ನಟ ಸುನೀಲ್ ಕಾರ್ ಅಪಘಾತ ಹೇಗಾಯ್ತು ಗೊತ್ತಾ…! ನಲವತ್ತು ನಿಮಿಷ ಒದ್ದಾಡಿ ಪ್ರಾಣ ಬಿಟ್ಟರೂ ಸುನೀಲ್!

0
205

ಸುನೀಲ್ ಕನ್ನಡ ಚಿತ್ರರಂಗ ಕಂಡ ಅತ್ಯಂತ ಸುಂದರ ನಟರಲ್ಲಿ ಒಬ್ಬರು
ತಾನು ಬದುಕಿದ್ದ ಕೆಲವೇ ವರ್ಷಗಳಲ್ಲಿ ಕನ್ನಡಿಗರ ಹೃದಯ ಗೆದ್ದ ಮುದ್ದು ಮುಖದ ಚೆಲುವ ಸುನೀಲ್ ಅವರು ಅಭಿನಯಿಸಿದ್ದು ಬೆರಳೆಣಿಕೆಯ ಚಿತ್ರಗಳಲ್ಲಿ ಮಾತ್ರ ಆದರೆ ನಟ ಸುನಿಲ್ ಸಂಪಾದಿಸಿದ್ದು ಅಪಾರ ಅಭಿಮಾನಿಗಳ ಪ್ರೀತಿಯನ್ನು ಎಂದರೆ ತಪ್ಪಾಗುವುದಿಲ್ಲ. 1991 ರಲ್ಲಿ ನಟ ನಿರ್ಮಾಪಕ ದ್ವಾರಕೀಶ್ ತಾವೇ ನಿರ್ದೇಶನ ಮಾಡಿದ್ದ ಶ್ರುತಿ ಎಂಬ ಚಿತ್ರಕ್ಕೆ ನಾಯಕರ ಹುಡುಕಾಟದಲ್ಲಿದ್ದಾಗ ದ್ವಾರಕೀಶ್ ಅವರ ಕಣ್ಣಿಗೆ ಬಿದ್ದಿದ್ದೇ ಈ ಕರಾವಳಿಯ ಚೆಲುವ ಸುನೀಲ್ ಈ ಚಿತ್ರದ ನಾಲ್ಕು ಜನ ನಾಯಕರಲ್ಲಿ ಅವರದ್ದೇ ಪ್ರಮುಖ ಅಟ್ರಾಕ್ಷನ್ ಎಂದರೆ ತಪ್ಪಾಗಲಾರದು
ಶ್ರುತಿ ಮುಖ್ಯಭೂಮಿಕೆಯಲ್ಲಿದ್ದ ಈ ಚಿತ್ರ ಜನಮನ್ನಣೆಯನ್ನು ಗಳಿಸಿತ್ತು ಜೊತೆಗೆ ಸುನೀಲ್ ಎಂಬ ನಟ ಜನಮಾನಸದಲ್ಲಿ ಹಚ್ಚೋಡೆದಿದ್ದರು.

ಅಲ್ಲಿಂದ ಶುರುವಾದ ಸುನೀಲ್ ಪಯಣ ಹಿಂತಿರುಗಿ ನೋಡಲಿಲ್ಲ ಒಂದರ ಹಿಂದೆ ಒಂದಂತೆ ಸಾಕಷ್ಟು ಅವಕಾಶಗಳು ಸುನೀಲ್ ಅವರನ್ನು ಹುಡುಕಿಕೊಂಡು ಬಂದವು ಇದಾದ ನಂತರ ಹತ್ತು ಹಲವು ಚಿತ್ರಗಳಲ್ಲಿ ನಟಿಸಿದ ಸುನೀಲ್ ಬೆಳ್ಳಿ ಕಾಲುಂಗುರ , ಮಾಂಗಲ್ಯ, ನಗುನಗುತ್ತಾ ನಲಿ , ಸಿಡಿದೆದ್ದ ಶಿವ , ನಗರದಲ್ಲಿ ನಾಯಕರು , ಹಳ್ಳಿ ಕೃಷ್ಣ ಹೀಗೆ ಮುಂತಾದ ಸಿನಿಮಾಗಳಿಗೆ ಅಭಿನಯಿಸಿದ ಸುನೀಲ್
ತೆಲುಗು ಚಿತ್ರರಂಗದಲ್ಲಿ ಕೂಡ ತಮ್ಮ ಅದೃಷ್ಟ ಪರೀಕ್ಷೆಯನ್ನು ನಡೆಸಿದ್ದರು
ಅದರಲ್ಲೂ ಮಾಲಾಶ್ರೀ ಜೊತೆ ಸುನೀಲ್ ಅಭಿನಯಿಸಿದ ಕೆಲವು ಚಿತ್ರಗಳು ಬಹಳಷ್ಟು ಖ್ಯಾತಿ ತಂದುಕೊಟ್ಟಿದ್ದವು
ತೆರೆ ಮೇಲೆ ಸುನೀಲ್ ಮತ್ತು ಮಾಲಾಶ್ರೀ ಜೋಡಿ ಸಾಕಷ್ಟು ಮೋಡಿ ಮಾಡಿತ್ತು. ಹಲವರಂತೂ ಮಾಲಾಶ್ರೀ ಹಾಗೂ ಸುನಿಲ್ ಅವರು ನಿಜ ಜೀವನದಲ್ಲಿ ಜೋಡಿಯಾದರೆ ಎಷ್ಟು ಚೆಂದ ಅಂತ ಮಾತನಾಡಿಕೊಂಡಿದ್ದು ಉಂಟು ಮೂಲಗಳ ಪ್ರಕಾರ ಸುನೀಲ್ ಮತ್ತು ಮಾಲಾಶ್ರೀ ಪರಸ್ಪರ ಪ್ರೀತಿಸಲು ಶುರು ಮಾಡಿದ್ದರು ಆದರೆ ವಿಧಿಯ ಆಟವೇ ಬೇರೆಯಾಗಿತ್ತು ಬಾಗಲಕೋಟೆಯಲ್ಲಿ ಸಿನಿಮಾ ಚಿತ್ರೀಕರಣ ಮುಗಿಸಿದ ನಂತರ ಒಂದು ವರ್ಣರಂಜಿತ ಕಾರ್ಯಕ್ರಮ ಮುಗಿಸಿ ಸುನೀಲ್ ಮತ್ತು ಮಾಲಾಶ್ರೀ ಆ ದಿನ ತಡವಾದ ಕಾರಣ ಅಲ್ಲೆ ಉಳಿದುಕೊಂಡು ಬೆಳಗ್ಗೆ ಬೆಂಗಳೂರಿಗೆ ತೆರಳಲು ಚಿಂತಿಸಿದ್ದರು
ಆದರೆ ಸುನೀಲ್ ಅವರ ಕಾರಿನ ಡ್ರೈವರ್ ಇಂದು ನನ್ನ ಮಗನ ಜನ್ಮದಿನ ನಾನು ಇವತ್ತೇ ಹೋಗಬೇಕು ಅಂತ ಸುನೀಲ್ ಬಳಿ ವಿನಂತಿಸಿಕೊಂದಿದ್ದರು
ಆಗ ಮಾಲಾಶ್ರೀ ಮತ್ತು ಸುನೀಲ್ ಇಬ್ಬರೂ ಕೂಡ ಸರಿ ಈಗಲೇ ಬೆಂಗಳೂರಿಗೆ ಹೋಗೋಣ ಅಂತ ತಯಾರಾದರು. ವಿಧಿಯ ಕೈವಾಡ ಅಂದು ರಸ್ತೆಯಲ್ಲಿ ಜವರಾಯ ಕಾದು ಕುಳಿತಿದ್ದ ನಟ ಸುನೀಲ್ ಪ್ರಾಣವನ್ನು ಹಾರಿಸಿಕೊಂಡು ಹೋಗಲು ಕಾದಿಕೊಂಡಿದ್ದ.

ಬಾಗಲಕೋಟೆಯಿಂದ ಬೆಂಗಳೂರಿಗೆ ಹೊರಟ ಕೆಲವು ಗಂಟೆಗಳ ನಂತರ ಸುನಿಲ್ ಪ್ರಯಾಣ ಮಾಡುತ್ತಿದ್ದ ಕಾರು ವೇಗದಲ್ಲಿ ಇದ್ದ ಕಾರಣ
ಚಾಲಕನ ನಿಯಂತ್ರಣ ತಪ್ಪಿ ದೊಡ್ಡ ಲಾರಿಯೊಂದಕ್ಕೆ ಅಪ್ಪಳಿಸಿತ್ತು ಅಪಘಾತದ ನಂತರ 40 ನಿಮಿಷಗಳ ಕಾಲ ಇದ್ದ ಸುನೀಲ್ ಅವರ ಪ್ರಾಣಪಕ್ಷಿ ಹಾರಿಹೋಗಿತ್ತು. ಅದೃಷ್ಟವಶಾತ್ ಮಾಲಾಶ್ರೀ ಪ್ರಾಣಾಪಾಯದಿಂದ ದೂರಾದರು ಮಾಲಾಶ್ರೀ ಹಾಗೂ ನಿರ್ಮಾಪಕರಿಗೆ ಗಾಯಗಳಾದರೂ ಪ್ರಾಣಾಪಾಯದಿಂದ ಪಾರಾದರು ಆದರೆ ಸುನೀಲ್ ಮತ್ತು ಅವರ ಕಾರಿನ ಡ್ರೈವರ್ ಸಾವನ್ನಪ್ಪಿದ್ದರು.

ಸುನೀಲ್ ಅವರ ವಯಸ್ಸಾದ ತಾಯಿ ಈಗಲೂ ಸುನೀಲ್ ಸಮಾಧಿಯಲ್ಲಿ ಬೆಳೆದ ಮರಕ್ಕೆ ನೀರು ಹಾಕುತ್ತಾ ಸುನೀಲ್ ನೆನಪಿನಲ್ಲಿ ಜೀವನ ಸಾಗಿಸುತ್ತಿದ್ದಾರೆ ಮಗನ ಸಾವಿನ ಬಗ್ಗೆ ಮನನೊಂದು ಮಾತನಾಡುವ ಅವರು ನನ್ನ ಮಗನ ಸಾವಿಗೆ ಇಲ್ಲಸಲ್ಲದ ಬಣ್ಣ ಕಟ್ಟುವುದು ಬೇಡ ಇಡೀ ಚಿತ್ರರಂಗದ ನನ್ನ ಮಗನ ಜೊತೆ ಬಹಳ ಚೆನ್ನಾಗಿತ್ತು ಅವನ ಸಾವು ಆಕಸ್ಮಿಕ ಅವನ ಹಣೆಬರಹ ಅಷ್ಟೇ ಅವನು ಯಾವತ್ತಿಗೂ ನನ್ನ ಮನಸ್ಸಿನಲ್ಲಿ ಇದ್ದಾನೆ ಅಂತ ಭಾವುಕರಾಗುತ್ತಾರೆ .ಸುನೀಲ್ ಎಂಬ ಹೂವು ಚಿತ್ರರಂಗದಲ್ಲಿ ಅರಳುವ ಮುನ್ನವೇ ಬಾಡಿ ಹೋಗಿದ್ದು ಮಾತ್ರ ಕನ್ನಡ ಚಿತ್ರರಂಗದ ಕರಾಳ ಅಧ್ಯಾಯಗಳಲ್ಲಿ ಒಂದು.

ಮತ್ತಷ್ಟು ಸುದ್ದಿಗಳನ್ನು ಓದಲು ನಮ್ಮ ಪೇಜ್ ಲೈಕ್ ಮಾಡಿ ಹಾಗೂ ಸುನೀಲ್ ಅವರ ಬಗ್ಗೆ ನಿಮ್ಮ ಅನಿಸಿಕೆಯನ್ನು ಕಾಮೆಂಟ್ ಮೂಲಕ ತಿಳಿಸಿ
ಧನ್ಯವಾದಗಳು

LEAVE A REPLY

Please enter your comment!
Please enter your name here