಬ್ಸ್ ಅವರಿಗೆ ತಿಳಿಯಿತು ಅವರು ನಟಿ ಎಂದು. ಬಳಿಕ ಗಿಬ್ಸ್ ಮತ್ತೊಂದು ಟ್ವೀಟ್ ಮಾಡುವ ಮೂಲಕ ನೀವು ನಟಿ ಎಂದು ನನಗೆ ತಿಳಿದಿರಲಿಲ್ಲ! ಆದರೆ ನೀವು ಪೋಸ್ಟ್ ಮಾಡಿದ ಜಿಫ್ ಉತ್ತಮವಾಗಿದೆ ಎಂದು ಹೇಳಿದರು. ಇದಕ್ಕೆ ಪ್ರತಿಕ್ರಿಯಿಸಿದ ಆಲಿಯಾ ಭಟ್ ಕ್ರಿಕೆಟ್ನಲ್ಲಿ ಅಂಪೈರ್ ನೀಡುವ ಸೂಚನೆಯಂತೆ ಫೋರ್ ಸೂಚನೆಯನ್ನು ಜಿಫ್ ಮೂಲಕ ಕಳುಹಿಸಿದ್ದರು. ಇದನ್ನು ಗಮನಿಸಿದ ಗಿಬ್ಸ್ ಮೇಡಂ ನಾನು ‘ಫೋರ್ ಬಗ್ಗೆ ಗಮನ ಹರಿಸುವುದಿಲ್ಲ, ಸಿಕ್ಸರ್’ಗಳನ್ನು ಬಾರಿಸುತ್ತೇನೆ’ ಎಂದು ನಗುವಿನ ಎಮೋಜಿ ಜೊತೆಗೆ ಪ್ರತಿಕ್ರಿಯೆ ನೀಡಿದ್ದಾರೆ.