ಇತ್ತೀಚಿಗೆ ಬಿಡುಗಡೆಗೊಂಡಿದ್ದ ಕೆಂಪೇಗೌಡ 2 ಚಿತ್ರದಲ್ಲಿ ದಕ್ಷ ಅಧಿಕಾರಿಯ ಪಾತ್ರದಲ್ಲಿ ನಟಿಸಿದ್ದ ಕೋಮಲ್ ಅವರು ಇಗ ಮತ್ತೊಂದು ಹೊಸ ವೆನಚ್ಚರ್ನಲ್ಲಿ ಪ್ರೇಕ್ಷಕರ ಎದರು ಬರಲು ಎಲ್ಲ ರೀತೀಯ ತಯಾರಿಗಳನ್ನು ಮಾಡಿಕೊಂಡಿದ್ದಾರೆ. ಹೌದು, ಕೆಂಪೇಗೌಡ 2 ಚಿತ್ರದಲ್ಲಿ ಸಾಕಷ್ಟು ಉತ್ತಮವಾಗಿ ನಟಿಸಿದ್ದ, ಕೋಮಲ್ ಅವರು ಪ್ರೇಕ್ಷಕರ ಮನ ತಲುಪುವಲ್ಲಿ ಒಂದು ಮಟ್ಟಕ್ಕೆ ಸೋತರು ಎನ್ನಬಹುದು.
ಕೆಂಪೇಗೌಡ 2 ಚಿತ್ರಕ್ಕಾಗಿ ಕೋಮಲ್ ಅವರು ತಮ್ಮ ದೇಹವನ್ನು ಹುರಿಗೊಳಿಸಿದ್ದರು, ಜೊತೆಗೆ ಕಾಮಿಡಿ ಜಾನರ್ನಲ್ಲಿ ನಟಿಸುತ್ತಿದ್ದ ಅವರು ಕೆಂಪೇಗೌಡ 2 ಮೂಲಕ ಖಡಕ್ ಅಧಿಕಾರಿಯಾಗಿ ನಟಿಸಿದ್ದರು. ಈ ಚಿತ್ರದ ಬಳಿಕ ಕೋಮಲ್ ಅವರು ಎಲ್ಲೂ ಹೆಚ್ಚಾಗಿ ಯಾವುದೇ ಸಂದರ್ಶನದಲ್ಲೂ ಕಾಣಿಸಿಕೊಳ್ಳಲಿಲ್ಲ. ಈಗ `ಕೊಂಗ್ಕಾ ಪಾಸ್’ ಎಂಬ ವಿಶೀಷ್ಟ ಶೀರ್ಷಿಕೆ ಮೂಲಕ ತಮ್ಮ ಹೊಸ ಚಿತ್ರದ ಸುಳಿವನ್ನು ಬಿಟ್ಟುಕೊಟ್ಟಿದ್ದಾರೆ ನಟ ಕೋಮಲ್ ಕುಮಾರ್.
ಟೈಟಲ್ ಈಗಾಗಲೇ ಅನೇಕರಲ್ಲಿ ಸಾಕಷ್ಟು ಕೂತೂಹಲ ಮೂಡಿಸಿದೆ ಎಂದರೆ ತಪ್ಪಾಗಲಾರದು. ಇನ್ನೊಂದು ವಿಶೇಷತೆ ಎಂದರೆ `ಕೊಂಗ್ಕಾ ಪಾಸ್’ ಚಿತ್ರವನ್ನು ಸ್ವತಃ ಕೋಮಲ್ ಅವರೆ ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ. ಜೊತೆಗೆ ಚಿತ್ರದ ಕಥೆ ಹಾಗೂ ಸ್ಕ್ರೀನ್ ಪ್ಲೇ ಕೂಡ ಅವರೆ ಮಾಡಿರುವುದು ನಿಜಕ್ಕೂ ಖುಷಿ ಪಡುವ ಸಂಗತಿ ಎನ್ನಬಹುದು. ಭಾರತ ಹಾಗೂ ಚೀನಾ ಬಾರ್ಡರ್ ಸುತ್ತ ಕಥೆ ಸುಳಿಯಲಿದೆ ಹಾಗೂ ಬಾರ್ಡರ್ನಲ್ಲಿ ಯೋಧರ ಕಾರ್ಯವನ್ನು ಪ್ರರ್ದಶಿಸಲಿದೆ ಕೊಂಗ್ಕಾ ಪಾಸ್. ಈ ಚಿತ್ರವನ್ನು ಮೋಹನ್ ಅವರು ನಿರ್ದೇಶಿಸಲಿದ್ದಾರೆ.