ಅಪಘಾತವಾಗಿ 40 ನಿಮಿಷಗಳ ಕಾಲ ವಿಲವಿಲ ಎಂದು ಒದ್ದಾಡಿ ಮೃತರಾದ ನಟ ಸುನಿಲ್.!

0
667

ಕನ್ನಡ ಚಿತ್ರರಂಗದ ಇತಿಹಾಸದಲ್ಲಿ ಕೆಲವು ಘಟನೆಗಳು ಕರಾಳ ನೆನಪುಗಳಾಗಿ ಉಳಿದುಕೊಂಡಿವೆ. ಅ ರೀತಿ 1994 ರಲ್ಲಿ ನಡೆದ ಒಂದು ದುರ್ಘಟನೆಯಲ್ಲಿ ಕನ್ನಡದ ಪ್ರತಿಭಾವಂತ ನಟ ಸುನೀಲ್ ಮರೆಯಾದರು. ಕನ್ನಡ ಚಲನಚಿತ್ರರಂಗದಲ್ಲಿ ಸುಂದರವಾದ ನಟರಲ್ಲಿ ಸುನೀಲ್ ಅವರು ಕೂಡ ಒಬ್ಬರು, ವೃತ್ತಿಜೀವನವನ್ನು ಪ್ರಾರಂಭಿಸಿದ ಕೆಲವೇ ವರ್ಷಗಳಲ್ಲಿ ಕನ್ನಡದ ಮಾತಾಗಿದ್ದರು ಈ ಮುದ್ದು ಮುಖದ ಪೋರ ಸುನೀಲ್.. ನಟಿಸಿದ್ದು ಬೆರಳೆಣಿಕೆ ಸಿನಿಮಾವಷ್ಟೇ .! ಆದರೆ ಸಂಪಾದಿಸಿದ್ದು ಲಕ್ಷಾಂತರ ಅಭಿಮಾನಿಗಳನ್ನು.

 

 

ಸದಾ ವಿಶಿಷ್ಟ ಹಾಗೂ ವಿಭಿನ್ನ ಸಿನಿಮಾಗಳ ಮೂಲಕ ಹೊಸಬರನ್ನು ಪರಿಚಯ ಮಾಡಿಸುವವರಲ್ಲಿ ದ್ವಾರಕೀಶ್ ಪ್ರೋಡಕ್ಷನ್ ಮೇಲುಗೈ ಸಾಧಿಸಿದೆ. ಅಂತೆಯೇ 1990 ರಲ್ಲಿ ತೆರೆಕಂಡ ಶೃತಿ ಎಂಬ ಚಿತ್ರಕ್ಕೆ ನಾಯಕನ ಹುಡುಕಾಟದಲ್ಲಿ ಇದ್ದರು, ಆಗ ಅವರ ಕಣ್ಣಿಗೆ ಬಿದ್ದಿದ್ದೇ ಕರಾವಳಿಯ ಚೆಲುವ ಸುನೀಲ್..
ದ್ವಾರಿಕೀಶ್ ಅವರೇ ನಿರ್ದೇಶಿಸಿ, ನಿರ್ಮಿಸಿದ ಈ ಚಿತ್ರದಲ್ಲಿ ಹೊನ್ನವಳ್ಳಿ ಕೃಷ್ಣ, ಸುನೀಲ್ ದಿಲೀಪ್ , ಇಂದೂದರ್ ಮತ್ತು ಶ್ರೀವತ್ಸ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದರು. ಆದರೆ ಈ ನಾಲ್ಕು ಜನ ನಾಯಕ ನಟರಲ್ಲಿ ಸುನೀಲ್ ಅವರ ಪಾತ್ರವೇ ಹೈಲೈಟ್ ಎಂದರೆ ತಪ್ಪಾಗಲಾರದು. ಈ ಸಿನಿಮಾ ಬಾಕ್ಸಾಫೀಸ್ ನಲ್ಲಿ ಉತ್ತಮ ಗಳಿಕೆಯನ್ನು ಪಡೆದುಕೊಂಡು ಸುನೀಲ್ ಅವರಿಗೆ ಜನಪ್ರಿಯತೆಯನ್ನು ತಂದುಕೊಟ್ಟಿತ್ತು.

 

 

ಶ್ರುತಿ ಚಿತ್ರದಿಂದ ಪ್ರಾರಂಭವಾದ ಸುನಿಲ್ ಅವರ ಸಿನಿ ಪಯಣ ತದನಂತರ, ಸಾಕಷ್ಟು ಸಿನಿಮಾಗಳಲ್ಲಿ ನಟಿಸುವ ಅವಕಾಶಗಳನ್ನು ಗಿಟ್ಟಿಸಿಕೊಂಡರು. ಬೆಳ್ಳಿ ಕಾಲುಂಗುರ, ಮಾಂಗಲ್ಯ, ನಗು ನಗುತಾ ನಲಿ, ನಗರದಲ್ಲಿ ನಾಯಕರು, ಸಿಡಿದೆದ್ದ ಶಿವ ಹೀಗೆ ಹತ್ತು ಹಲವು ಸಿನಿಮಾಗಳಲ್ಲಿ ಅಭಿನಯಿಸಿದ ಸುನಿಲ್ ತೆಲುಗು ಚಿತ್ರರಂಗದಲ್ಲೂ ತಮ್ಮ ಅದೃಷ್ಟ ಪರೀಕ್ಷೆಗೆ ಮುಂದಾದರು.

 

 

ಮಾಲಾಶ್ರೀ ಮತ್ತು ಸುನೀಲ್ ಅವರ ಜೋಡಿ ಆ ಸಮಯದಲ್ಲಿ ಕನ್ನಡ ಚಿತ್ರರಂಗದ ಮೋಸ್ಟ್ ಫೇವರಿಟ್ ಜೋಡಿಯಾಗಿತ್ತು. ಇವರು ಒಟ್ಟಾಗಿ ಅಭಿನಯಿಸಿದ ಚಿತ್ರಗಳು ಅವರಿಗೆ ಸಾಕಷ್ಟು ಜನಪ್ರಿಯತೆ ತಂದುಕೊಟ್ಟಿತ್ತು. ತೆರೆಯ ಮೇಲೆ ಮೋಡಿ ಮಾಡಿದ್ದ ಈ ಜೋಡಿ ನಿಜಜೀವನದಲ್ಲಿ ಒಂದಾಗಬೇಕು ಎಂದು ಅದೆಷ್ಟೋ ಅಭಿಮಾನಿಗಳು ಕನಸು ಕಂಡಿದ್ದರು. ಅಂತೆಯೇ ಸುನೀಲ್ ಮತ್ತು ಮಾಲಾಶ್ರೀ ಪ್ರೇಮದಲ್ಲಿದ್ದಾರೆ ಎಂಬ ವಿಷಯ ಸಿನಿಮಾ ರಂಗದಲ್ಲಿ ಹರಡಿತ್ತು. ಮೂಲಗಳ ಪ್ರಕಾರ ತಾವು ವಿವಾಹವಾಗುತ್ತೇನೆ ಎಂದು ಹೇಳಿಕೊಂಡಿದ್ದರಂತೆ…

 

 

ಆದರೆ ವಿಧಿಯ ಆಟವೇ ಬೇರೆಯಾಗಿತ್ತು. ಬಾಗಲಕೋಟೆಯಲ್ಲಿ ಸಿನಿಮಾದ ಚಿತ್ರೀಕರಣವನ್ನು ಮುಗಿಸಿದ್ದು, ಈ ಜೋಡಿ ಒಂದು ವರ್ಣರಂಜಿತ ಕಾರ್ಯಕ್ರಮಕ್ಕೆ ಹಾಜರಾಗಿದ್ದರು. ತಡ ರಾತ್ರಿಯಾದ ಕಾರಣ ಅಲ್ಲೇ ಇದ್ದು, ಬೆಳಿಗ್ಗೆ ಬೆಂಗಳೂರಿಗೆ ಹೊರಡೋಣ ಎಂದು ನಿರ್ಧರಿಸಿದ್ದರು. ಆದರೆ ಸುನೀಲ್ ಅವರ ವಾಹನ ಚಾಲಕ ಇಂದು ನನ್ನ ಮಗನ ಜನ್ಮದಿನ ಇವತ್ತೇ ಹೊರಡೋಣ ಎಂದು ಒತ್ತಾಯಿಸಿದ್ದರಂತೆ. ಚಾಲಕನ ಮಾತಿಗೆ ಒಪ್ಪಿದ ಈ ಜೋಡಿ ಹೊರಡಲು ಸಿದ್ಧವಾದರು.

 

 

ಅಂತೆಯೇ ಚಿತ್ರದುರ್ಗದ ಬಳಿ ಕಾರಿನಲ್ಲಿ ನಟ ಸುನೀಲ್, ನಟಿ ಮಾಲಾಶ್ರೀ ಹಾಗೂ ಸುನೀಲ್ ಸಹೋದರ ಸಚ್ಚಿನ್ ಪ್ರಯಾಣ ಮಾಡುತ್ತಿದ್ದರು. ಈ ವೇಳೆ ಅವರ ಕಾರಿಗೆ ಎದುರಿನಿಂದ ಬಂದ ಲಾರಿ ಡಿಕ್ಕಿ ಹೊಡೆದಿತ್ತು.

ಚಿತ್ರದುರ್ಗದಿಂದ 13 ಕಿಲೋ ಮೀಟರ್ ದೂರದಲ್ಲಿ ಇರುವ ಮಾದನಾಯಕನ ಹಳ್ಳಿಯಲ್ಲಿ ಈ ಅಪಘಾತ ನಡೆದಿತ್ತು. ಘಟನೆಯಲ್ಲಿ ಕಾರಿನ ಚಾಲಕ ಕೃಷ್ಣ ಸ್ಥಳದಲ್ಲಿಯೇ ಮೃತಪಟ್ಟರು. ಸುನೀಲ್ ಅವರ ಎರಡು ಕಾಲುಗಳಿಗೆ ಬಲವಾದ ಹೊಡೆತ ಬಿದ್ದಿತ್ತು. ನಂತರ ಚಿತ್ರದುರ್ಗದ ಆಸ್ಪತ್ರೆಯಲ್ಲಿ ನಿಧನ ಹೊಂದಿದರು. ನಟಿ ಮಾಲಾಶ್ರೀ ತಲೆಗೆ ಪೆಟ್ಟು ಬಿದ್ದು, ಅವರು ಹಾಗೂ ಸುನೀಲ್ ಸಹೋದರ ಅಪಾಯದಿಂದ ಪಾರಾದರು.

 

 

ದುಃಖಕರ ವಿಷಯವೇನೆಂದರೆ ಅಪಘಾತವಾದ ನಂತರ ನಲವತ್ತು ನಿಮಿಷಗಳ ಕಾಲ ಸುನೀಲ್ ಸಾವು ಬದುಕಿನ ಮಧ್ಯೆ ಹೋರಾಡುತ್ತಿದ್ದರು. ಆದರೆ ಸುನೀಲ್ ಅವರನ್ನು ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಈ ಸಾವಿನಿಂದ ಚಿತ್ರರಂಗ ಬಹಳ ಭಾವುಕದಿಂದ ಕೂಡಿತ್ತು.

 

 

ಸುನೀಲ್ ಅವರ ಸಮಾಧಿಯಲ್ಲಿ ಒಂದು ಮರವನ್ನು ನೆಟ್ಟಿದ್ದ ಸುನಿಲ್ ತಾಯಿ, ಈಗಲೂ ಕೂಡ ಆ ಮರವನ್ನೆ ತನ್ನ ಮಗ ಎಂದು ನಂಬಿ ಜೀವನ ಸಾಗಿಸುತ್ತಿದ್ದಾರೆ.! ಮಗನ ಸಾವಿನಿಂದ ಮನ ನೊಂದಿರುವ ಆ ವಯಸ್ಸಾದ ತಾಯಿ, ನನ್ನ ಮಗನ ಸಾವಿಗೆ ಇಲ್ಲಸಲ್ಲದ ಬಣ್ಣಗಳನ್ನು ಕಟ್ಟಬೇಡಿ, ಇಡೀ ಚಿತ್ರರಂಗ ನನ್ನ ಮಗನ ಜೊತೆ ಆತ್ಮೀಯವಾಗಿತ್ತು. ಅವನ ಸಾವು ಆಕಸ್ಮಿಕ ,ಅವನ ಹಣೆಯಲ್ಲಿ ಬರೆದದ್ದು ಇಷ್ಟೇ ಇದು ವಿಧಿಲಿಖಿತ..ಎಂದು ಭಾವುಕರಾಗಿದ್ದಾರೆ.

 

 

ಏನೇ ಹೇಳಿ ಚಿತ್ರರಂಗದಲ್ಲಿ ಈಗ ತಾನೆ ಅರಳುತ್ತಿದ್ದ ಸುನೀಲ್ ಎಂಬ ಹೂವು ಆದಷ್ಟು ಬೇಗ ಬಾಡಿ ಹೋಗಿದ್ದು ಬೇಸರದ ವಿಷಯ.

LEAVE A REPLY

Please enter your comment!
Please enter your name here